ಬಿತ್ತನೆ ಸಮಯ ಬಂದಾಗ ರೈತರು ರಸಗೊಬ್ಬರಕ್ಕಾಗಿ ಗೊಬ್ಬರಕ್ಕಾಗಿ ಪರದಾಡುವ ಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ. ಇಳುವರಿ ಹೆಚ್ಚು ಮಾಡುವ ಉದ್ದೇಶದಿಂದ `ಹಸಿರು ಕ್ರಾಂತಿ' ಪ್ರಾರಂಭವಾಯಿತೋ ಅಂದಿನಿಂದಲೇ ರೈತರು ಗೊತ್ತಿಲ್ಲದೆ ಕಷ್ಟದ ಕಡೆ ಹೊರಟಿದ್ದರು. ಹೆಚ್ಚಿಗೆ ಇಳುವರಿಗೆ ಹೆಚ್ಚಿಗೆ ಗೊಬ್ಬರ ಎನ್ನುವ ಸಿದ್ಧಾಂತಕ್ಕೆ ಮೋರೆ ಹೋದರು. ಪರಿಣಾಮ ಭೂಮಿ ಹೆಚ್ಚಿಗೆ ಗೊಬ್ಬರವನ್ನು ಕೇಳ ತೊಡಗಿತು. ಇದರಿಂದ ರೈತ ಹೊರ ಬರಬೇಕಾದರೆ ರಸಗೊಬ್ಬರದ ದಿಕ್ಕನ್ನು ಬಿಟ್ಟು ಪುನಃ ದೇಶೀ ಕೃಷಿಯೆಡಗೆ ಹಿಂತಿರುಗಬೇಕು.
ರಾಸಾಯನಿಕ ಕೃಷಿಯನ್ನು ಬುಟ್ಟು ದೇಶೀ ಕೃಷಿಯೆಡೆಗೆ ಬಹಳ ಜನ ಬರುತ್ತಿದ್ದಾರೆ. ಅಂತವರಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರದ ಗಿರೀಶ್ಕೂಡಾ ಒಬ್ಬರು. ಇವರ ಜಮೀನು ಈಗ ರಸಗೊಬ್ಬರವನ್ನು ಕೇಳುವುದಿಲ್ಲ.
ಇವರು ಪಾಳೇಕರ್ ಹೇಳಿರುವ ಜೀವಾಮೃತ ಕೃಷಿ ಹಾಗೂ ಸಹಜ ಕೃಷಿಯನ್ನು ಮಾಡುತ್ತಿದ್ದಾರೆ. ಜೊತೆಯಲ್ಲಿ ನೀರಿಂಗಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಗಿರೀಶ್ ಅವರ ಸಹಜ ಕೃಷಿ: ಇವರಿಗೆ ನಾಲ್ಕು ಎಕರೆ ಜಮೀನಿದೆ. ಅದರಲ್ಲಿ ಮೂರು ಎಕರೆ ಜಾಗದಲ್ಲಿ ಭತ್ತ ಬೆಳೆಯುತ್ತಾರೆ. ಭತ್ತವನ್ನು ನಾಟಿ ಮಾಡುವ ಪೂರ್ವದಲ್ಲಿ ಇವರು ಹಸಿರು ಗೊಬ್ಬರ ತಯಾರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಮೇ ತಿಂಗಳಲಿನಲ್ಲಿ ಭತ್ತ ಬೆಳೆಯುವ ಮೂರು ಎಕರೆಯಲ್ಲೂ ಸೆಣಬನ್ನು ಬಿತ್ತುತ್ತಾರೆ. ಇದು ಸುಮಾರು ಒಂದು ಆಳು ಎತ್ತರಕ್ಕೆ ಬೆಳೆದ ಮೇಲೆ ಅಲ್ಲಿಯೇ ಕಡಿದುಹಾಕಿ ಉಳಿಮೆಯನ್ನು ಮಾಡುತ್ತಾರೆ. ಇದು ಸಂಪೂರ್ಣ ಕೊಳೆಯುವವರೆಗೂ ಬಿಟ್ಟು ಮತ್ತೊಮ್ಮೆ ಉಳಿಮೆ ಮಾಡುತ್ತಾರೆ. ಇದರಿಂದ ಭೂಮಿ ಸಾಕಷ್ಟು ತಾಕತ್ ಪಡೆದಿರುತ್ತದೆ. ಭೂಮಿಯಲ್ಲಿ ಸಾರಜನಕ ತಾನಾಗಿಯೇ ಹೆಚ್ಚಾಗುತ್ತದೆ. ಯೂರಿಯಾ ಗೊಬ್ಬರ ನೀಡಿದರೆ ನೀಡುವ ಪರಿಣಾಮವನ್ನು ಸೆಣಬು ನೀಡುತ್ತದೆ.
ಇದಲ್ಲದೇ ಜೀವಾಮೃತ ತಯಾರಿಸಿ ಭತ್ತದ ಬೆಳೆಗೆ ಬಳಸುತ್ತಾರೆ. 10 ಲೀ ಗಂಜಲ, 10 ಕಿಲೋ ಸೆಗಣಿ, 2 ಕಿಲೋ ಬೆಲ್ಲ, 2 ಕಿಲೋ ದ್ವಿದಳ ಧಾನ್ಯದ ಹಿಟ್ಟು, ನೀರು, ಮತ್ತು ಮಣ್ಣನ್ನು ಮಿಶ್ರಣ ಮಾಡಿ ಜೀವಾಮೃತವನ್ನು ತಯಾರಿಸಿ ಕೊಳ್ಳುತ್ತಾರೆ.
`ನಾನು ಈ ರೀತಿ ಕೃಷಿ ಮಾಡಲಿಕ್ಕೆ ತೊಡಗಿದ ಮೇಲೆ ಇಳುವರಿಯು ಒಂದು ಹಂತದಲ್ಲಿ ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರ ಹಾಕಿ ಕೃಷಿ ಮಾಡುವಾಗ ಭತ್ತ ಹೆಚ್ಚಗೆ ಬಂದಹಾಗೆ ಕಾಣುತ್ತಿತ್ತು. ಆಗ ಜೊಳ್ಳು ಹೆಚ್ಚಿಗೆ ಬರುತ್ತಿತ್ತು. ಆದರೆ ಜೊಳ್ಳು ರಹಿತ ಭತ್ತ ಸಿಗುತ್ತಿದೆ. ಆದರಿಂದ ಇಳುವರಿಯಲ್ಲಿ ಕಡಿಮೆಯಾದ ಹಾಗೇ ಕಾಣುವುದಿಲ್ಲ. ಈ ರೀತಿಯ ಕೃಷಿಯಲ್ಲಿ ಭತ್ತಕ್ಕೆ ರೋಗ ತಡೆದು ಕೊಳ್ಳುವ ಶಕ್ತಿ ಬರುವುದು ಗಮನಕ್ಕೆ ಬಂದಿದೆ' ಎಂಬುದಾಗಿ ತಮ್ಮ ಕೃಷಿ ಅನುಭವವನ್ನು ಗಿರೀಶ್ ಹಂಚಿಕೊಳ್ಳುತ್ತಾರೆ.
ರೇಷ್ಮೆ ಕೃಷಿ: ಅರ್ಧ ಎಕರೆ ಜಾಗದಲ್ಲಿ ರೇಷ್ಮೆ ಕೃಷಿಯನ್ನು ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಇದನ್ನು ಮಾಡುತ್ತಿರುವದರಿಂದ ರೋಗ ರಹಿತವಾಗಿ ಒಳ್ಳೆಯ ಗೂಡನ್ನು ಬೆಳೆಯಲು ಸಾಧ್ಯವಾಗಿದೆ. 31 ಕಿಲೋ ರೇಷ್ಮೆ ಗುಡನ್ನು ಪಡೆದಿರುವುದು ಇದಕ್ಕೆ ಸಾಕ್ಷಿ.
ರೇಷ್ಮೆ ಸೊಪ್ಪಿನ (ಹಿಪ್ಪು ನೇರಳೆ) ಗಿಡಗಳ ಸಾಲುಗಳ ಮಧ್ಯೆ ಹೊಂಗೆ ಸೊಪ್ಪಿನ ಹಾಸನ್ನು ಮಾಡಿದ್ದಾರೆ. ಇದಕ್ಕೆ ಸೆಗಣಿ ಗೊಬ್ಬರ ಮತ್ತು ನೀರನ್ನು ಕಾಲಕಾಲಕ್ಕೆ ಬಿಡುವುದರಿಂದ ಎರೆಹುಳುಗಳು ಉತ್ಪತ್ತಿಯಾಗುತ್ತಿದೆ. ಗೀಡಗಳು ರೋಗ ರಹಿತವಾಗಿ ಉತ್ತಮ ಸೊಪ್ಪು ಬಿಡುತ್ತಿದೆ.
ಇಂಗು ಗುಂಡಿ: ಗಿರೀಶ್ ಅವರ ಜಮೀನು ದೊಡ್ಡ ಗುಡ್ಡದ ಬುಡದಲ್ಲಿದೆ. ರಾಮನಗರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಜಮೀನಿಗೆ ನೀರಿನ ಅಗತ್ಯವಿತ್ತು. ಅದಕ್ಕಾಗಿ ಇವರು ಕಂಡು ಕೊಂಡ ಪರಿಹಾರವೆಂದರೆ ಇಂಗುಗುಂಡಿಯನ್ನು ಮಾಡಿಕೊಳ್ಳುವುದು.
ಅದಕ್ಕಾಗಿ ಇವರು ತಮ್ಮ ಜಮೋನಿನ ಮೇಲ್ಬಾದಲ್ಲಿ9 ಹತ್ತು ಅಡಿ ಆಳ, 30 ಅಡಿ ಉದ್ದ, 40 ಅಡಿ ಅಗಲದ ಇಂಗುಗುಂಡಿಯನ್ನು ತೊಡಿದರು. ಬಿದ್ದ ಕಡಿಮೆ ಮಳೆಯ ನೀರು ಗುಡ್ಡದಿಮದ ಹರಿದು ಬಂದು ಇಂಗುಗುಂಡಿಯಲ್ಲಿ ಶೇಖರಣೆ ಆಗುತ್ತಿದೆ. ಇದರಿಂದ ಜಮೀನಲ್ಲಿ ಇರುವ ಬಾವಿ ಸದಾ ತುಂಬಿರುತ್ತದೆ. ಅಲ್ಲದೆ ಇವರ ಜಮೀನಿನ ಪಕ್ಕದಲ್ಲಿರುವ ಮಾವಿನ ತೋಟಕ್ಕೂ ಅನುಕೂಲವಾಗಿರುವುದು ಕಂಡು ಬಂದಿದೆ.
`ರೈತ ಸಂಘದ ಸೋಮಲಿಂಗಯ್ಯ ಹಾಗೂ ಪುಟ್ಟಸ್ವಾಮಿ ಸಹಕಾರದಿಂದ ಸುಸ್ಥಿರ ಕೃಷಿ ತರಬೇತಿಗೆ ಹೋಗಿ ಬಂದ ಮೇಲೆ ಇಂತಹ ದೇಶೀ ಕೃಷಿ ಬಗ್ಗೆ ಜಾಗೃತನಾಗಿದ್ದೇನೆ. ಖರ್ಚು ಕಡಿಮೆಯಾಗುತ್ತದೆ. ಇಂಗು ಗುಂಡಿ ಮಾಡಿಕೊಂಡಿರುವುದರಿಂದ ನೀರಿನ ಸಮಸ್ಯೆ ಇಲ್ಲ. ನಾನು ಮಾಡುತ್ತಿರು ಕೃಷಿ ಕ್ರಮಕ್ಕೆ ಮನೆಯವರ ಸಹಕಾರವು ಇದೆ' ಎಂದು ಗಿರೀಶ್ ಹೇಳುತ್ತಾರೆ.
ಮಾಹಿತಿಗಾಗಿ: ಗಿರೀಶ್ s/o ಶಿವಣ್ಣ
ಅರಳಾಳುಸಂದ್ರ,
ವಿರುಪಾಕ್ಷಪುರ ಹೋಬಳಿ
ಚನ್ನಪಟ್ಟಣ, ರಾಮನಗರ
ದೂರವಾಣಿ: 9900804677

2 comments:
ಲೇಖನ ಚೆನ್ನಾಗಿದೆ. ರೈತಾಪಿ ಬ್ಲಾಗ್ ಕೂಡ ಅಷ್ಟೇ ಸೊಗಸಾಗಿದೆ. ಇಂಥ ಬ್ಲಾಗ್ ಗಳನ್ನು ನಾಡಿನ ಎಲ್ಲ ರೈತರೂ ನೋಡುವಂತಹ ದಿನಗಳು ಬರಬೇಕು. ತಂತ್ರಜ್ಞಾನದ ಉಪಯೋಗ ಅವರಿಗೂ ಸಿಗಬೇಕು. ಆಲ್ ದಿ ಬೆಸ್ಟ್. ಅಂದ ಹಾಗೆ ಗ್ರಾಮೀಣ ಬದುಕು-ರೈತ ಜನ ಜೀವನ, ನೋವು-ನಲಿವಿನ ಬಗ್ಗೆ ನನ್ನ ನುಡಿಚೈತ್ರ ಬ್ಲಾಗ್ ನಲ್ಲಿ ಆಗಿಂದಾಗ್ಗೆ ಬರೆಯುತ್ತೇನೆ. ಓದಿ ಅಭಿಪ್ರಾಯ ತಿಳಿಸಿ.
ಕೇಶವ ಪ್ರಸಾದ್ ಬಿ ಕಿದೂರು
http://nudichaitra.blogspot.com
ನಿಜಕ್ಕೂ ಗುಣಾತ್ಮಕ ಲೇಖನ. ರೈತರು ಹೀಗೆ ಹೊಸ ಹಾದಿ ತುಳಿಯದ ಹೊರತು ಬಹು ರಾಷ್ಟ್ರೀಯ ಕಂಪೆನಿಗಳ ದಾಸರಾಗಿ ದುಡಿಯುವುದು ತಪ್ಪುವುದಿಲ್ಲ.. ಅದಕ್ಕೆ ಬರಹಗಾರರು, ವಿಜ್ಞಾನಿಗಲಿಗಿಂತ ರೈತರೇ ಕೃತಿಯ ಮೂಲಕ ಉತ್ತರ ಕೊಡುವುದನ್ನು ಕಲಿಯಬೇಕು.
Post a Comment