ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಯುವುದರಲ್ಲಿ ಭಾರತ ಜಗತ್ಪ್ರಸಿದ್ಧ, ಅಂದೊಂದು ದಿನ. ಪ್ರತಿಯೊಂದು ಕಾಲಕ್ಕೆ, ಹಬ್ಬಕ್ಕೆ, ಬೆಳಗ್ಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ, ದೋಸೆಗೆ, ಪಾಯಸಕ್ಕೆ ಹೀಗೆ ಒಂದೊಂದು ಕಾರ್ಯಕ್ಕೂ ಒಂದೊಂದು ಭತ್ತದ ತಳಿಗಳು ನಮ್ಮಲ್ಲಿದ್ದವು. ಭಾರತೀಯ ಆಹಾರ ನಿಗಮದ 1965ರ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದಲ್ಲಿಯೇ ಸುಮಾರು 244 ತಳಿಗಳು ಇದ್ದವು. ಇದರಲ್ಲಿ ಅತೀ ಸಣ್ಣ ಅಕ್ಕಿ 56, ಸಣ್ಣ ಅಕ್ಕಿ 38, ಮಧ್ಯಮ ಅಕ್ಕಿ 65, ಮಧ್ಯಮ ಅಕ್ಕಿ 87 ಇದ್ದವು. ಆದರೆ ಈಗ ಸೂಕ್ಷ್ಮದರ್ಶಕ ಹಿಡಿದು ಹುಡುಕಿದರೆ ಅಬ್ಬಬ್ಬ ಅಂದರೆ ನೂರೈವತ್ತು ತಳಿಗಳು ಸಿಕ್ಕರೆ ಹೆಚ್ಚು. ಸುಮಾರು ಅರವತ್ತರಿಂದ ಎಪ್ಪತ್ತು ತಳಿಗಳು ಕಾಣೆಯಾಗಿವೆ.
ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ಬಂದ ಹಸಿರು ಕ್ರಾಂತಿ ಅಭಿವೃದ್ಧಿಯನ್ನು ವ್ಯಾವಹಾರಿಕವಾಗಿ ಸಾಧಿಸಿತ್ತಾದರೂ ನಮ್ಮಲ್ಲಿಯ ನೆಲ, ಜಲವನ್ನು ವಿಷ ಮಾಡಿತು ಎನ್ನುವುದು ಸ್ಫಟಿಕದಷ್ಟೇ ಸತ್ಯ. ಜಗತ್ತಿಗೆ ಆಹಾರ ಊಣಿಸಲು ಹೋಗಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುವ ಸ್ಥಿತಿಗೆ ರೈತ ತಲುಪಿದ್ದಾನೆ. ಭತ್ತದ ಉತ್ಪಾದನೆ ಹೆಚ್ಚು ಮಾಡುವ ಉತ್ಕಟ ಬಯಕೆಯಿಂದ ನಮ್ಮಲ್ಲಿಯೇ ಇರುವ ವೈವಿಧ್ಯ ತಳಿಗಳನ್ನು ಕಳೆದುಕೊಂಡೆವು. ನಾಟಿತಳಿಗಳನ್ನು ಉಳಿಸಿ ಎಂಬ ಆಂದೋಲನ ಈ ವರ್ಷ ಬನವಾಸಿಯಲ್ಲಿ ಪ್ರಾರಂಭವಾಯಿತು. ಇದರ ಜೊತೆಯಲ್ಲಿಯೇ ಕೆಲವು ಕೃಷಿಕರು ತೆರೆಮರೆಯಲ್ಲಿಯೇ ನಾಟಿ ಭತ್ತ ಉಳಿಸುವ ಆಂದೋಲನ ಪ್ರಾರಂಭಿಸಿದ್ದರು. ಇಂತಹವರಲ್ಲಿ ಧಾರವಾಡದ ಗಂಗಾಧರ ಹೊಸಮನಿ ಅವರು ಒಬ್ಬರು. ತಾವು ಬೆಳೆಯುವ ಭತ್ತವನ್ನು ಸಾವಯವ ಕೃಷಿಯಲ್ಲಿ ಮಾಡಿ, ನಾಟಿ ತಳಿಗಳನ್ನು ಉಳಿಸುವ ಹೋರಾಟದಲ್ಲಿ ತೊಡಗಿದವರು ಇವರು.
ಧಾರವಾಡ- ಹಳಿಯಾಳ ರಸ್ತೆಯಲ್ಲಿ ಬರುವ ಹಳ್ಳಿಗೆ ಗ್ರಾಮದಲ್ಲಿ ಇವರಿಗೆ ಹದಿನೈದು ಎಕರೆ ಕೃಷಿ ಭೂಮಿ ಇದೆ. ಹೊಸಮನಿ ಅವರು ಭತ್ತದ ಸಾವಯವ ಕೃಷಿ ಮಾಡತೊಡಗಿ ವರ್ಷ ಮೂರಾಯಿತು. ಮೊದಲು ಇವರು ಎಲ್ಲರಂತೆ ಇಳುವರಿ ಪೂರಕ ಕೃಷಿ ಮಾಡುತ್ತಿದ್ದರು. ಕಳೆದ ವರ್ಷ ಇವರು ಏಳು ಎಕರೆ ಪ್ರದೇಶದಲ್ಲಿ ಏಳು ನಾಟಿ ತಳಿಗಳನ್ನು ತಮ್ಮ ಹೊಲದಲ್ಲಿ ಬಿತ್ತಿದರು. ಕಾಗೆತಾಳಿ, ಡೇಹರಾಡೂನ್ ಭಾಸಮತಿ, ಬೆಳಗಾಂ ಭಾಸಮತಿ, ಅಂಬೆ ಮೋರ್, ಅಂಕುರ್ ಸೋನಾ, ಸೆಲಂಸಣ್ಣ ಮತ್ತು ಜ್ಯೋತಿ ಇವರು ಬಿತ್ತಿದ ತಳಿಗಳು.
ಸಾವಯವ ಕೃಷಿಯಲ್ಲಿ ಇಳುವರಿ ಕಡಿಮೆಯಾದರೂ ಗುಣಮಟ್ಟ ಉತ್ತಮ. ಇದರಿಂದ ಉತ್ಸಾಹಗೊಂಡ ಇವರು ಈ ಬಾರಿ ಇಪ್ಪತ್ನಾಲ್ಕು ನಾಟಿ ತಳಿಗಳನ್ನು ಬೆಳೆಸುತ್ತಿದ್ದಾರೆ. ಇವುಗಳನ್ನು ಮೂರು ವಿಭಾಗಗಳಲ್ಲಿ ಇವರು ಬೆಳೆಸುತ್ತಿದ್ದಾರೆ.
1. ಸುವಾಸನಾ ಭರಿತ ಭತ್ತ: ಅಂಬೆಮೋರ್, ಕಾಗೆಸಾಲಿ, ಕರಿ ಗಜಿಬಿಲಿ (ಇದಕ್ಕೆ ಬಾಣಂತಿ ಭತ್ತ ಎಂದು ಕರೆಯುತ್ತಾರೆ. ಬಾಣಂತಿಯರಿಗೆ ಈ ಅಕ್ಕಿ ಊಟ ಪ್ರೋಟಿನ್ ಅಂಶವನ್ನು ದೇಹಕ್ಕೆ ನೀಡುತ್ತದೆ.) ಆಂಧಸಾಲಿ, ಬಾದ್ಷಹಾ ಬೋಗ್, ಬೂಸಾ ಭಾಸಮತಿ 1, ಬೂಸಾ ಭಾಸಮತಿ 2, ಬೆಳಗಾಂ ಭಾಸಮತಿ, ಮಾಲ್ಗುಡಿ ಸಣ್ಣ, ಬಂಗಾರ ಕಡ್ಡಿ.
2. ನಿತ್ಯ ಬಳಕೆಯ ಭತ್ತ: ಎಚ್ಎಂಟಿ, ಗೌರಿಸಣ್ಣ, ಚಕೋತಾ ಭತ್ತ ಅಥವಾ ಹುಗ್ಗಿ ಭತ್ತ, ಸಿದ್ಧಗಿರಿ 1, ಸಿದ್ಧಗಿರಿ 2, ಅಂತರ ಸಾಲಿ, ಉದುರು ಸಾಲಿ, ಮುಗದ 101, ಚಿನ್ನಾಪನ್ನಿ, ಸೇಲಂಸಣ್ಣ, ಅಂಕುರ್ ಸೋನಾ, ಮೈಸೂರು ಮಲ್ಲಿಗೆ.
3. ಔಷಧ ಭತ್ತ: ನಾಗಾಲ್ಯಾಂಡ್ ಭತ್ತ, ನವರ.
ಈ ಎಲ್ಲಾ ರೀತಿಯ ಭತ್ತಗಳನ್ನು ಬೆಳೆಯುವ ಉದ್ದೇಶವೇನು ಎಂದು ಹೊಸಮನಿ ಅವರನ್ನು ಪ್ರಶ್ನಿಸಿದರೆ, ಅವರು ಕೊಡುವ ಉತ್ತರ ಹೀಗಿದೆ; `ಸಾವಯವ ಕೃಷಿಗೆ ಪೂರಕವಾಗಿ ನಾಟಿ ತಳಿ ಬೆಳೆಯುತ್ತಿದ್ದೇನೆ. ನಮ್ಮಲ್ಲಿಯೇ ಇರುವ ಹಟ್ಟಿ ಗೊಬ್ಬರವೇ ಈ ಬೆಳೆಗೆ ಸಾಕು. ರಾಸಾಯನಿಕ ಗೊಬ್ಬರಕ್ಕಾಗಿ ಪರದಾಡುವ ಪ್ರಶ್ನೆಯಿಲ್ಲ. ನಮ್ಮಲ್ಲಿರುವುದು ಕಸುವು ಇಲ್ಲದ ಭೂಮಿ. ಅದಕ್ಕಾಗಿ ನಾವು ರಾಸಾಯನಿಕ ಗೊಬ್ಬರದಲ್ಲಿಯೇ ಬೆಳೆ ಬೆಳೆಯುತ್ತಾ ಹೋದರೆ ಭೂಮಿ ಭಂಜರಾಗುವುದು ಗ್ಯಾರಂಟಿ. ಅದಕ್ಕಾಗಿ ಇಳುವರಿ ಕಡಿಮೆಯಾದರು ತೊಂದರೆಯಿಲ್ಲ. ಭೂಮಿ ತಾಕತ್ತಿನಲ್ಲಿ ಇರಬೇಕು'.
ಹೊಸಮನಿ ಅವರು ಕೃಷಿ ಏಕತಾನತೆಯನ್ನು ಇಷ್ಟಪಡದೆ ವೈವಿಧ್ಯತೆ ಬಯಸಿರುವುದು ವಿಭಿನ್ನ ತಳಿ ಬೆಳೆಯಲಿಕ್ಕೆ ಕಾರಣ. ಇವರು ಹಲವಾರು ರೀತಿಯ ಭತ್ತದ ತಳಿಗಳನ್ನು ಬೆಳೆಯ ಬೇಕೆಂದಾಗ ಯಾವ ಭತ್ತವು ತಾನಾಗಿಯೇ ಕೈಗೆ ಸಿಗಲಿಲ್ಲ. ಇದಕ್ಕಾಗಿ ಕರ್ನಾಟಕದ ತುಂಬ ಅವರು ಓಡಾಡಿದರು. ಕಳೆದ ವರ್ಷ ಮಂಡ್ಯದ ಶಿವಳ್ಳಿಯ ರೈತ ಬೋರೆಗೌಡರು 35 ಬಗೆಯ ಭತ್ತದ ತಳಿಗಳನ್ನು ಬೆಳೆದಿದ್ದರು. ಅವರಲ್ಲಿಗೆ ಹೋಗಿ ಕೆಲವು ತಳಿಗಳನ್ನು ಆಯ್ಕೆ ಮಾಡಿತಂದರು. ಕೃಷಿ ವಿಶ್ವವಿದ್ಯಾಲಯಗಳಿಂದ ಮತ್ತು ಬೆಂಗಳೂರಿನ ಸಹಜ ಸಮೃದ್ಧ ಬಳಗದವರಿಂದ ಕೆಲವು ತಳಿಗಳನ್ನು ತಂದರು.
ಬೇರೆಯವರಿಂದ ಸ್ವಲ್ಪ ಸ್ವಲ್ಪ ಭತ್ತಗಳನ್ನು ತಂದು ಇವರು ನಾಟಿ ಮಾಡಿದರೂ, ಈ ವರ್ಷ ಅವು ದ್ವಿಗುಣ ಆಗುತ್ತದೆ ಎನ್ನುವ ತೃಪ್ತಿ ಇವರದ್ದು. `ಅನ್ನದಾತರಾದ ನಾವು ಅನ್ನವನ್ನೇ ನೀಡಬೇಕು. ಬದಲಾಗಿ ವಿಷವನ್ನು ನೀಡಬಾರದು. ಸಾವಯವ ಕೃಷಿ ಮತ್ತು ನಾಟಿ ತಳಿ ಇದಕ್ಕೆ ಸಹಕಾರಿ. ಅಷ್ಟೇ ಅಲ್ಲದೆ ನಮ್ಮಲ್ಲಿಯ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಸ್ಥಳೀಯರಿಗೆ ಪುನಃ ನೆನಪಿಸುವಲ್ಲಿ ಈ ರೀತಿಯ ಕೃಷಿ ಉಪಯೋಗಕ್ಕೆ ಬರುತ್ತದೆ' ಎಂಬುದು ಹೊಸಮನಿ ಅವರ ಹೇಳಿಕೆ.
ನಾಟಿ ತಳಿ ಕಾಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ನಾಟಿ ತಳಿಯನ್ನು ಉಳಿಸುವುದರ ಜೊತೆಗೆ ದ್ವಿಗುಣಗೊಳಿಸುತ್ತಿರುವ ಹೊಸಮನಿ ಅವರ ಪ್ರಯತ್ನ ಶ್ಲಾಘನೀಯ.
ಮಾಹಿತಿಗಾಗಿ: ಗಂಗಾಧರ ಹೊಸಮನಿ
29/7b ಮರಾಠಾ ಕಾಲೀನಿ
ಗಣಪತಿಗುಡಿ ಹತ್ತಿರ
ಧಾರವಾಡ- 580008
ದೂರವಾಣಿ: 0836-2447137
9448130647
ನಾಗರಾಜ ಮತ್ತಿಗಾರ
e-mail: nagam25@gmail.com

No comments:
Post a Comment