Tuesday, October 20, 2009

ಸುರೇಶಣ್ಣನ ಜೇನು ಕೃಷಿ



ಹೆದ್ದಾರಿ ಬದಿಯ ಬಯಲು. ಅಲ್ಲ ಜೇನು ಪೆಟ್ಟಿ­ಗೆ­ಗಳ ಸಾಲು! ಮಧ್ಯೆ ಒಂದು ಸಣ್ಣ ಟೆಂಟ್‌. ರಸ್ತೆ ಬದಿ­ಯಲ್ಲಿ ಜೇನು ತುಂಬಿದ ಬಾಟಲಿ. ಕೂತು­ಹಲ, ಜೇನು ಇರುವ ಜಾಗಕ್ಕೆ ಬಂದರೆ ಬಿಡಾ­ರದ ಒಳ­ಗಿಂದ ಕೆಂಪು ಕಪ್ಪು ಮಿಶ್ರಿತ ಗಡ್ಡ ಇರುವ ವ್ಯಕ್ತಿ ಬನ್ನಿ ಎಂದು ಟೆಂಟ್‌ಗೆ ಸ್ವಾಗ­ತಿ­ಸು­ತ್ತಾರೆ. ಉಪ­ಚಾ­ರ­ಕ್ಕಾಗಿ ಆಗಷ್ಟೇ ಹಿಂಡಿದ ಮಧು­ವನ್ನು ನೀಡು­ತ್ತಾರೆ.
ಇವರು ನಮ್ಮ ರಾಜ್ಯದ ಸಂಚಾರಿ ಜೇನು ಕೃಷಿ­ಯಲ್ಲಿ ಅಗ್ರ ಪಂಕ್ತಿ­ಯ­ಲ್ಲಿ­ರುವ ಸುರೇಶ ಕರ್ಕೇರಾ(9448409675). ಉಡುಪಿ ಜಿಲ್ಲೆಯ ಬ್ರಹ್ಮಾ­ವರ ಇವ­ರೂರು.
ಪ್ರಾಥ­ಮಿಕ ಶಿಕ್ಷ­ಣಕ್ಕೆ ವಿದ್ಯೆ ಮುಕ್ತಾಯ. ಹೋಟೆಲ್‌ ಮಾಣಿ­ಯಾಗಿ ಸ್ವಯಂ ಸಂಪಾ­ದ­ನೆಯ ಜೀವನ ಆರಂಭ. ಸ್ವತಃ ಹೋಟೆಲ್‌ ಪ್ರಾರಂ­ಭಿಸಿ, ನಷ್ಟ ಅನು­ಭ­ವಿಸಿ ಕೈ ಸೋತು ಉದ್ಯೋ­ಗಾ­ಕಾಂ­ಕ್ಷಿ­ಯಾಗಿ ನಿರು­ದ್ಯೋ­ಗ­ದಿಂದ ಕುಳಿ­ತಾಗ ರುಡ್‌­ಸೆಟ್‌ ಸಂಸ್ತೆ­ಯಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ. ನಂತರ ಜೇನು ಜೀವನ ಶುರು.
ಸ್ವಂತ ಸಾಕಾ­ಣಿಕೆ ಮಾಡುವ ಮೊದಲು ಹಲ­ವ­ರಿಗೆ ಜೇನು ತುಪ್ಪ ಸರ­ಬ­ರಾಜು ಮಾಡು­ವುದು, ಜೇನು ಸಾಕಾ­ಣಿಕೆ ಮಾಡು­ವ­ವ­ರಿಗೆ ಜೇನು ಹಿಳು­ಗ­ಳನ್ನು ಹಿಡಿದು ಕೊಡು­ವುದು, ಜೇನು ಪೆಟ್ಟಿಗೆ ತಂದು ಕೊಡುವ ಕೆಲಸ ಮಾಡು­ತ್ತಿ­ದ್ದ­ರಂತೆ. ಇವರು ಜೇನು ಕುಟುಂ­ಬ­ಗಳು ಒಂದು ವರ್ಷ­ಕ್ಕಿಂತ ಹೆಚ್ಚಿಗೆ ದಿನ ನಿಲ್ಲದೆ ಹಾರಿ ಹೋಗು­ತ್ತಿ­ದ್ದವು. ಕೆಲ­ವಕ್ಕೆ ಕಾಯಿಲೆ ಬಂದು ಸತ್ತು ಹೋದವು. ಈ ರೀತಿಯ ಅನು­ಭವ ಸ್ವಂತ ಸಾಕಾ­ಣಿಕೆ ಮಾಡು­ವಲ್ಲಿ ಸಹ­ಕಾ­ರಿ­ಯಾ­ಯಿತು. ಅವು­ಗಳ ಬೇಡ­ಗಳ ಅರಿ­ವಾ­ಯಿತು. ಯಾವ ರೀತಿಯ ಪರಿ­ಸ­ರ­ದಲ್ಲಿ ಇವು ಉತ್ತ­ಮ­ವಾಗಿ ಕೆಲಸ ಮಾಡು­ತ್ತೇವೆ ಎಂದು ತಿಳಿ­ಯಿತು. ಜೇನು ಕುಟುಂ­ಬ­ವನ್ನು ಉಳಿ­ಸಿ­ಕೊ­ಳ್ಳ­ಲಿ­ಕ್ಕಾಗಿ ಇವು­ಗ­ಳಗೆ ಬೇಕಾದ ಸೂಕ್ತ ಪರಿ­ಸರ ಒದ­ಗಿ­ಸ­ಲಿ­ಕ್ಕಾಗಿ ಸಂಚಾರ ಪ್ರಾರಂ­ಭ­ವಾ­ಯಿತು. ಒಂದು ಪೆಟ್ಟಿಗೆ ನೂರಾ­ದವು.
ಯಾವ ಪ್ರದೇ­ಶ­ದಲ್ಲಿ ಹೆಚ್ಚು ಹೂ ಬಿಡು­ತ್ತದೋ, ಎಂತಹ ಹೂವಿ­ನಲ್ಲಿ ಜೇನು ಅಂಥ ಕಡೆ ಜೇನಿನ ಕುಟುಂ­ಬ­ವನ್ನು ಇಟ್ಟು ಅವಿ­ರತ ದುಡಿ­ಯುವ ಕಾರ್ಮಿ­ಕ­ರಿಂದ ಕೆಲಸ ಮಾಡಿ­ಕೊ­ಳ್ಳುವ ಸಂಚಾರಿ ಜೇನು ಕೃಷಿ­ಗಾಗಿ ಆಯ್ಕೆ ಮಾಡಿ­ಕೊಂ­ಡಿ­ರು­ವುದು ಮೆಲ್ಲಿ­ಫೆರಾ ಜೇನು ತಳಿ. ವಿದೇಶಿ ತಳಿ­ಯಾದ ಇದು ಬಹ­ಳಷ್ಟು ವರ್ಷ ಒಂದೇ ಇರು­ತ್ತದೆ. ಸ್ವಭಾ­ವವು ಸಭ್ಯ. ಒಂದೆ­ಡೆ­ಯಿಂದ ಮತ್ತೊಂ­ದೆ­ಡೆಗೆ ಪೆಟ್ಟಿ­ಗೆ­ಯನ್ನು ಸಾಗಿ­ಸು­ವುದು ಸುಲಭ. ಇವರ ಊರು ಕರಾ­ವ­ಳಿ­ಯಾ­ದರೂ ಮೆಲ್ಲಿ­ಫೆರಾ ತಳಿಗೆ ಬಯಲು ಸೀಮೆ ಪ್ರಶಸ್ತ ಸ್ಥಳ. ಸಮು­ದ್ರದ ಅಂಚಿ­ನಲ್ಲಿ ಜೇನಿಗೆ ಉಪ­ದ್ರವ ನೀಡುವ ಬಿಗ್‌ ಬಿ ಈಟರ್‌ ಮತ್ತು ಸ್ಮಾಲ್‌ ಬಿ ಈಟರ್‌ ಕಾಟ ಜಾಸ್ತಿ.
ಅದ­ಕ್ಕಾಗಿ ಸುರೇಶ್‌ ಅವರ ಜೇನು ಪೆಟ್ಟಿ­ಗೆ­ಗಳು ಈಡಿ ರಾಜ್ಯ ಸುತ್ತು­ತ್ತಿವೆ. ಇವ­ರದ್ದು ಒಟ್ಟು ಮೂರು ಕ್ಯಾಂಪ್‌ ಇದೆ. ಒಂದು ಕ್ಯಾಂಪ್‌ ಮಲೆ­ನಾ­ಡಿ­ನ­ಲ್ಲಿ­ದ್ದರೆ ಮತ್ತೊಂದು ಬಯಲು ಸೀಮೆ­ಯ­ಲ್ಲಿ­ರು­ತ್ತದೆ. ಇನ್ನೊಂದು ಸ್ವಂತ ಊರು ಬ್ರಹ್ಮಾ­ವ­ರ­ದ­ಲ್ಲಿ­ರು­ತ್ತದೆ. ಊರಿ­ನ­ಲ್ಲಿ­ರುವ ಪೆಟ್ಟಿ­ಗೆ­ಗ­ಳನ್ನು ಹೆಂಡತಿ ವಾಸಂತಿ, ಮಗ ಕೀರ್ತನ್‌ ರಾಜ್‌, ರಾಘ­ವೇಂದ್ರ ನೋಡಿ­ಕೊ­ಳ್ಳು­ತ್ತಾರೆ. ಇವೆ­ಲ್ಲ­ವನ್ನು ವ್ಯವ­ಸ್ಥ­ತ­ವಾಗಿ ನೋಡಿ ಕೊಲ್ಳುವ ಜವಾ­ಬ್ದಾರಿ ಸುರೇಶ್‌ ಅವ­ರದ್ದು.
ಇವರು ಜೇನು ಪೆಟ್ಟಿ­ಗೆ­ಗ­ಳನ್ನು ಇಡಲು ಹೆದ್ದಾರಿ ಬದಿಯ ಹೊಲ­ಗ­ಳನ್ನು ಆಯ್ಕೆ ಮಾಡಿ­ಕೊ­ಳ್ಳು­ತ್ತಾರೆ. ಜೋ, ಸೂರ್ಯ­ಕಾಂತಿ ಬೆಳೆ­ಯುವ ರೈತರು ಇವ­ರಿಗೆ ಪೆಟ್ಟ­ಗೆ­ಗ­ಳನ್ನು ಇಡಲು ಪ್ರೀತಿ­ಯಿಂದ ಅವ­ಕಾಶ ಮಾಡಿ­ಕೊ­ಡು­ತ್ತಾರೆ. ಉತ್ತಮ ಪರಾ­ಗ­ಸ್ವ­ರ್ಶ­ದಿಂದ ಅವ­ರಿಗೆ ಬೆಳೆ­ಯಲ್ಲಿ ಅಧಿಕ ಫಸಲು. ಇವ­ರಿಗೆ ತುಪ್ಪ. ಸೂರ್ಯ­ಕಾಂ­ತಿಗೆ ಜೇನಿ­ನಿಂದ ಪರಾ­ಗ­ಸ್ಪ­ರ್ಶ­ವಾ­ದರೆ ಶೇ 40 ಹೆಚ್ಚಗೆ ಇಳು­ವರಿ ಬರು­ತ್ತದೆ ಎನ್ನು­ವುದು ರೈತರ ಅಂಬೋಣ.
ಜೇನು ಸಾಕಾ­ಣಿ­ಕೆಗೆ ಮೊದಲು ಹಾಕುವ ಬಂಡ­ವಾಳ ಬಿಟ್ಟರೆ ನಂತರ ಹೇಳು­ವಂ­ತಹ ಖರ್ಚಿಲ್ಲ. ಹೊಸ­ಮ­ಸಾರ ಬಂದಾಗ ಅವ­ಕ್ಕೊಂದು ಮನೆ ಒದ­ಗಿ­ಸ­ಲಿಕ್ಕೆ ಖರ್ಚಾ­ಗು­ತ್ತದೆ. ಇಷ್ಟೇ ಅಲ್ಲದೆ ಹೂ ಇಲ್ಲದ ಸಮ­ಯ­ದಲ್ಲಿ ಜೇನು ಹುಳು­ಗ­ಳಿಗೆ ಸಕ್ಕರೆ ಪಾಕ­ವನ್ನು ಮಾಡಿ ಒದ­ಗಿ­ಸ­ಬೇ­ಕಾ­ಗು­ತ್ತದೆ. ಇದು ಜೆನು ಸಾಕು­ವ­ವ­ರಿಗೆ ಕಷ್ಟದ ದಿನ. ಆದರೆ ಹಾಕಿದ ಆಹಾ­ರಕ್ಕೆ ಧೋಕಾ ಇಲ್ಲದೆ ತುಪ್ಪ ನೀಡು­ತ್ತದೆ. ಊರಿಂದ ಊರಿಗೆ ತಿರು­ಗು­ವಾಗ ಸಿಗುವ ಲೋಕಲ್‌ ತುಡುವೆ (ಸೆರೆನಾ ಇಂಡಿಕಾ) ಹಿಡಿದು ತಮ್ಮ ಫ್ಯಾಕ್ಟ­ರಿಗೆ ಸೇರಿ­ಸಿ­ಕೊ­ಳ್ಳು­ತ್ತಾರೆ. ಜೇನು ತುಂಬಾ ಸೂಕ್ಷ್ಮ ಜೀವಿ. ಒಂದೇ ಕಡೆ ನೂರಾರು ಪೆಟ್ಟಿ­ಗೆ­ಯ­ನ್ನಿ­ಟ್ಟರು ಅವು­ಗಳು ತಮ್ಮ ಗೂಡಿಗೆ ಮರ­ಳು­ತ್ತವೆ. ಒಂದರ ಹುಳು ಮತ್ತೊಂ­ದಕ್ಕೆ ಹೋಗು­ವು­ದಿಲ್ಲ. ಇವು­ಗ­ಳಿಗೆ ನೋವಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು ಎನ್ನುವ ಇವರು ಜೇನು ಹುಳು ಸಾಕಾ­ಣಿ­ಕೆ­ಯಲ್ಲಿ ಹಲ­ವಾರು ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ, ಕೆಂಪು, ಕಪ್ಪು ಎಂಬೆ­ರಡು ತಳಿ­ಗ­ಳನ್ನು ಒಂದೇ ಪೆಟ್ಟಿ­ಗೆ­ಯ­ಲ್ಲಿಟ್ಟು, ಸಂಕರ ತಳಿ­ಯಾಗಿ ಮಾರ್ಪ­ಡಿ­ಸಿ­ದ್ದಾರೆ. ಇದರ ತುಪ್ಪ ಬಹಳ ಸವಿ ಎನ್ನು­ತ್ತಾರೆ.
ಇವರು ಒಂದು ಕ್ಯಾಂಪಿ­ನಲ್ಲಿ ಆರೆಂಟು ಬಾರಿ ಜೇನು­ತು­ಪ್ಪ­ವ­ನ್ತೆ­ಗೆ­ಯು­ತ್ತಾರೆ. ಮೆಲ್ಲಿ­ಫೆರಾ ಜೇನು 15 ದಿನ­ಕ್ಕೊಮ್ಮೆ ತುಪ್ಪ ಮಾಡು­ತ್ತದೆ. ಒಮ್ಮ ಹಿಂಡಿ­ದರೆ ಎರ­ಡ­ರಿಂದ ನಾಲ್ಕು ಕೆ.ಜಿ. ಯವ­ರೆಗೆ ತುಪ್ಪ ಗ್ಯಾರಂಟಿ. ಕಾಲು ಹಿಲೋ ಮೆಣವು ಸಿಗು­ತ್ತದೆ. ಇವರು ತುಪ್ಪ­ವನ್ನು ಸ್ವತಃ ಮಾರು­ಕಟ್ಟೆ ಮಾಡ್ತಿ­ದ್ದಾರೆ. ತಮ್ಮ ಟೆಂಟಿನ ಪಕ್ಕ­ದ­ಲ್ಲಿಯೇ ಇರುವ ಹೆದ್ದಾಯೇ ಇವರ ದೊಡ್ಡ ಮಾರಾಟ ಮಳಿಗೆ. ಒಮದು ಕಿಲೋಕ್ಕೆ140 ರೂಪಾಯಿ. ಒಮ್ಮೆ ಆಲ­ಮಟ್ಟಿ ಕ್ಯಾಂಪಿ­ನ­ಲ್ಲಿ­ರು­ವಾಗ ಅಂದಿನ ಮುಖ್ಯ­ಮಂತ್ರ ಎಸ್‌. ಎಂ. ಕೃಷ್ಣ ಇವ­ರ­ಲ್ಲಿಗೆ ಬಂದು ಜೇನನ್ನು ಕೊಂಡಿ­ದ್ದಾರೆ. ಹಾಗೇಯೆ ಬಹ­ಳಷ್ಟು ಮಂಧಿ ಈ ತುಪ್ಪ­ವನ್ನು ಇಷ್ಟ ಪಡು­ತ್ತಾರೆ. ಯಾಕೆಂ­ದರೆ ಕಣ್ಣೆ­ದು­ರಿಗೆ ಜೇನಿನ ಪೆಟ್ಟಿಗೆ, ಗ್ರಾಹ­ಕ­ರೆ­ದು­ರಿಗೆ ತುಪ್ಪ ತೆಗೆ­ಯುವ ರೀತಿ, ಒರಿ­ಜಿ­ನಲ್‌ ತುಪ್ಪ ಎನ್ನುವ ಗ್ಯಾರಂಟಿ. ಸುರೇಶ್‌ ಅವರು ಬೇರೆ ಕಡೆ ಮಾರು­ಕಟ್ಟೆ ಮಾಡಿ­ಕೊಂ­ಡಿ­ದ್ದರೆ. ಕಿಲೋಕ್ಕೆ ಅತೀ ಕಡಿಮೆ ಬೆಲೆ ಸಿಗು­ತ್ತಿತ್ತು. ಇನ್ನೂ ಕಿಲೋ ಮೇಣಕ್ಕೆ ಮಾರು­ಕ­ಟ್ಟೆ­ಯಲ್ಲಿ 200 ರೂವ­ರೆಗೆ ಇದೆ. ಇದ­ರಿಂ­ದಲೂ ಸುರೇಶ್‌ ಅವ­ರಿಗೆ ಆದಾ­ಯ­ವಿದೆ. ನಿರು­ದ್ಯೋ­ಗಿ­ಯಾ­ಗಿದ್ದ ಸುರೇಶ್‌ ಅವರು ಇಂದು ಎಂಟು ಜನ­ರಿಗೆ ಅನ್ನ­ದಾ­ತರು.
ಇವರು ಜೇನು ಸಾಕು­ವು­ದೊಂದೆ ಅಲ್ಲದೆ ಶಾಲಾ­ಮ­ಕ್ಕ­ಳಿಗೆ ರಜಾ ದಿನ­ಗ­ಳಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ ನೀಡು­ತ್ತಿ­ದ್ದಾರೆ. ಅದು ಪ್ರಾತ್ಯ­ಕ್ಷಿಕೆ ಮೂಲಕ. ಭಾಷ­ಣ­ಕ್ಕಿಂತ ಪ್ರತ್ಯಕ್ಷ ಅನು­ಭ­ವ­ದಲ್ಲಿ ಕಲಿ­ಸಿ­ದರೆ ಪರಿ­ಣಾಮ ಹೆಚ್ಚು. ಮಕ್ಕ­ಳಿಗೆ ಜೇನಿನ ಬಗ್ಗೆ ಸದ­ಭಿ­ಪ್ರಾಯ ಮೂಡಲಿ ಎಂಬುದು ಇವರ ಭಾವನೆ. ಊರು ಸುತ್ತುವ ಇವ­ರಿಗೆ ಕೆಟ್ಟ ಅನು­ಭ­ವ­ಕ್ಕಿಂತ ಪ್ರೀತಿಯ ಅನು­ಭ­ವವೇ ಹೆಚ್ಚು. ಒಮ್ಮ ಮಾತ್ರ ಅಧಿ­ಕಾ­ರಿ­ಯೊ­ಬ್ಬರು ಕಿರು­ಕುಳ ನೀಡಿ­ದ್ದಾ­ರೆ­ಮದು ವಿಷಾ­ಧಿ­ಸು­ತ್ತಾರೆ.
ಹೆಜ್ಜೇನು ಅಥವಾ ತುಡವಿ ಜೇನನ್ನು ಬೆಂಕಿ ಇಟ್ಟು ಸಾಯಿಸಿ ತುಪ್ಪ­ವನ್ನು ತೆಗೆ­ಯು­ವ­ವ­ರನ್ನು ಕಂಡರೆ ಇವ­ರಿಗೆ ಎಲ್ಲಿ­ಲ್ಲದ ಕೋಪ. ಹ್ತಿರ­ದಲ್ಲಿ ಯಾರಾ­ದರೂ ಹೀಗೆ ಮಾಡು­ವುದು ಕಂಡರೆ ತಾವೇ ಹೋಗಿ ತುಪ್ಪ­ವನ್ನು ತೆಗೆದು ಕೊಟ್ಟು ಬರು­ತ್ತಾರೆ.
ಜೇನಿನ ಕುಟುಂ­ಬ­ದಲ್ಲಿ ಆಲ­ಸಿ­ಗ­ಳಿಗೆ ಅವ­ಕಾ­ಶ­ವಿಲ್ಲ. ಅವ­ರೆ­ಲ್ಲರೂ ವೃತ್ತಿ­ನಿ­ರ­ತರು. ಆಗಷ್ಟೇ ಹುಟ್ಟಿ­ದ­ವ­ರಿಗೆ ಗೂಡಿ­ನೊ­ಳಗೆ ಕೆಲಸ. ಸ್ವಲ್ಪ ದೊಡ್ಡ­ದಾದ ಮೇಲೆ ಮೇಣ ಮಾಡುವ ಕಾರ್ಯ. ಇನ್ನೊಂದು ಚೂರು ಬೆಳೆ­ದ­ವ­ರಗೆ ಮಕ­ರ­ಮದ ಹೀರಿ ತರುವ ಬದುಕು. ವಯ­ಸ್ಸಾದ ಮೇಲೆ ಕಾವಲು ಕಾಯುವ ಕಾಯಕ. ಒಟ್ಟಾರೆ ಒಂದು ಸೆಕೆಂಡ್‌ ಸುಮ್ಮನೆ ಕೂರು­ವಂ­ತಿಲ್ಲ. ಈ ರಿತಿ ಬದುಕು ಸಾಗಿ­ಸುವ ಸಂಸಾರ ಕಾಣು­ವುದು ಜೀವ ಜಗ­ತ್ತಿ­ನಲ್ಲಿ ಜೇನಿ­ನಲ್ಲಿ ಮಾತ್ರ. ಇಂತಹ ಜೇನನ್ನು ಸಾಕು­ವುದು ಸುಲ­ಭ­ವಲ್ಲ. ಅಲ್ಲಿ ಸೋಮಾ­ರಿಗೆ ಸಾವಿನ ಶಿಕ್ಷೆ. ಹೀಗಿ­ರು­ವಾಗ ನಾವು ನಾವು ಸೋಮಾ­ರಿ­ಗ­ಳಾ­ಗದೆ ಅವು­ಗಳ ಸೂಕ್ಷ್ಮ­ವನ್ನು ಅರಿತು ಅವಕ್ಕೆ ಬೇಕಾದ ಪರಿ­ಸ­ರ­ವನ್ನು ಒದ­ಗಿ­ಸಿ­ಕೊಟ್ಟು ಅವು­ಗಳ ಜೀವನ್ದ ಎಳೆ ಎಳೆ­ಯನ್ನು ಅಧ್ಯ­ಯನ ಮಾಡಿ, ಜೇನಿನ ಭಾಷೆ­ಯನ್ನು ತಿಳಿದು ಸಾಕಿ­ದರೆ ನಮ್ಮಲ್ಲೂ ಮಧು ಪ್ರಪಂಚ ಸೃಷ್ಟಿ­ಯಾ­ಗು­ತ್ತದೆ ಎನ್ನುವ ಸುರೇಶ್‌ ಜೇನಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ್ವನ್ನು ಮಾಡಿ­ಕೊಂ­ಡಿ­ದ್ದಾರೆ. ಎಲ್ಲಿ­ಯಾ­ದರೂ ಸಾಲಾಗಿ ಜೇನಿನ ಪೆಟ್ಟಿಗೆ, ಟೆ0ಟ್‌ ಕ0­ಡರೆ ಒಮ್ಮ ಭೇಟಿ ನೀಡಿ ಸುರೇ­ಶಣ್ಣ ಸಿಗ­ಬ­ಹುದು ಜೊತೆ­ಯಲ್ಲಿ ಜೇನು ತುಪ್ಪ ಕೂಡಾ.
ನಾಗ­ರಾಜ ಮತ್ತಿ­ಗಾರ

No comments: