Monday, November 3, 2008

ಅಡಿಕೆಯ ಬಣ್ಣಕ್ಕೆ ರಾಮಡಿಕೆ


ಕೆಂಪಡಿಕೆಗೆ ರಂಗು ತರುವುದು ಅದರ ಕೆಂಪುಬಣ್ಣ. ಮಾರುಕಟ್ಟೆಯಲ್ಲಿ ಅಡಿಕೆಯ ಕೆಂಪುಬಣ್ಣ ಸಮರ್ಪಕವಾಗಿದ್ದರೆ ದರ ತುಸು ಹೆಚ್ಚು ಸಿಗುತ್ತದೆ. ಆ ಕಾರಣದಿಂದ ಅಡಿಕೆ ಕೃಷಿಕರು ಕೆಂಪಡಿಕೆಯ ಬಣ್ಣದ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿವಹಿಸುತ್ತಾರೆ. ನವೆಂಬರ್‌ ಡಿಸೆಂಬರ್‌ ತಿಂಗಳಿನ ಆರಂಭವಾಗುವ ಕೊನೆಕೊಯ್ಲಿನಲ್ಲಿ ಮೊದಲು ಬೇಯಿಸುವ ಅಡಿಕೆಗೆ ಈ ಬಣ್ಣದ ಸಮಸ್ಯೆ ಕಾಡುತ್ತದೆ. ಕೆಲ ಕೃಷಿಕರು ಕಳೆದ ವರ್ಷದ ಅಡಿಕೆಚೊಗರನ್ನು ಇಟ್ಟುಕೊಂಡು ಮರುಬಳಕೆ ಮಾಡುತ್ತಾರೆ. ಆದರೆ ಅಡಿಕೆಚೊಗರಿಗೆ ಒಳ್ಳೆಯ ದರ ಇದ್ದ ವರ್ಷಗಳಲ್ಲಿ ಮುಂದಿನ ವರ್ಷ ಸ್ಟಾಕ್‌ ಇರುವುದಿಲ್ಲ. ಹಾಗಾಗಿ ಅಂತಹ ಸಂದರ್ಭದಲ್ಲಿ ಹಲವರು ಪೇಟೆಯಲ್ಲಿ ಸಿಗುವ ಬಣ್ಣವನ್ನು ಮಿಶ್ರಮಾಡಿ ಅಡಿಕೆಯನ್ನು ಬೇಯಿಸುತ್ತಾರೆ. ಇದಕ್ಕೆ ಪ೦ರ್ಾಯವಾಗಿ ರಾಮಡಿಕೆಯನ್ನು ಈಗ ಅಡಿಕೆಯ ಬಣ್ಣಕ್ಕಾಗಿ ಹಾಗೂ ಹೊಳಪಿಗಾಗಿ ಬಳಕೆ ಶುರುವಾಗಿದೆ. ಅಡಿಕೆಯ ಬಣ್ಣಹಾಗೂ ಹೊಳಪಿನ ವಿಷಯದಲ್ಲಿ ರಾಮಡಿಕೆ ಉತ್ತಮ ಪಲಿತಾಂಶ ನೀಡುತ್ತಿದೆ ಎನ್ನುತ್ತಾರೆ ಸಾಗರ ತಾಲ್ಲೂಕಿನ ಬಚ್ಚಗಾರಿನ ಯುವ ಕೃಷಿಕ ಹಾಲೇಕೈ ಪ್ರಕಾಶ.
ಸಾಮಾನ್ಯವಾಗಿ ಮಲೆನಾಡಿನ ಅಡಿಕೆ ತೋಟಗಳಲ್ಲಿ ಈ ರಾಮಡಿಕೆ ಮರ ಒಂದೆರಡು ಕಾಣಸಿಗುತ್ತದೆ. ಅಡಿಕೆಮರ ಹಾಗೂ ತೆಂಗಿನ ಮರದ ಸಮ್ಮಿಶ್ರ ತಳಿಯಂತಿರುವ ರಾಮಡಿಕೆ ಬೈನೆ ಮರವನ್ನು ಹೋಲುತ್ತದೆ. ಅಡಿಕೆ ಮರಕ್ಕಿಂತ ಎತ್ತರ ಬೆಳೆಯುವ ಇದು ಅಡಿಕೆತೊಟಕ್ಕೆ ಸಿಡಿಲಿನಿಂದ ರಕ್ಷಣೆ ನೀಡುತ್ತದೆ ಎನ್ನುವ ಕಾರಣಕ್ಕೆ ಎಕರೆಗೊಂದರಂತೆ ನಾಟಿ ಮಾಡುವ ಪದ್ದತಿ ಹಿಂದೆ ಚಾಲ್ತಿಯಲ್ಲಿತ್ತು . ಆದರೆ ಅದರ ಅಡಿಕೆಯ ಉಪ೦ೋಗ ಇಲ್ಲದ ಕಾರಣ ನಿಧಾನವಾಗಿ ರಾಮಡಿಕೆ ಮರ ಕಣ್ಮರೆ೦ಾಗತೊಡಗಿತು. ದೊಡ್ದಗಾತ್ರದ ಅಡಿಕೆಯನ್ನು ಬಿಡುವ ರಾಮಡಿಕೆ ಗಟ್ಟಿ೦ಾಗಿದ್ದು ತಿನ್ನಲು ಬರುವುದಿಲ್ಲ. ಹಾಗಾಗಿ ಎಳೆ ಅಡಿಕೆಯನ್ನು ಕೊಯ್ದು ಉಪ೦ೋಗಿಸಲು ಪ್ರಯತ್ನಿಸಿದಾಗ ಬಲುಬೇಗನೆ ಉತ್ತಮ ಬಣ್ಣದ ಹಾಗೂ ಗುಣಮಟ್ಟದ ಅಡಿಕೆಚೊಗರು ಬಿಡುತ್ತದೆ ಎಂದು ತಿಳಿಯಿತು. ನಂತರ ಆ ಚೊಗರನ್ನು ಬಳಸಿಕೊಂಡು ಇತರೆ ಅಡಿಕೆಯನ್ನು ಬೇಯಿಸಿದಾಗ ಅಡಿಕೆಗೆ ಹೊಳಪು ಬಂತು. ಸ್ವಲ್ಪ ಎಳೆಯ ಕಾಯಿದ್ದಾಗ ರಾಮಡಿಕೆಯನ್ನು ಕೊಯ್ದು
ಜಜ್ಜಿ ಅಡಿಕೆಯ ಜತೆ ಬೇಯಿಸಿದರೆ ಉತ್ತಮ ಬಣ್ಣದ ಚೊಗರು ಸಿದ್ದ ಎನ್ನುತ್ತಾರೆ ಪ್ರಕಾಶ್‌.(9448914793)
ಎಕರೆಗೊಂದಂರಂತೆ ರಾಮಡಿಕೆ ಬೆಳೆಸಿದರೆ ಸಿಡಿಲಿನಿಂದ ತೊಟದ ರಕ್ಷಣೆಯ ಜತೆಗೆ ಉತ್ತಮ ಬಣ್ಣದ ಅಡಿಕೆಯನ್ನೂ ಪಡೆಯಬಹುದು. ಅಡಿಕೆ ಕೊಯ್ಲಿನ ಆರಂಭದಲ್ಲಿನ ಬಣ್ಣಕ್ಕಾಗಿನ ಪರದಾಟದಿಂದ ಅಡಿಕೆ ಕೃಷಿಕರಿಗೆ ಮುಕ್ತಿ ಸಿಕ್ಕಂತಾಗುತ್ತದೆ.

ಆರ್‌.ಶರ್ಮಾ.ತಲವಾಟ

2 comments:

ಮನಸ್ವಿ said...

ಸಕಾಲಿಕ ಬರಹ.. ತುಂಬಾ ಚನ್ನಾಗಿದೆ.. ಹೀಗೆ ಬರೆಯುತ್ತಿರಿ

Sunil HH said...

ಒಂದು ಉತ್ತಮ ಪ್ರಯತ್ನ....