ಕಾಡಿನಲ್ಲಿ ಇರುವ ಬದನೆಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದನೆಗೆ ನಾಡ ಬದನೆಯನ್ನು ಸೇರಿಸಿ ಅದಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ. ಇವೆರಡು ಬಿಟ್ಟು ಮತ್ತೊಂದು ಇದೆ, ಇರುವ ಬದನೆಗೆ ಯಾವುದೋ ಜೀವಿಯ ಜೀನ್ ತಂದು ಸೇರಿಸಿ, ಅದನ್ನು ಮಾರ್ಪಡಿಸಿ ಅದು ಮುಂದೆಂದು ತನ್ನ ಸಂತಾನವನ್ನು ಪಡೆಯದಿರುವ ಹಾಗೇ ಮಾಡುವುದು ವಿಕೃತಿ. ಇದನ್ನು ಇಂದು ಬಹುರಾಷ್ಟ್ರೀಯ ಬೀಜ ಕಂಪನಿಗಳು ಮಾಡುತ್ತಿವೆ.
ಭಾರತ ಸಾಮಾಜಿಕವಾಗಿ, ಭೌಗೋಳಿಕವಾಗಿ ಮಾತ್ರ ವೈವಿಧ್ಯವಾಗಿರದೆ, ಇಲ್ಲಿನ ಬೇಸಾಯಗಳಲ್ಲೂ ವೈವಿಧ್ಯವಾಗಿದೆ. ತರಕಾರಿಯಲ್ಲೂ ಸಹ. ನಮ್ಮಲ್ಲಿನ ಬಹುತೇಕ ಜನರು ಉಪಯೋಗಿಸುವ ಬದನೆ ವೈವಿಧ್ಯತೆಯಿಂದ ಕೂಡಿರುವ ತರಕಾರಿಗಳಲ್ಲೊಂದು. ವಿದೇಶಿ ಕಂಪನಿ ತಮ್ಮ ನೆಲವನ್ನು ಬಿಟ್ಟು ನಮ್ಮಲ್ಲಿಗೆ ಬಂದು `ಬಹುವದನೆ'ಯಾದ ಬದನೆಯ `ಕುಲ'ಗೆಡಿಸುವ ಕಾರ್ಯವನ್ನು ಮಾಡುತ್ತಿವೆ. ಅಂದರೆ `ಕುಲಾಂತರಿ ತಳಿಯನ್ನು ತಯಾರು ಮಾಡುತ್ತಿವೆ. ಆಸ್ಟ್ರಿಯಾ, ಇಟಲಿ ಮತ್ತು ಕೆಲವು ಯುರೋಪ್ ದೇಶಗಳಲ್ಲಿ `ಕುಲಾಂತರಿ' ತಳಿ/ ಆಹಾರವನ್ನು ನಿಷೇಧ ಮಾಡಿರುವಾಗಲೇ ನಮ್ಮಲ್ಲಿಗೆ ಅವರು ಬಂದಿದ್ದಾರೆ.
ಕುಲಾಂತರಿ ಅಥವಾ ಬಿಟಿ ಬದನೆ:
ಮಣ್ಣಿನಲ್ಲಿರುವ ಬ್ಯಾಸಿಲಸ್ ಥುರನ್ಜೆನಿಸಸ್ ಎನ್ನುವ ಬ್ಯಾಕ್ಟೀರಿಯಾಕ್ಕೆ ಬಿಟಿ ಎನ್ನುತ್ತಾರೆ. ಇದಕ್ಕೆ ಕಾಯಿ ಮತ್ತು ಕಾಂಡ ಕೊರಕ ಕೀಟಗಳಿಗೆ ಮಾರಕವಾಗಬಲ್ಲ ಪ್ರೋಟೀನು ಉತ್ಪಾದಿಸುವ ಸಾಮರ್ಥ್ಯವಿದೆ. ಕೀಟಗಳಿಗೆ ಮೃತ್ಯುಕಾರಕವಾಗಬಲ್ಲ ಬ್ಯಾಕ್ಟಿರೀಯಾದ ವಂಶವಾಯಿ(ಜೀನ್)ಯನ್ನು ನಮ್ಮಲ್ಲಿಯ ಬದನೆಯೊಳಗೆ ಸೇರಿಸುತ್ತಾರೆ. ಇದು ಹೊಲಿಗೆಯವ ಪ್ಯಾಂಟನ್ನು ಕತ್ತರಿಸಿ ಹೋಲಿದಷ್ಟು ಸುಲಭವಲ್ಲ. ಅತ್ಯಾಧುನಿಕ ಸಲಕರಣೆಗಳು ಬೇಕು. ಇದು ಕೋಟ್ಯಾಂತರ ಡಾಲರ್ ಖರ್ಚಿನ ಬಾಪತ್ತು.
ಹೀಗೆ ತಯಾರಿಸಿದ ಬದನೆ, ಬಿಟಿಯನ್ನು ತನ್ನ ಮೈಯೊಳಗೆ ತುಂಬಿಸಿ ಕೊಳ್ಳುತ್ತದೆ. ಇದೊಂದು ರೀತಿ ಮೈಯೆಲ್ಲಾ ವಿಷ ಇರುವ `ಪೂತನಿ'ಯಾಗಿರುತ್ತದೆ. ಹೀಗಿರುವಾಗ ಬದನೆಯ ಮೇಲೆ ದಾಳಿ ಮಾಡುವ ಕಾಂಡಕೊರಕ, ಕಾಯಿಕೊರಕ ಹುಳುಗಳ ಬಾಧೆ ಇದಕ್ಕೆ ಇರುವುದಿಲ್ಲ. ಕಾರಣವಿಷ್ಟೇ ಬಿಟಿ ಬದನೆಯನ್ನು ತಿಂದ ಹುಳುಗಳ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ಸಾಯುತ್ತವೆ. ಔಷಧಿ ಹೊಡೆಯುವ ಸಮಸ್ಯೆಯಿರುವುದಿಲ್ಲ. ಇಳುವರಿ ತಾನಾಗಿಯೇ ಹೆಚ್ಚಾಗುತ್ತದೆ.
ಇದನ್ನೆಲ್ಲಾ ನೋಡಿದಾಗ `ಅಬ್ಬಾ! ಎಂತಹ ತಂತ್ರಜ್ಞಾನ? ಆಗಬಹುದು' ಎಂದು ಕೊಂಡರೆ ತಪ್ಪಾಗುತ್ತದೆ. `ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ' ಆಗುತ್ತದೆ. ಕಾಂಡವನ್ನೇ ತಿಂದು ಜೀರ್ಣಿಸಿಕೊಳ್ಳುವ ಹುಳುಗಳೇ ಸಾಯಬೇಕಾದರೆ. ಬದನೆಯನ್ನು ನಿತ್ಯದ ಆಹಾರಗಳಲ್ಲಿ ಒಂದಾನ್ನಾಗಿಸಿ ಕೊಂಡ ಮನುಷ್ಯನ `ಗತಿ' ಎನಾಗಬಾರದು? ಇಂತಹ ಪ್ರಯೋಗ ಈಗಾಗಲೇ ಉಡುಪಿಯ ಮಟ್ಟುಗುಳ್ಳದ ಮೇಲಾಗಿರುವುದು ವಿಷಾಧದ ಸಂಗತಿ.
ಕುಲಾಂತರಿ ಬದನೆ ತಿಂದರೆ ನರನಿಗೆ ಪ್ರಾಂಭವಾಗಬಹುದು ನರಳಾಟ:
ಬಿಟಿಯ ದುಷ್ಪರಿಣಾಮದ ಬಗ್ಗೆ ಹೇಳುವಾಗ ಬಿಟಿ ಹತ್ತಿ ನೆನಪಾಗುತ್ತದೆ. ಯಾವುದೇ ಕೀಟಗಳು ದಾಳಿ ಮಾಡಲು ಸಾಧ್ಯವಿಲ್ಲ ಎನ್ನುವ ಬಿಟಿ ತಳಿಗಳಿಗೆ ರಸಹೀರುವ ಕೀಟಗಳು ದಾಳಿನಡೆಸುತ್ತವೆ ಎನ್ನುವುದನ್ನು ಸರ್ಕಾರಿ ದಾಖಲೆಗಳು ಹೇಳುತ್ತವೆ. ಬಿಟಿ ಹತ್ತಿಯನ್ನು ಬೆಳೆದ ರೈತ ಕೀಟನಾಶಕವನ್ನು ಬಳಸಬೇಕಾಗುತ್ತದೆ. ಅದಕ್ಕೆ ಮತ್ತಷ್ಟು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಬಿಟಿಹತ್ತಿ ಬೆಳೆದ ಆಂದ್ರಪ್ರದೇಶದ ವಿಧರ್ಭ ಪ್ರಾಂತ್ಯದ ರೈತರೇ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚು.
ಬೆಳೆಯ ನಂತರ ಗಿಡದ ಬಿಟಿ ಜೀನ್ ಮಣ್ಣಿನ ಬ್ಯಾಕ್ಟೀರಿಯಾ ವರ್ಗಾವಣೆಯಾಗುವ ಸಾಧ್ಯತೆ ಇದೆ. ಬಿಟಿ ಬೀಟ್ರೂಟ್ನಲ್ಲಿ ಇದು ಆಗಿದೆ. `ಮಣ್ಣಿನ ಸೂಕ್ಷ್ಮಜೀವಿಗಳ ಮೇಲೆ ಬಿಟಿಯಿಂದಾಗುವ ಪರಿಣಾಮದ ಅಧ್ಯಯನಗಳು ಆಗಿಲ್ಲ' ಎನ್ನುತ್ತಾರೆ ಹಿರಿಯ ವಿಜ್ಞಾನಿ ಡಾ.ಬಾಲರವಿ.
ಇನ್ನೂ ಬಿಟಿಬದನೆಯನ್ನು ತಿಂದ ಮನುಷ್ಯನ ಜೀರ್ಣಾಂಗದ ಕರುಳಿನ ಬ್ಯಾಕ್ಟೀರಿಯಾಕ್ಕೆ ವರ್ಗಾವಣೆಯಾಗುವ ಸಂಭವ ಹೆಚ್ಚಿದೆ. ಇದರಿಂದ ರೋಗ ನಿರೋಧಕ ಶಕ್ತಿಯ ಮೇಲೆ ಅಡ್ಡ ಪರಿಣಾಮ ಬೀರುವುದು ಮಾತ್ರವಲ್ಲದೇ ಜೀವಕೋಶಗಳು ಅಸಹಜವಾಗಿ ಬೆಳೆಯುವ ಸಾಧ್ಯತೆಯಿದೆ. ಬಿಟಿಯ ಉಪುತ್ಪನ್ನಗಳನ್ನು ತಿಂದ ದನಕರುಗಳು, ಕುರಿಗಳು ಸಾವನ್ನಪ್ಪಿರುವುದು ಕಂಡುಬಂದಿದೆ. ಬಿಟಿ ತಳಿಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಅಲರ್ಜಿ, ತುರಿಕೆ, ದದ್ದುಗಳು ಎದ್ದ ವರದಿಗಳು ಈಗಾಗಲೇ ಪ್ರಕಟಗೊಂಡಿದೆ.
ಇದಲ್ಲೆಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯದಲ್ಲಿ ಸಾವಯವ ಕೃಷಿ ನೀತಿಯನ್ನು ಜಾರಿಗೊಳಿಸಿದೆ. ಸಾವಯವ ಮಿಷನ್ ಕೆಲಸ ಮಾಡುತ್ತಿದೆ. ಸಾವಯವ ಗ್ರಾಮಗಳು ರಚಿತವಾಗಿದೆ. ಹೀಗಿರುವಾಗ ಕುಲಾಂತರಿ ತಳಿಯಲ್ಲಿ ಕೃಷಿ ಮಾಡಿದರೆ ಸಾವಯವ ಧೃಢೀಕರಣ ನೀಡುವಂತಿಲ್ಲ. ಸಾವಯವ ರೀತಿಯಲ್ಲಿಯೇ ಬಿಟಿ ತಳಿಗಳನ್ನು ಬೆಳೆಸಿದ್ದರೂ `ಸಾವಯವ ಲೇಬಲ್' ಹಚ್ಚಿ ಮಾರುವಂತಿಲ್ಲ.
ಏಕಸ್ವಾಮ್ಯದ ಹುನ್ನಾರವೇ?
`ಜೀನ್' ತಂತ್ರಜ್ಞಾನ ಸಾಮಾನ್ಯ ಜನರಿಗೆ ಸಿಗುವುದಿಲ್ಲ. ಯಾಕೆಂದರೆ, ಅವುಗಳ ಪೇಟೆಂಟ್ ಬಹುರಾಷ್ಟ್ರೀಯ ಕಂಪನಿಯ ಕಪಿಮುಷ್ಟಿಯಲ್ಲಿದೆ. ಕುಲಾಂತರಿ ತಳಿಯನ್ನು ಬೆಳೆಯ ಬೇಕೆಂದರೆ ಕಂಪನಿಗೆ ಮಾರುಹೋಗಬೇಕು. ಅವರು ನೀಡುವ ಜೀಬವನ್ನೇ ಬಿತ್ತಬೇಕು. ಕುಲಾಂತರಿ ತಳಿಗಳಿಂದ ಬೀಜವನ್ನು ದ್ವಿಗುಣಗೊಳಿಸಲಿಕ್ಕೆ ಸಾಧ್ಯವಿಲ್ಲ. ಇಳುವರಿಯನ್ನು ಮನದಲ್ಲಿಟ್ಟುಕೊಂಡು `ಕುಲಾಂತರಿ'ಯನ್ನು ಬೆಳೆಸಲಿಕ್ಕೆ ತೋಡಗಿದರೆ `ಬಿತ್ತನೆ ಬೀಜಕ್ಕಾಗಿ' ಪರದಾಡುವುದು ತಪ್ಪುವುದಿಲ್ಲ. ಕಂಪನಿಗಳು ನಮ್ಮಲ್ಲಿನ ವೈವಿಧ್ಯತೆಯನ್ನು ನಾಶ ಮಾಡಿ `ಏಕರೂಪ ಕೃಷಿ'ಯನ್ನು ಹೇರುವುದಕ್ಕೆ ಪ್ರಯತ್ನಿಸುತ್ತಿರುವುದು ಇವರ ಪ್ರಯೋಗಗಳಿಂದ ತಿಳಿಯುತ್ತದೆ. ಅಂದರೆ ಇವರ ಮೂಲ ಉದ್ದೇಶ ರೈತರಿಗೆ ಬೇಕಾಗುವ ಬಿತ್ತನೆ ಬೀಜದ ಮೇಲೆ ಏಕಸ್ವಾಮ್ಯವನ್ನು ಹೊಂದುವುದು ಎನ್ನುವುದು ಸ್ಪಷ್ಟ. ಒಂದು ದೃಷ್ಟಿಯಿಂದ ನೋಡಿದರೆ `ಅಮಲು ಪದಾರ್ಥದ' ಚಟ್ಟದಂತೆ ರೈತರಿಗೆ ತಾವು ತಯಾರಿಸಿದ ಬಿಟಿ ತಳಿಗಳಿಂದ ಮಾಡಲಿಕ್ಕೆ ಹೊರಟಿರುವುದು ಸ್ಪಷ್ಟವಾಗುತ್ತದೆ.
ಕುಲಾಂತರಿ ವಿರುದ್ಧ ಹೋರಾಟ:
ಅಂತರಾಷ್ಟ್ರೀಯ ಪರಿಸರಪರ ಸಂಘಟನೆಗಳು `ಜಿ.ಎಂ. ಆಹಾರದ ವಿರುದ್ಧ ಈಗಾಗಲೇ ದನಿ ಎತ್ತಿ ಹೋರಾಟವನ್ನು ಮಾಡುತ್ತಿದ್ದಾರೆ. ದೆಹಲಿಯಲ್ಲಿ ರೈತರು ಬೀದಿಗೆ ಇಳಿದು ಹೋರಾಟವನ್ನು ಮಾಡಿದ್ದಾರೆ. ಕೇಂದ್ರ ಆಹಾರ ಮಂತ್ರಿ ಅಂಬುಮಣಿ ರಾಮದಾಸ್ ಕುಲಾಂತರಿ ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಕರ್ನಾಟಕದಲ್ಲೂ ಸಹಜ ಸಮೃದ್ಧ, ಗ್ರೀನ್ಪೀಸ್ ಮುಂತಾದ ಸಂಘಟನೆಗಳು ರೈತ ಸಂಘದ ಜೊತೆಗೂಡಿ ` ನಾನೂ ಪ್ರಯೋಗ ಪಶುವಲ್ಲ' ಎನ್ನುವ ಚಳುವಳಿಯನ್ನು ಕುಲಾಂತರಿಯ ವಿರುದ್ಧ ರೂಪಿಸಿದೆ. ಇವರಿಗೆ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ, ಸಾಹಿತಿ ಯು.ಆರ್. ಅನಂತಮೂರ್ತಿ ಮುಂತಾದ ಚಿಂತಕರು ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.
ಕೊನೆಯಲ್ಲಿ: ಕುಲಾಂತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವುಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗಳದಲ್ಲಯೇ ಕಾಯುತ್ತ ನಿಂತಿವೆ. ಕುಲಾಂತರಿಯ ಪ್ರಯೋಗ ಫಲಿತಾಂಶ ಸಾರ್ವಜನಿಕರೆದುರು ಪಾರದರ್ಶಕವಾಗಿ ತೆರೆದಿಡಬೇಕು ಎನ್ನುವ ಆಗ್ರಹ ಸಂಘಟನೆಗಳದ್ದು.
ರೈತರ ಪ್ರಗತಿ ನೆಪ ಮಾಡಿಕೊಂಡು ಕಂಪನಿಗಳು ಸಾಂಪ್ರದಾಯಿಕ ಕೃಷಿ ಹಾಳುಮಾಡಲು ಹೊರಟಿರುವ `ತಂತ್ರ'ಜ್ಞಾನ ನಮಗೆ ಬೇಕೆ?
ನಾಗರಾಜ ಮತ್ತಿಗಾರ
ಉದಯವಾಣಿ ಕೃಷಿ ಸಂಪದದಲ್ಲಿ ಪ್ರಕಟಗೊಂಡ ಲೇಖನ

2 comments:
ನೀವು ಈ ಬಗ್ಗೆ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.
ಧನ್ಯವಾದಗಳು
ಸಕ್ಕತ್ ಲೇಖನ, ನೀವು ಕೃಷಿಯ ಬಗ್ಗೆ ಬರೀತಾ ಇರೋದು ನೋಡಿ ತುಂಬಾ ಸಂತೋಷ ಆಯ್ತು..
--
ಪಾಲ
Post a Comment