ಸುಮಧುರ ಪರಿಮಳಕ್ಕೆ ಮತ್ತೊಂದು ಹೆಸರು ಮಲ್ಲಿಗೆ. ಶೃಂಗಾರ ಹಾಗೂ ರಸಿಕತೆ ಪ್ರದರ್ಶಿಸಲು ಮಲ್ಲಿಕಾ ಪುಷ್ಪವಿದ್ದರೆ ಸಾಕು. ಅಲಂಕಾರದಿಂದ ಹಿಡಿದು ಸುಗಂಧ ದ್ರವ್ಯ ಪ್ರಾಮುಖ್ಯತೆ ಪಡೆದಿರುವ ಹೂ ಮಲ್ಲಿಗೆ. ಮೈಸೂರು ಮಲ್ಲಿಗೆ ಜಗತ್ಪ್ರಸಿದ್ಧ. ಅದರಂತೆ ಉಡುಪಿ, ಮಂಗಳೂರು, ಭಟ್ಕಳ ಮಲ್ಲಿಗೆ ಕೂಡಾ.
ಕರಾವಳಿ ಪ್ರದೇಶದಲ್ಲಿ ಪ್ರಾಂತೀಯವಾಗಿ ಒಂದೊಂದು ಹೆಸರನ್ನು ಮಲ್ಲಿಗೆ ಪಡೆದುಕೊಳ್ಳುತ್ತ ಹೋಗಿದೆ. ಆದರೆ ಇಲ್ಲಿರುವ ತಳಿಗಳೆಲ್ಲ ಒಂದೇ ಅದು ವಸಂತ ಮಲ್ಲಿಗೆ. ಈ ಪುಷ್ಪ ಕೃಷಿಯನ್ನು ಕರ್ನಾಟಕದ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇಂತಿರುವ ಮಲ್ಲಿಗೆ ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿರುವ ಬೆಳೆಗಾರ ಉತ್ತರ ಕನ್ನಡ ಮೂಡು ಭಟ್ಕಳದ ಮಂಜುನಾಥ ಭಟ್ಟರು.
ಮೂಲತಃ ಅಡಿಕೆ ಕೃಷಿಕರಾದ ಇವರು, ಅಡಿಕೆಯ ಚೊಗರಿಗಿಂತ ಬೇರೆ ಕೃಷಿ ಮಾಡುವ ಆಸೆ ಆಕಾಂಕ್ಷೆಯಿಂದ ಮಲ್ಲಿಗೆ ಕೃಷಿಯನ್ನು ಆಯ್ಕೆಮಾಡಿಕೊಂಡರು. ಅವರ ಈ ಕೃಷಿ ಆಯ್ಕೆ ಹಲವರ ನಗೆಗೆ ಕಾರಣವಾಯಿತು. ಏನೇ ಆಗಲಿ ಮಲ್ಲಿಗೆ ಕೃಷಿ ಮಾಡುವ ಹುಮ್ಮಸ್ಸೆಂತು ಇತ್ತು. ಮೊದಲು ಇವರು ಮಲ್ಲಿಗೆ ಕೃಷಿಯನ್ನು ಪ್ರಾರಂಭಿಸಿದ್ದು ಕೇವಲ ಹನ್ನೆರಡು ಗುಂಟೆ ಜಾಗದಲ್ಲಿ!
ಅನುಭವವಿಲ್ಲದ ಹೊಸ ಕೃಷಿ. ಮಾರುಕಟ್ಟ ಬಗ್ಗೆ ಏನೂ ಗೊತ್ತಿಲ್ಲ. ಕೃಷಿ ಪ್ರಾರಂಭವಾಯಿತು. ಮೊದಲ ವರ್ಷದ ಆದಾಯ ನಕ್ಕವರ ಬಾಯಿ ಮುಚ್ಚಿಸಿತು. ಮರು ವರ್ಷವೇ ಮಲ್ಲಿಗೆ ಕೃಷಿಯ ವಿಸ್ತರಣೆಗಾಗಿ ಅರ್ಧ ಎಕರೆ ಜಮೀನನ್ನು ಖರೀದಿಸಿದರು.
ಭಟ್ಟರ ಮಲ್ಲಿಗೆ ಕೃಷಿ ಹೀಗೆ..
ಮಂಜುನಾಥ ಅವರದ್ದು ಲೆಕ್ಕಾಚಾರದ ಕೃಷಿ. ಒಟ್ಟು ಮೂವತ್ತೆರಡು ಗುಂಟೆಯಲ್ಲಿ ವ್ಯವಸ್ಥಿತ ಮಲ್ಲಿಗೆ ಬೇಸಾಯ. ಇದರಲ್ಲಿ ಒಟ್ಟು ಒಂದು ಸಾವಿರ ಮಲ್ಲಿಗೆ ಗಿಡಗಳು. ನಾಟಿ ಮಾಡುವಾಗ ಹೇಗಾಯಿತು ಹಾಗೆ ನೆಡದೇ ಸಾಲಿಂದ ಸಾಲಿಗೆ 6 ಆಡಿ ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ನಾಟಿ. ಆರೋಗ್ಯವಂತ ಬಲಿತ ಮಲ್ಲಿಗೆ ಗಿಡದಿಂದ ಮಧ್ಯಮ ಪ್ರಾಯದ ಕುಡಿಯನ್ನು ಆಯ್ಕೆ, ಒಂದು ಅಡಿ ಆಳ, ಅಗಲದ ಗುಣಿಗೆ ಗೊಬ್ಬರ ಮಿಶ್ರಣ ಮಾಡಿ ಐದಾರು ಕುಡಿಗಳನ್ನು ನೆಡುತ್ತಾರೆ. ಒಂದು ಕುಡಿ ಸತ್ತರು ಮತ್ತೊಂದು ಕುಡಿ ಬದುಕುತ್ತದೆ.
ಸ್ವಲ್ಪ ಇಳಿಜಾರು ಪ್ರದೇಶದಲ್ಲಿ ಇವರ ಮಲ್ಲಿಗೆ ತೋಟವಿದ್ದು, ಇದಕ್ಕಾಗಿ ಇವರು ಎರಡು ಸಾಲುಗಳ ಮಧ್ಯೆ ಕಿರು ಬಸಿ ಕಾಲುವೆಯನ್ನು ಮಾಡಿದ್ದರೆ. ಇದರಿಂದ ಭೂಮಿ ತಂಪನ್ನು ಕಾದಿರಿಸಿ ಕೊಂಡಿರುತ್ತದೆ. ದಿನಕ್ಕೆ ಎರಡು ತಾಸು ನೀರನ್ನು ಬಿಡುತ್ತಾರೆ. ಅದು ಮೇ ತಿಂಗಳಿನಲ್ಲಿ ಮಾತ್ರ. ತಿಂಗಳಿಗೊಂದು ಬಾರಿ ಸಗಣಿ ರಾಡಿಯನ್ನು ಗಿಡದ ಬುಡಕ್ಕೆ ಹಾಕುತ್ತಾರೆ. `ಮಲ್ಲಿಗೆ ಹೂ ಉತ್ತಮವಾಗಿ ಬಿಡಬೇಕೆಂದರೆ ಸಗಣಿ ರಾಡಿ ಮುಖ್ಯ. ಹೆಚ್ಚಿಗೆ ಹೂ ಬೇಕೆಂದರೆ ಇಪ್ಪತೆರಡು ದಿನಕ್ಕೆ ರಾಡಿ (ಸ್ಲರಿ)ಯನ್ನು ಹಾಕಬೇಕು' ಎನ್ನುವುದು ಭಟ್ಟರ ಸ್ವನುಭವದ ಮಾತು.
ಇವರು ಯಾವುದೇ ತರಹದ ರಾಸಾಯನಿಕವನ್ನು ಗಿಡದ ಪೋಷಕಾಂಸಕ್ಕಾಗಿ ಬಳಸದೆ ಇರುವುದು ವಿಶೇಷ. ಮಲ್ಲಿಗೆಗೆ ಹಲವಾರು ರೋಗ, ಕೀಟ ಭಾದೆಯಿದ್ದರು ಭಟ್ಟರ ಮಲ್ಲಿಗೆ ತೋಟದಲ್ಲಿ ಕಂಡಿದ್ದು ವಿರಳ. ಒಂದೊಮ್ಮೆ ಬಂದರು ವಿಜ್ಞಾನಿಗಳ ಶಿಫಾರಸ್ಸು ಪಡೆದು ಸಿಂಪಡಿಸುತ್ತಾರೆ.
ಕೊಯ್ಲು ಮತ್ತು ಆದಾಯ
ನಾಟಿ ಮಾಡಿದ ವರ್ಷವೇ ಮಲ್ಲಿಗೆ ಕೊಯ್ಲಿಗೆ ಬರುತ್ತದೆ. ಸೂರ್ಯ ಉದಯಿಯಿಸುವ ಮೊದಲೇ ಮಲ್ಲಿಗೆ ಹೂಗಳನ್ನು ಕೊಯ್ಲು ಮಾಡುತ್ತಾರೆ. ನಂತರ ಕೊಯ್ದರೆ ಹೂವಿನ ಗುಣಮಟ್ಟ ಕುಂಟಿತವಾಗುತ್ತದೆ. ಬೆಳಿಗ್ಗೆ ಕೊಯ್ಯದೆ ಉಳಿದಿರುವ ಹೂಗಳನ್ನು ಸಾಯಂಕಾಲ ಕೊಯ್ಲು ಮಾಡುತ್ತಾರೆ. ಹೂ ಕೊಯ್ಯಲಿಕ್ಕೆ ಮನೆಯ ಹತ್ತಿರದ ಹೆಮ್ಮಕ್ಕಳು ಬರುತ್ತಾರೆ. ಇವರು ಒಂದು ಮೊಳ ಹೂ ಕೊಯ್ದು ಮಾಲೆ ಮಾಡಿ ಕೊಟ್ಟರೆ ಇಂತಿಷ್ಟು ಎಂದು ಹಣ ನಿಗದಿ ಪಡಿಸಿದ್ದಾರೆ. ಇದನ್ನು ಪಾರ್ಟ್ ಟೈಮ್ ಕೆಲಸವನ್ನಾಗಿ ಸ್ವೀಕರಿಸಿದ್ದಾರೆ ಅವರು.
ಭಟ್ಟರು ಮಲ್ಲಿಗೆಯನ್ನು ಭಟ್ಕಳದಲ್ಲಿಯೇ ಮಾರುಕಟ್ಟೆ ಮಾಡುತ್ತಾರೆ. ಹಬ್ಬ ಮತ್ತು ಇತರೆ ವಿಶೇಷ ಸಂದರ್ಭಗಳಲ್ಲಿ ಹೂವಿಗೆ ಹೆಚ್ಚು ಬೇಡಿಕೆಯಿದ್ದು ಮನೆ ಬಾಗಿಲಿಗೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಇಲ್ಲಿಂದ ಮಂಗಳೂರಿಗೂ ಮಲ್ಲಿಗೆ ಹೂ ಸಾಗಣೆಯಾಗುತ್ತದೆ.
ಮಲ್ಲಿಗೆಯಿಂದ ಆದಾಯ
ನೋಡುವವರ ಕಣ್ಣಿಗೆ ಪುಟ್ಟ ಮಲ್ಲಿಗೆಯಿಂದ ಏನು ಆದಾಯ ಬರಬಹುದು ಅನ್ನಿಸುತ್ತದೆ. ಆದರೆ ಕಡಿಮೆ ವೆಚ್ಚ ಮಾಡಿ ಹೆಚ್ಚು ಆದಾಯ ಪಡೆದುಕೊಳ್ಳಬಹುದೆಂದು ಭಟ್ಟರು ತೋರಿಸಿ ಕೊಟ್ಟದ್ದಾರೆ.
ಮಲ್ಲಿಗೆ ಕೃಷಿಗೆ ಪ್ರತಿ ವರ್ಷ 40 ಸಾವಿರ ರೂಪಾಯಿ. ಆದಾಯ 2 ಲಕ್ಷದ 25 ಸಾವಿರ ರೂಪಾಯಿ. ತೋಟದಲ್ಲಿರುವ ಪ್ರತಿ ಗಿಡದಲ್ಲೂ ಹೂ ಬಿಡ ತೊಡಗಿದರೆ, ಪ್ರತಿದಿನ ಒಂದು ಗಿಡದಿಂದ ಸಾವಿರ ರೂಪಾಯಿ ಆದಾಯ ಬರುತ್ತದೆ. ಅಂದರೆ ವರ್ಷಕ್ಕೆ ಮೂರು ಲಕ್ಷದ ಅರವತ್ತೈದು ಸಾವಿರ ರೂಪಾಯಿ ಆದಾಯ!
`ಪುಷ್ಪ ಕೃಷಿ ಗೆಲ್ಲ ಬೇಕಾದರೆ ಮಾರುಕಟ್ಟೆ ಹತ್ತರವಿರಬೇಕು. ಭಟ್ಕಳ ನನ್ನ ಮನೆಯಿಂದ ಹತ್ತಿರವಿರುವುದರಿಂದ ಪ್ರತಿದಿನ ಕೊಯ್ದ ಹೂ ಅಂದೇ ವೀಲೆವಾರಿಯಾಗುತ್ತದೆ. ಹಾಗೇ ಕೃಷಿ ಮಾಡಬೇಕಿದ್ದರೆ ಒಬ್ಬನಿಂದಲೇ ಸಾಧ್ಯವಾಗುವುದಿಲ್ಲ. ಮನೆಯವರ ಸಹಕಾರ ಮುಖ್ಯ. ಪತ್ನಿ ವಿದ್ಯಾ ಮತ್ತು ಮಕ್ಕಳ ಸಹಕಾರದಿಂದ ಹೂ ಬೇಸಾಯದಲ್ಲಿ ಯಶ ಪಡೆಯಲಿಕ್ಕೆ ಸಾಧ್ಯವಾಯಿತು' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಭಟ್ಟರು.
ಭಟ್ಕಳ ಮಲ್ಲಿಗೆ ಕೃಷಿಗೆ ಹೇಳಿ ಮಾಡಿಸಿದಂತಹ ಊರು. ಇಲ್ಲಿನ ಮಲ್ಲಿಗೆ ಕೃಷಿಗೆ 50ಕ್ಕೂ ಹೆಚ್ಚಿಗೆ ವರ್ಷದ ಇತಿಹಾಸವಿದೆ. ಇಲ್ಲಿ ಇಪ್ಪತ್ತೈದು ಗಿಡದಿಂದ ಹಿಡಿದು ಸಾವಿರ ಗಿಡದವರೆಗೆ ಮಲ್ಲಿಗೆ ಕೃಷಿ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಒಂದು ಕ್ವಿಂಟಾಲ್ ಹೂವನ್ನು ಹೊರಗಡೆ ಕಳಿಸುತ್ತಾರೆ. ಇಂತಹ ಊರಿನಲ್ಲಿ ಮಂಜುನಾಥ ಭಟ್ಟರು ಒಬ್ಬ ಮಾದರಿ ಕೃಷಿಕರು ಎಂದು ಅನುಮಾನವಿಲ್ಲದೆ ಹೇಳಬಹುದು.
ಮಾಹಿತಿಗಾಗಿ: ಮಂಜುನಾಥ ಭಟ್ಟ, ಮೂಡುಭಟ್ಕಳ, ಅಂಚೆ ಮುಠ್ಠಳ್ಳಿ
ಭಟ್ಕಳ, ಉತ್ತರಕನ್ನಡ. ದೂರವಾಣಿ-9886675607.
ನಾಗರಾಜ ಮತ್ತಿಗಾರ

2 comments:
ವಿನೂತನ ರೆಈತಿಯ ಬ್ಲಾಗ್ ಆರಂಭಿಸಿದ್ದೀರಿ. ತುಂಬಾ ಖುಶಿಯಾಯಿತು. ಮುಂದುವರೆಸಿ.
ಲೇಖನ ತುಂಬಾ ಚನ್ನಾಗಿದೆ..
Post a Comment