ನೆರೆಯ ಆಂಧ್ರಪ್ರದೇಶದಲ್ಲಿ ಸಾಧ್ಯವಾಗಿರುವುದು? ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಇದೇನಾ ಪರಿಹಾರ?
ಅಕ್ಕಿ ಬೆಲೆ ಕೈಗೆಟುಕದ ರೀತಿಯಲ್ಲಿ ಗಗನಮುಖಿ ಆಗಿರುವ ಕಾರಣ ತತ್ತರಿಸಿರುವ ಜನಸಾಮಾನ್ಯರಿಂದ ಕೇಳಿ ಬರುತ್ತಿರುವ ಪ್ರಶ್ನೆಗಳಿವು.
ಆಂಧ್ರಪ್ರದೇಶದಲ್ಲಿಯೂ ಸರ್ಕಾರವಿದೆ. ರಾಜ್ಯದಲ್ಲಿರುವಂತಹ ಕಾನೂನುಗಳೇ ಅಲ್ಲಿಯೂ ಇವೆ. ಅಲ್ಲಿ ಅಕ್ಕಿಯ ಬೆಲೆ ನಿಯಂತ್ರಣಕ್ಕೆ ತರುವ ರೀತಿಯಲ್ಲಿ ರಫ್ತಿನ ಮೇಲೆ ನಿಯಂತ್ರಣ ತರಲು ಸಾಧ್ಯವಾಗುತ್ತದೆ. ಆದರೆ ರಾಜ್ಯದಲ್ಲಿನ ಸರ್ಕಾರ ಏನು ಮಾಡುತ್ತಿದೆ? ಜನ ಸಾಮಾನ್ಯರ ಆಕ್ರೋಶ ಈ ರೀತಿಯಲ್ಲಿ ಕಟ್ಟೆಯೊಡೆಯುತ್ತಿದೆ.
ಅಕ್ಕಿಯ ಬೆಲೆ ಕಳೆದ ಕೆಲವು ತಿಂಗಳಿನಿಂದ ಏರುಗತಿಯಲ್ಲಿಯೇ ಇದೆ. ಕಳೆದ ಒಂದೇ ತಿಂಗಳಿನಲ್ಲಿಯೇ ಪ್ರತಿ ಕೆಜಿಗೆ 3 ರಿಂದ 5 ರೂ.ಗಳ ತನಕ ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ 10 ರಿಂದ 13 ರೂ.ಗಳ ತನಕ ಅಕ್ಕಿಯ ಬೆಲೆ ಏರಿಕೆಯಾಗಿದೆ. ಇದು ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಾಗಲಿದೆ ಎಂಬ ಆಘಾತಕಾರಿ ಸುದ್ದಿಯೂ ವರ್ತಕ ಸಮುದಾಯದಲ್ಲಿದೆ. ಈ ಸದ್ಯಕ್ಕೆ ಬೆಲೆ ಹೆಚ್ಚಳವಾಗಿದೆ. ಮುಂದೆ ಕೊರತೆಯೂ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಅದಕ್ಕೂ ಮೊದಲು ಪರಿಹಾರ ಎಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ಕರ್ನಾಟಕ ರಾಗಿ, ಜೋಳ, ಗೋಧಿಯ ಜತೆಗೆ ಅಕ್ಕಿ ಸಹ ಹೆಚ್ಚು ಉಪಯೋಗಿಸುವ ರಾಜ್ಯಗಳ ಸಾಲಿಗೆ ಸೇರುತ್ತದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಈಗ ಉಂಟಾಗಿರುವ ಸಮಸ್ಯೆಗೆ ತನ್ನದೇ ಆದ ಕೆಲವು ಕಾರಣಗಳಿವೆ.
ಒಂದೆಡೆ ಆಂಧ್ರ ಪ್ರದೇಶ ಅಕ್ಕಿ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧ, ಇನ್ನೊಂದೆಡೆ ರಾಜ್ಯದಲ್ಲಿ ಉತ್ಪಾದನೆಯಲ್ಲಿ ಆಗಿರುವ ಕುಂಠಿತ, ಕಡಿಮೆಯಾಗುತ್ತಿರುವ ಇಳುವರಿ, ಮತ್ತೊಂದೆಡೆ ಅಕ್ಕಿ ಬಳಕೆಯ ಪ್ರಮಾಣ ಹೆಚ್ಚುತ್ತಿರುವುದು ಹೀಗೆ ಅನೇಕ ಕಾರಣಗಳನ್ನು ಗುರುತಿಸಬಹುದಾಗಿದೆ.
ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಅಕ್ಕಿ ಬಳಕೆಯ ಯಥೇಚ್ಚವಾಗಿಯೇ ಆಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಜೋಳದ ಜತೆಗೆ ಅಕ್ಕಿಯ ಬಳಕೆಯಾದರೆ, ಹಳೇ ಮೈಸೂರು ಭಾಗದಲ್ಲಿ ರಾಗಿಯ ಜತೆಗೆ ಬಳಸಲಾಗುತ್ತದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಕ್ಕಿಯೇ ಪ್ರಮುಖ ಉಪಯೋಗದ ಆಹಾರ ಉತ್ಪನ್ನ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರವೊಂದಕ್ಕೆ ಪ್ರತಿ ನಿತ್ಯ 50 ಲಾರಿ ಲೋಡ್ನಷ್ಟು ಅಕ್ಕಿ ವ್ಯಾಪಾರಿಗಳಿಗೆ ಬೇಕಾಗುತ್ತದೆ. ಇಡೀ ರಾಜ್ಯಕ್ಕೆ ದಿನಕ್ಕೆ ಎಷ್ಟು ಅಕ್ಕಿ ಬೇಕಾಗುತ್ತದೆ ಎಂಬುದನ್ನು ಈ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತಿದೆ.
ರಾಜ್ಯಕ್ಕಿಂತ ಆಂಧ್ರಪ್ರದೇಶ ಅಕ್ಕಿ ಹೆಚ್ಚು ಬೆಳೆಯುವ ರಾಜ್ಯ. ಪ್ರತಿ ವರ್ಷ ಅಲ್ಲಿಂದ ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿ ರಫ್ತು ಆಗುತ್ತಿತ್ತು. ಆದರೆ ಈ ವರ್ಷ ನಿಷೇಧ ಮಾಡಿರುವ ಪರಿಣಾಮ ಬೇರೆ ರಾಜ್ಯದ ವ್ಯಾಪಾರಿಗಳೆಲ್ಲ ಕರ್ನಾಟಕವನ್ನು ಅವಲಂಬಿಸಿದ್ದಾರೆ. ರಾಜ್ಯದಿಂದ ಪ್ರತಿ ವರ್ಷ ಆಗುತ್ತಿದ್ದ ರಫ್ತುವಿನ ಪ್ರಮಾಣದಲ್ಲಿ ಶೇ.30ರಷ್ಟು ಹೆಚ್ಚಾಗಿದೆ. ಬೇರೆ ರಾಜ್ಯದ ವ್ಯಾಪಾರಿಗಳು ಇಲ್ಲಿಗೆ ಆಗಮಿಸಿ ಅಕ್ಕಿ ಖರೀದಿ ಮಾಡಲಾರಂಭಿಸಿರುವ ಪರಿಣಾಮ ಬೆಲೆಯಲ್ಲಿ ಹೆಚ್ಚಳವಾಗಿದೆ.
ಆಂಧ್ರಪ್ರದೇಶದಲ್ಲಿ ರಫ್ತುವಿನ ಮೇಲೆ ನಿಯಂತ್ರಣ ಹಾಕಿರುವ ಪರಿಣಾಮ ಅಲ್ಲಿ ಅತ್ಯುತ್ತಮ ಅಕ್ಕಿಯ 19.40 ರೂ.ಗಳಿಗೆ ಲಭ್ಯವಾಗುತ್ತಿದೆ ಎಂಬುವುದು ಅಲ್ಲಿಂದ ದೊರಕಿರುವ ಮಾಹಿತಿ. ಆದರೆ ಅದೇ ಅಕ್ಕಿ ರಾಜ್ಯದಲ್ಲಿ ಈಗ 30 ರೂ.ಗಳಿಗಿಂತ ಕಡಿಮೆ ದರಕ್ಕೆ ಲಭ್ಯವಾಗುವುದಿಲ್ಲ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುನ್ನ ಹೇಳಿದ ಬಿಜೆಪಿಯೇ ಪರಿಹಾರ ಎಂಬ ಮಾತು ಈಗ ಸುಳ್ಳಾಗಿದೆ. ಏಕೆಂದರೆ ಮುಂದಿನ ವರ್ಷದಲ್ಲಿ ಈ ದರ ಇನ್ನೂ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸಲಾರಂಭಿಸಿವೆ. ಅದಕ್ಕೂ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ರಾಜ್ಯದಲ್ಲಿ ಈ ವರ್ಷ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ನಾಟಿಯಾಗಿಲ್ಲ. ಈ ವರ್ಷದ ಮೂರು ಹಂಗಾಮುಗಳಿಂದ 14.07 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯ ಗುರಿ ಇತ್ತು. ಇನ್ನೂ ಬೇಸಿಗೆಯ ಹಂಗಾಮು ನಾಟಿಯಾಗಿಲ್ಲ. ಮುಂಗಾರಿನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಮಳೆ ಆಶ್ರಯದಲ್ಲಿ ಬಿತ್ತನೆಯೇ ಆಗಲಿಲ್ಲ. ಕೆಲವು ಭಾಗದಲ್ಲಿ ಹೆಚ್ಚು ಮಳೆಯಿಂದ ಹಾನಿಯಾಗಿದೆ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಎಲ್ಲಾ ಹಂಗಾಮುಗಳಲ್ಲಿ ಉತ್ತಮ ಬೆಳೆ ಬಂದರೆ 40.78 ಲಕ್ಷ ಅಕ್ಕಿಯ ಉತ್ಪಾದನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಈಗ ಬೇಸಿಗೆಯಲ್ಲಿಯೂ ಉತ್ತಮವಾಗಿ ಆದರೆ ಮಾತ್ರ 38 ಲಕ್ಷ ಟನ್ ಆಗಬಹುದೆಂದು ಅಂದಾಜು ಮಾಡಲಾಗುತ್ತಿದೆ. ಆದರೆ ಬೇಸಿಗೆಯಲ್ಲಿ ಆ ಪ್ರಮಾಣದಲ್ಲಿ ಆಗುವ ಸಾಧ್ಯತೆಗಳಿಲ್ಲದ ಕಾರಣ 30 ರಿಂದ 35 ಲಕ್ಷ ಟನ್ಗೆ ನಿಲ್ಲಬಹುದು ಎಂಬುದು ಒಂದು ಮೂಲದಿಂದ ಲಭ್ಯವಾಗುವ ಮಾಹಿತಿ.
ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಆಹಾರ ಭದ್ರತೆ ಮಿಷನ್ನಲ್ಲಿ ರಾಜ್ಯಕ್ಕೆ ಭತ್ತ ಮತ್ತು ದ್ವಿದಳ ಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಏಳು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಅಕ್ಕಿಯ ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಆದರೆ ಲಭ್ಯವಿರುವ ಮತ್ತೊಂದು ಮೂಲದ ಪ್ರಕಾರ ಕೆಲವು ಜಿಲ್ಲೆಗಳಲ್ಲಿ ಇಳುವರಿ ಕುಂಠಿತವಾಗುತ್ತಿದೆ. 15 ರಿಂದ 20ರಷ್ಟು ಭತ್ತದ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ರೀತಿಯಾದರೆ ನಿರೀಕ್ಷಿತ ಪ್ರಮಾಣದ ಉತ್ಪಾದನೆ ಕುಸಿತವಾಗುತ್ತದೆ. ಆಗ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಏಕೆಂದರೆ ರಾಜ್ಯಕ್ಕೆ ಆಂಧ್ರಪ್ರದೇಶದಿಂದ ಸಾಕಷ್ಟು ಅಕ್ಕಿ ಬರುತ್ತಿತ್ತು, ಆದರೆ ಈಗ ಅದು ನಿಂತಿದೆ.
ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇದರಿಂದ ರೈತರು ಸಂತೋಷದಲ್ಲಿದ್ದಾರೆ. ಆದರೆ ಅಕ್ಕಿಯ ಬೆಲೆ ನಿಯಂತ್ರಣಕ್ಕೆ ಸರ್ಕಾರ ಶ್ರಮವಹಿಸುತ್ತಿಲ್ಲ ಎಂಬ ದೂರುಗಳಿವೆ.
ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಎಚ್. ಹಾಲಪ್ಪ ಹೇಳುವುದು, ಪಡಿತರದಲ್ಲಿ ವಿತರಣೆ ಮಾಡುವ ಆಹಾರ ಧಾನ್ಯದ ಬಗ್ಗೆ ಮಾತ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತದೆ ಹೊರತು ಇನ್ನುಳಿದ ವಿಚಾರದಲ್ಲಿ ಅಲ್ಲ.
ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಲು ಎಲ್ಲಾ ಪ್ರಯತ್ನ ಮಾಡಿ ವಿಫಲವಾಗಿದ್ದೇವೆ. ಯಾವುದೇ ಕಾನೂನಿನಲ್ಲಿ ಇದು ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲುತ್ತಾರೆ.
ಪಡಿತರಕ್ಕೆ ಸಮಸ್ಯೆ ಇಲ್ಲ:
ಪಡಿತರಕ್ಕೆ ಸಮಸ್ಯೆಯಾಗುವ ಸಾಧ್ಯತೆಗಳಿಲ್ಲ. ಏಕೆಂದರೆ ಈ ವರ್ಷ ಸರ್ಕಾರ ಲೆವಿ ಸಂಗ್ರಹಣೆ ಬಿಗಿಯಾಗಿ ಮಾಡುತ್ತಿದೆ. ರಾಜ್ಯದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಲೆವಿ ಸಂಗ್ರಹ ಮಾಡುತ್ತಿದೆ. ಕಳೆದ ಆರೇಳು ವರ್ಷದಿಂದ ನಿಂತಿದ್ದ ಲೆವಿ ಸಂಗ್ರಹಕ್ಕೆ ಈಗ ಚಾಲನೆ ನೀಡಲಾಗಿದೆ.
ಆದರೆ ಸಮಸ್ಯೆಯಾಗುವುದು ಪಡಿತರ ಬಿಟ್ಟು ಬೇರೆಯವರು ಖರೀದಿ ಮಾಡುವ ಭತ್ತಕ್ಕೆ. ಪಡಿತರದಲ್ಲಿ ನೀಡುವುದು ಕೇವಲ ಹಸಿರು ಕಾರ್ಡ್ ಹೊಂದಿರುವ ಕಡು ಬಡವರಿಗೆ ಮಾತ್ರ.
ಈಗ ಬೆಲೆ ಹೆಚ್ಚಳವಾಗಿದೆ. ಮುಂದೆ ಕೊರತೆಯೂ ಉಂಟಾದರೆ ಜನ ಸಾಮಾನ್ಯರನ್ನು ಕಾಪಾಡಲು ನಿಜಕ್ಕೂ ಆ ದೇವರೇ ಬರಬೇಕಾಗುತ್ತದೆ.
ರುದ್ರಣ್ಣ ಹರ್ತಿಕೋಟೆ
(ಕೃಪೆ-ಉದಯವಾಣಿ ವಾಣಿಜ್ಯ ಸಂಪದ)

1 comment:
hmm Innu hechina smasye khandita
Post a Comment