Sunday, November 2, 2008

ಭಟ್ಕಳ ಭಟ್ಟರ ಅಂಗ­ಳ­ದಲ್ಲಿ ಘಮ ಘಮ ಮಲ್ಲಿಗೆ


ಸುಮ­ಧುರ ಪರಿ­ಮ­ಳಕ್ಕೆ ಮತ್ತೊಂದು ಹೆಸರು ಮಲ್ಲಿಗೆ. ಶೃಂಗಾರ ಹಾಗೂ ರಸಿ­ಕತೆ ಪ್ರದ­ರ್ಶಿ­ಸಲು ಮಲ್ಲಿಕಾ ಪುಷ್ಪ­ವಿ­ದ್ದರೆ ಸಾಕು. ಅಲಂ­ಕಾ­ರ­ದಿಂದ ಹಿಡಿದು ಸುಗಂಧ ದ್ರವ್ಯ ಪ್ರಾಮು­ಖ್ಯತೆ ಪಡೆ­ದಿ­ರುವ ಹೂ ಮಲ್ಲಿಗೆ. ಮೈಸೂರು ಮಲ್ಲಿಗೆ ಜಗ­ತ್ಪ್ರ­ಸಿದ್ಧ. ಅದ­ರಂತೆ ಉಡುಪಿ, ಮಂಗ­ಳೂರು, ಭಟ್ಕಳ ಮಲ್ಲಿಗೆ ಕೂಡಾ.
ಕರಾ­ವಳಿ ಪ್ರದೇ­ಶ­ದಲ್ಲಿ ಪ್ರಾಂತೀ­ಯ­ವಾಗಿ ಒಂದೊಂದು ಹೆಸ­ರನ್ನು ಮಲ್ಲಿಗೆ ಪಡೆ­ದು­ಕೊ­ಳ್ಳುತ್ತ ಹೋಗಿದೆ. ಆದರೆ ಇಲ್ಲಿ­ರುವ ತಳಿ­ಗ­ಳೆಲ್ಲ ಒಂದೇ ಅದು ವಸಂತ ಮಲ್ಲಿಗೆ. ಈ ಪುಷ್ಪ ಕೃಷಿ­ಯನ್ನು ಕರ್ನಾ­ಟ­ಕದ ಸುಮಾರು ನಾಲ್ಕು ಸಾವಿರ ಹೆಕ್ಟೇರ್‌ ಪ್ರದೇ­ಶ­ದಲ್ಲಿ ಬೆಳೆ­ಯು­ತ್ತಿ­ದ್ದಾರೆ. ಇಂತಿ­ರುವ ಮಲ್ಲಿಗೆ ಕೃಷಿ­ಯನ್ನು ಯಶ­ಸ್ವಿ­ಯಾಗಿ ಮಾಡು­ತ್ತಿ­ರುವ ಬೆಳೆ­ಗಾರ ಉತ್ತರ ಕನ್ನಡ ಮೂಡು ಭಟ್ಕ­ಳದ ಮಂಜು­ನಾಥ ಭಟ್ಟರು.
ಮೂಲತಃ ಅಡಿಕೆ ಕೃಷಿ­ಕ­ರಾದ ಇವರು, ಅಡಿ­ಕೆಯ ಚೊಗ­ರಿ­ಗಿಂತ ಬೇರೆ ಕೃಷಿ ಮಾಡುವ ಆಸೆ ಆಕಾಂ­ಕ್ಷೆ­ಯಿಂದ ಮಲ್ಲಿಗೆ ಕೃಷಿ­ಯನ್ನು ಆಯ್ಕೆ­ಮಾ­ಡಿ­ಕೊಂ­ಡರು. ಅವರ ಈ ಕೃಷಿ ಆಯ್ಕೆ ಹಲ­ವರ ನಗೆಗೆ ಕಾರ­ಣ­ವಾ­ಯಿತು. ಏನೇ ಆಗಲಿ ಮಲ್ಲಿಗೆ ಕೃಷಿ ಮಾಡುವ ಹುಮ್ಮ­ಸ್ಸೆಂತು ಇತ್ತು. ಮೊದಲು ಇವರು ಮಲ್ಲಿಗೆ ಕೃಷಿ­ಯನ್ನು ಪ್ರಾರಂ­ಭಿ­ಸಿದ್ದು ಕೇವಲ ಹನ್ನೆ­ರಡು ಗುಂಟೆ ಜಾಗ­ದಲ್ಲಿ!
ಅನು­ಭ­ವ­ವಿ­ಲ್ಲದ ಹೊಸ ಕೃಷಿ. ಮಾರು­ಕಟ್ಟ ಬಗ್ಗೆ ಏನೂ ಗೊತ್ತಿಲ್ಲ. ಕೃಷಿ ಪ್ರಾರಂ­ಭ­ವಾ­ಯಿತು. ಮೊದಲ ವರ್ಷದ ಆದಾಯ ನಕ್ಕ­ವರ ಬಾಯಿ ಮುಚ್ಚಿ­ಸಿತು. ಮರು ವರ್ಷವೇ ಮಲ್ಲಿಗೆ ಕೃಷಿಯ ವಿಸ್ತ­ರ­ಣೆ­ಗಾಗಿ ಅರ್ಧ ಎಕರೆ ಜಮೀ­ನನ್ನು ಖರೀ­ದಿ­ಸಿ­ದರು.
ಭಟ್ಟರ ಮಲ್ಲಿಗೆ ಕೃಷಿ ಹೀಗೆ..
ಮಂಜು­ನಾಥ ಅವ­ರದ್ದು ಲೆಕ್ಕಾ­ಚಾ­ರದ ಕೃಷಿ. ಒಟ್ಟು ಮೂವ­ತ್ತೆ­ರಡು ಗುಂಟೆ­ಯಲ್ಲಿ ವ್ಯವ­ಸ್ಥಿತ ಮಲ್ಲಿಗೆ ಬೇಸಾಯ. ಇದ­ರಲ್ಲಿ ಒಟ್ಟು ಒಂದು ಸಾವಿರ ಮಲ್ಲಿಗೆ ಗಿಡ­ಗಳು. ನಾಟಿ ಮಾಡು­ವಾಗ ಹೇಗಾ­ಯಿತು ಹಾಗೆ ನೆಡದೇ ಸಾಲಿಂದ ಸಾಲಿಗೆ 6 ಆಡಿ ಗಿಡ­ದಿಂದ ಗಿಡಕ್ಕೆ 6 ಅಡಿ ಅಂತ­ರ­ದಲ್ಲಿ ನಾಟಿ. ಆರೋ­ಗ್ಯ­ವಂತ ಬಲಿತ ಮಲ್ಲಿಗೆ ಗಿಡ­ದಿಂದ ಮಧ್ಯಮ ಪ್ರಾಯದ ಕುಡಿ­ಯನ್ನು ಆಯ್ಕೆ, ಒಂದು ಅಡಿ ಆಳ, ಅಗ­ಲದ ಗುಣಿಗೆ ಗೊಬ್ಬರ ಮಿಶ್ರಣ ಮಾಡಿ ಐದಾರು ಕುಡಿ­ಗ­ಳನ್ನು ನೆಡು­ತ್ತಾರೆ. ಒಂದು ಕುಡಿ ಸತ್ತರು ಮತ್ತೊಂದು ಕುಡಿ ಬದು­ಕು­ತ್ತದೆ.
ಸ್ವಲ್ಪ ಇಳಿ­ಜಾರು ಪ್ರದೇ­ಶ­ದಲ್ಲಿ ಇವರ ಮಲ್ಲಿಗೆ ತೋಟ­ವಿದ್ದು, ಇದ­ಕ್ಕಾಗಿ ಇವರು ಎರಡು ಸಾಲು­ಗಳ ಮಧ್ಯೆ ಕಿರು ಬಸಿ ಕಾಲು­ವೆ­ಯನ್ನು ಮಾಡಿ­ದ್ದರೆ. ಇದ­ರಿಂದ ಭೂಮಿ ತಂಪನ್ನು ಕಾದಿ­ರಿಸಿ ಕೊಂಡಿ­ರು­ತ್ತದೆ. ದಿನಕ್ಕೆ ಎರಡು ತಾಸು ನೀರನ್ನು ಬಿಡು­ತ್ತಾರೆ. ಅದು ಮೇ ತಿಂಗ­ಳಿ­ನಲ್ಲಿ ಮಾತ್ರ. ತಿಂಗ­ಳಿ­ಗೊಂದು ಬಾರಿ ಸಗಣಿ ರಾಡಿ­ಯನ್ನು ಗಿಡದ ಬುಡಕ್ಕೆ ಹಾಕು­ತ್ತಾರೆ. `ಮ­ಲ್ಲಿಗೆ ಹೂ ಉತ್ತ­ಮ­ವಾಗಿ ಬಿಡ­ಬೇ­ಕೆಂ­ದರೆ ಸಗಣಿ ರಾಡಿ ಮುಖ್ಯ. ಹೆಚ್ಚಿಗೆ ಹೂ ಬೇಕೆಂ­ದರೆ ಇಪ್ಪ­ತೆ­ರಡು ದಿನಕ್ಕೆ ರಾಡಿ (ಸ್ಲರಿ)ಯನ್ನು ಹಾಕ­ಬೇಕು' ಎನ್ನು­ವುದು ಭಟ್ಟರ ಸ್ವನು­ಭ­ವದ ಮಾತು.
ಇವರು ಯಾವುದೇ ತರ­ಹದ ರಾಸಾ­ಯ­ನಿ­ಕ­ವನ್ನು ಗಿಡದ ಪೋಷ­ಕಾಂ­ಸ­ಕ್ಕಾಗಿ ಬಳ­ಸದೆ ಇರು­ವುದು ವಿಶೇಷ. ಮಲ್ಲಿ­ಗೆಗೆ ಹಲ­ವಾರು ರೋಗ, ಕೀಟ ಭಾದೆ­ಯಿ­ದ್ದರು ಭಟ್ಟರ ಮಲ್ಲಿಗೆ ತೋಟ­ದಲ್ಲಿ ಕಂಡಿದ್ದು ವಿರಳ. ಒಂದೊಮ್ಮೆ ಬಂದರು ವಿಜ್ಞಾ­ನಿ­ಗಳ ಶಿಫಾ­ರಸ್ಸು ಪಡೆದು ಸಿಂಪ­ಡಿ­ಸು­ತ್ತಾರೆ.
ಕೊಯ್ಲು ಮತ್ತು ಆದಾಯ
ನಾಟಿ ಮಾಡಿದ ವರ್ಷವೇ ಮಲ್ಲಿಗೆ ಕೊಯ್ಲಿಗೆ ಬರು­ತ್ತದೆ. ಸೂರ್ಯ ಉದ­ಯಿ­ಯಿ­ಸುವ ಮೊದಲೇ ಮಲ್ಲಿಗೆ ಹೂಗ­ಳನ್ನು ಕೊಯ್ಲು ಮಾಡು­ತ್ತಾರೆ. ನಂತರ ಕೊಯ್ದರೆ ಹೂವಿನ ಗುಣ­ಮಟ್ಟ ಕುಂಟಿ­ತ­ವಾ­ಗು­ತ್ತದೆ. ಬೆಳಿಗ್ಗೆ ಕೊಯ್ಯದೆ ಉಳಿ­ದಿ­ರುವ ಹೂಗ­ಳನ್ನು ಸಾಯಂ­ಕಾಲ ಕೊಯ್ಲು ಮಾಡು­ತ್ತಾರೆ. ಹೂ ಕೊಯ್ಯ­ಲಿಕ್ಕೆ ಮನೆಯ ಹತ್ತಿ­ರದ ಹೆಮ್ಮ­ಕ್ಕಳು ಬರು­ತ್ತಾರೆ. ಇವರು ಒಂದು ಮೊಳ ಹೂ ಕೊಯ್ದು ಮಾಲೆ ಮಾಡಿ ಕೊಟ್ಟರೆ ಇಂತಿಷ್ಟು ಎಂದು ಹಣ ನಿಗದಿ ಪಡಿ­ಸಿ­ದ್ದಾರೆ. ಇದನ್ನು ಪಾರ್ಟ್‌ ಟೈಮ್‌ ಕೆಲ­ಸ­ವ­ನ್ನಾಗಿ ಸ್ವೀಕ­ರಿ­ಸಿ­ದ್ದಾರೆ ಅವರು.
ಭಟ್ಟರು ಮಲ್ಲಿ­ಗೆ­ಯನ್ನು ಭಟ್ಕ­ಳ­ದ­ಲ್ಲಿಯೇ ಮಾರು­ಕಟ್ಟೆ ಮಾಡು­ತ್ತಾರೆ. ಹಬ್ಬ ಮತ್ತು ಇತರೆ ವಿಶೇಷ ಸಂದ­ರ್ಭ­ಗ­ಳಲ್ಲಿ ಹೂವಿಗೆ ಹೆಚ್ಚು ಬೇಡಿ­ಕೆ­ಯಿದ್ದು ಮನೆ ಬಾಗಿ­ಲಿಗೆ ಬಂದು ಖರೀ­ದಿ­ಸಿ­ಕೊಂಡು ಹೋಗು­ತ್ತಾರೆ. ಸಾಮಾ­ನ್ಯ­ವಾಗಿ ಇಲ್ಲಿಂದ ಮಂಗ­ಳೂ­ರಿಗೂ ಮಲ್ಲಿಗೆ ಹೂ ಸಾಗ­ಣೆ­ಯಾ­ಗು­ತ್ತದೆ.
ಮಲ್ಲಿ­ಗೆ­ಯಿಂದ ಆದಾಯ
ನೋಡು­ವ­ವರ ಕಣ್ಣಿಗೆ ಪುಟ್ಟ ಮಲ್ಲಿ­ಗೆ­ಯಿಂದ ಏನು ಆದಾಯ ಬರ­ಬ­ಹುದು ಅನ್ನಿ­ಸು­ತ್ತದೆ. ಆದರೆ ಕಡಿಮೆ ವೆಚ್ಚ ಮಾಡಿ ಹೆಚ್ಚು ಆದಾಯ ಪಡೆ­ದು­ಕೊ­ಳ್ಳ­ಬ­ಹು­ದೆಂದು ಭಟ್ಟರು ತೋರಿಸಿ ಕೊಟ್ಟ­ದ್ದಾರೆ.
ಮಲ್ಲಿಗೆ ಕೃಷಿಗೆ ಪ್ರತಿ ವರ್ಷ 40 ಸಾವಿರ ರೂಪಾಯಿ. ಆದಾಯ 2 ಲಕ್ಷದ 25 ಸಾವಿರ ರೂಪಾಯಿ. ತೋಟ­ದ­ಲ್ಲಿ­ರುವ ಪ್ರತಿ ಗಿಡ­ದಲ್ಲೂ ಹೂ ಬಿಡ ತೊಡ­ಗಿ­ದರೆ, ಪ್ರತಿ­ದಿನ ಒಂದು ಗಿಡ­ದಿಂದ ಸಾವಿರ ರೂಪಾಯಿ ಆದಾಯ ಬರು­ತ್ತದೆ. ಅಂದರೆ ವರ್ಷಕ್ಕೆ ಮೂರು ಲಕ್ಷದ ಅರ­ವ­ತ್ತೈದು ಸಾವಿರ ರೂಪಾಯಿ ಆದಾಯ!
`ಪುಷ್ಪ ಕೃಷಿ ಗೆಲ್ಲ ಬೇಕಾ­ದರೆ ಮಾರು­ಕಟ್ಟೆ ಹತ್ತ­ರ­ವಿ­ರ­ಬೇಕು. ಭಟ್ಕಳ ನನ್ನ ಮನೆ­ಯಿಂದ ಹತ್ತಿ­ರ­ವಿ­ರು­ವು­ದ­ರಿಂದ ಪ್ರತಿ­ದಿನ ಕೊಯ್ದ ಹೂ ಅಂದೇ ವೀಲೆ­ವಾ­ರಿ­ಯಾ­ಗು­ತ್ತದೆ. ಹಾಗೇ ಕೃಷಿ ಮಾಡ­ಬೇ­ಕಿ­ದ್ದರೆ ಒಬ್ಬ­ನಿಂ­ದಲೇ ಸಾಧ್ಯ­ವಾ­ಗು­ವು­ದಿಲ್ಲ. ಮನೆ­ಯ­ವರ ಸಹ­ಕಾರ ಮುಖ್ಯ. ಪತ್ನಿ ವಿದ್ಯಾ ಮತ್ತು ಮಕ್ಕಳ ಸಹ­ಕಾ­ರ­ದಿಂದ ಹೂ ಬೇಸಾ­ಯ­ದಲ್ಲಿ ಯಶ ಪಡೆ­ಯ­ಲಿಕ್ಕೆ ಸಾಧ್ಯ­ವಾ­ಯಿತು' ಎಂದು ಹೆಮ್ಮೆ­ಯಿಂದ ಹೇಳಿ­ಕೊ­ಳ್ಳು­ತ್ತಾರೆ ಭಟ್ಟರು.
ಭಟ್ಕಳ ಮಲ್ಲಿಗೆ ಕೃಷಿಗೆ ಹೇಳಿ ಮಾಡಿ­ಸಿ­ದಂ­ತಹ ಊರು. ಇಲ್ಲಿನ ಮಲ್ಲಿಗೆ ಕೃಷಿಗೆ 50ಕ್ಕೂ ಹೆಚ್ಚಿಗೆ ವರ್ಷದ ಇತಿ­ಹಾ­ಸ­ವಿದೆ. ಇಲ್ಲಿ ಇಪ್ಪ­ತ್ತೈದು ಗಿಡ­ದಿಂದ ಹಿಡಿದು ಸಾವಿರ ಗಿಡ­ದ­ವ­ರೆಗೆ ಮಲ್ಲಿಗೆ ಕೃಷಿ ಮಾಡು­ತ್ತಿ­ದ್ದಾರೆ. ಒಂದು ದಿನಕ್ಕೆ ಒಂದು ಕ್ವಿಂಟಾಲ್‌ ಹೂವನ್ನು ಹೊರ­ಗಡೆ ಕಳಿ­ಸು­ತ್ತಾರೆ. ಇಂತಹ ಊರಿ­ನಲ್ಲಿ ಮಂಜು­ನಾಥ ಭಟ್ಟರು ಒಬ್ಬ ಮಾದರಿ ಕೃಷಿ­ಕರು ಎಂದು ಅನು­ಮಾ­ನ­ವಿ­ಲ್ಲದೆ ಹೇಳ­ಬ­ಹುದು.
ಮಾಹಿ­ತಿ­ಗಾಗಿ: ಮಂಜು­ನಾಥ ಭಟ್ಟ, ಮೂಡು­ಭ­ಟ್ಕಳ, ಅಂಚೆ ಮುಠ್ಠಳ್ಳಿ
ಭಟ್ಕಳ, ಉತ್ತ­ರ­ಕ­ನ್ನಡ. ದೂರ­ವಾಣಿ-9886675607.

ನಾಗ­ರಾಜ ಮತ್ತಿ­ಗಾರ

2 comments:

ತೇಜಸ್ವಿನಿ ಹೆಗಡೆ said...

ವಿನೂತನ ರೆಈತಿಯ ಬ್ಲಾಗ್ ಆರಂಭಿಸಿದ್ದೀರಿ. ತುಂಬಾ ಖುಶಿಯಾಯಿತು. ಮುಂದುವರೆಸಿ.

ಮನಸ್ವಿ said...

ಲೇಖನ ತುಂಬಾ ಚನ್ನಾಗಿದೆ..