Friday, October 16, 2009

ಪ್ರಾಯೋಗಿಕ ಜಲ ಶಾಲೆ

ಮಲೆ­ನಾಡು ಮಳೆ­ನಾಡು ಎಂಬುದು ಹಿಂದಿನ ಮಾತು. ಈಗ ಪರಿ­ಸ್ಥಿತಿ ಬದ­ಲಾ­ಗಿದೆ. ಬೇಸಿ­ಗೆ­ಯಲ್ಲಿ ನೀರಿನ ತೊಂದರೆ ಅನು­ಭ­ವಿ­ಸು­ವ­ವ­ರಲ್ಲಿ ಮಲೆ­ನಾ­ಡಿ­ಗರೂ ಇದ್ದಾರೆ. ಈ ತೊಂದರೆ ನೀಗಿ­ಸುವ ನಿಟ್ಟಿ­ನಲ್ಲಿ ಮಳೆ­ಕೊ­ಯ್ಲಿನ ಬಗ್ಗೆ ಜಾಗೃತಿ ಮುಡಿ­ಸುವ ಕೆಲಸ ನಡೆದೇ ಇದೆ. ಆದರೆ ಹೆಚ್ಚಿ­ನ­ವರು ಅದನ್ನು ಗಂಭೀ­ರ­ವಾಗಿ ತೆಗೆದು ಕೊಳ್ಳ­ಲಿಲ್ಲ. ಗಂಭೀ­ರ­ವಾಗಿ ತೆಗೆದು ಕೊಂಡಿ­ರು­ವ­ವರು ಬೆಳ­ಕಿಗೆ ಬಳ­ಕಿಗೆ ಬರು­ತ್ತಿಲ್ಲ. ಮಳೆ­ಕೊ­ಯ್ಲಿನ ಬಗ್ಗೆ ಗಂಭೀರ ಚಿಂತನೆ ನಡೆಸಿ, ಜನ­ಜಾ­ಗೃ­ತಿಯ ಬೆಳಕು ಹರ­ಡಲಿ ಎಂಬ ಆಶಯ ಹೊಂದಿ­ರುವ ಹವ್ಯಾಸಿ ಪತ್ರ­ಕರ್ತ, ಕೃಷಿಕ ಶಿವಾ­ನಂದ ಕಳವೆ ಅವರ `ಪ್ರಯೋ­ಗ­ಶೀ­ಲತೆ' ಮಾದ­ರಿ­ಯಾ­­ಬ­ಹುದು.
ಶಿವಾ­ನಂ­ದರ ಅಡಿಕೆ ತೋಟದ ಜೊತೆ ಒಂದಷ್ಟು ಸೊಪ್ಪಿನ ಬೆಟ್ಟ ಸಹ ಇದೆ. ಹದಿ­ನಾರು ಎಕರೆ ಬೆಟ್ಟ­ದಲ್ಲಿ ಸುಮಾರು ಹನ್ನೆ­ರಡು ಎಕರೆ ಬೆಟ್ಟ ಒಂದೇ ಕಡೆ ಇದೆ. ಈ ಬೆಟ್ಟದ ಶೇಕಡಾ ಎಪ್ಪ­ತ್ತು­ರಷ್ಟು ಭಾಗ­ದಲ್ಲಿ ಕಳ­ವೆ­ಯ­ವರು ಮಳೆ ಕೊಯ್ಲಿನ ವಿವಿಧ ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ. ಜೊತೆ­ಯಲ್ಲಿ ಅಪ­ರೂ­ಪದ ಸಸ್ಯ ಪ್ರಭೇ­ಧ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ.
ಮಳೆ­ಕೊ­ಯ್ಲಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ­ವನ್ನು ನಡೆ­ಸಿ­ರಿ­ರು­ವ­ವರು ಕಳ­ವೆ­ಯ­ವರು. ಈ ಕುರಿತು ಸಾಕಷ್ಟು ಯಶಸ್ವೀ ಪ್ರಯೋ­ಗ­ಗ­ಳನ್ನು ಬಲ್ಲ­ವರು. ನಿರು ಇಂಗಿ­ಸುವ ಕುರಿತು ಸ್ಲೈಡ್‌ ಶೋ ನಡೆಸಿ ನೀರಿನ ಮಹ­ತ್ವ­ವನ್ನು ಜನ­ರಿಗೆ ತಿಳಿ­ಸಿ­ದ­ವರು. ಒಂದು ಕಡೆ ಸ್ಲೈಡ್‌ ಶೋ ನಡೆ­ಸು­ವಾಗ ಹಿರಿ­ಯ­ರೊ­ಬ್ಬರು ಕೇಳಿ­ದ­ರಂತೆ- `ನಿಮಗೆ ನೀರಿಂ­ಗಿ­ಸುವ ಬಗ್ಗೆ ಸ್ವ ಅನು­ಭ­ವ­ವೇನು?' ಎಂದು.
ಅಂದೇ ಕಳವೆ ಅವರು ನಿರ್ಧ­ರಿ­ಸಿ­ದರು: `ನಾನು ಮೊದಲು ನೀರಿಂ­ಗಿ­ಸುವ ಕೆಲಸ ಮಾಡ­ಬೇಕು ನಂತರ ಪ್ರವ­ಚನ. ಹಾಗೆಯೇ ಪ್ರತಿ ವರ್ಷ ನನ್ನ ದುಡಿ­ಮೆಯ ಒಂದು ಭಾಗ­ವನ್ನು ನೀರಿಂ­ಗಿ­ಸುವ ಕೆಲ­ಸಕ್ಕೆ ಬಳ­ಸ­ಬೇಕು'
ಸೊಪ್ಪಿನ ಬೆಟ್ಟದ ಪಕ್ಕ­ದಲ್ಲಿ ಕಳ­ವೆ­ಯ­ವರ ಅಡಿಕೆ ತೋಟ­ವಿದೆ. ಆ ತೋಟ ಮುಂಚೆ ಸೋರ­ಗು­ತ್ತಿತ್ತು. ನೋಡಲು ಬಂದ­ವರು `ಮಳೆ­ಗಾ­ಲ­ದಲ್ಲಿ ನೀರು ಹೆಚ್ಚಾಗಿ ಜವ­ಳಾ­ಗು­ತ್ತಿದೆ. ತೋಟದ ಕಾಲು­ವೆ­ಯನ್ನು ಆಳ ಮಾಡ­ಬೇಕು' ಎಂದು ಸಲಹೆ ನೀಡು­ತ್ತಿ­ದ್ದರು. ಸರಿ ತೋಟದ ಕಾಲು­ವೆ­ಯನ್ನು ಆಳ ಮಾಡಿ­ದ್ದಾ­ಯಿತು. ಪಂಪ್‌­ಸೆಟ್‌ ಹಾಕಿ­ಯಾಯ್ತು. ಆದರೆ ಪ್ರಯೋ­ಜನ ಬರ­ಲಿಲ್ಲ. ಕಾರಣ ತೋಟ­ದಲ್ಲಿ ತೆಗೆದ ಬಾವಿ­ಯಲ್ಲಿ ನೀರೇ ಇರು­ತ್ತಿ­ರ­ಲಿಲ್ಲ. ತೋಟ ಮತ್ತೂ ಸೊರ­ಗಿತು ಇಳು­ವ­ರಿಯೂ ಕಡಿ­ಮೆ­ಯಾ­ಯಿತು.
ಈಗ ಕಳವೆ ಅವರ ಮಳೆ ಕೊಯ್ಲಿನ ಅಭಿ­ಯಾನ ಆರಂ­ಭ­ವಾ­ಯಿತು. ಮೊದಲು ಸೊಪ್ಪಿನ ಬೆಟ್ಟ­ದಲ್ಲಿ ಉತ್ತಮ ಜಾತಿಯ ಸಸ್ಯ ಪ್ರಭೇ­ದ­ಗ­ಳನ್ನು ನಾಟಿ ಮಾಡಿ­ದರು. ನಾಟಿ ಮಾಡಿದ ಈ ಸಸ್ಯ­ಗಳ ಮೇಲ್ಬಾ­ಗ­ದಲ್ಲಿ ಅರ್ಧ ಚಂದ್ರಾ­ಕೃ­ತಿ­ಯಲ್ಲಿ ಇರು ಕಾಲುವೆ ನಿರ್ಮಾಣ. ಬೆಟ್ಟದ ಬುಡ­ದ­ಲ್ಲಿ­ರುವ ಕೆರೆಗೆ ನೀರನ್ನು ಇಂಗಿ­ಸುವ ಯತ್ನ­ವಾಗಿ ಬೆಟ್ಟ­ದಲ್ಲಿ ಅಲ್ಲಲ್ಲಿ ಇಂಗು­ಗುಂ­ಡಿ­ಗ­ಳನ್ನು ತೋಡಿ­ಸಿ­ದರು. ಅವು­ಗಳ ಮುಂದೆ ಪುನಃ ಕಾಲು­ವೆ­ಗಳು. ಇಂಗು­ಗುಂ­ಡಿ­ಯಲ್ಲಿ ಉಕ್ಕಿದ ನೀರು ಈ ಕಾಲು­ವೆಗೆ ಬಂದು ಬೀಳು­ವಂ­ತಾ­ಯಿತು. ಈ ರೀತಿ ಮಾಡಿ­ರು­ವು­ದ­ರಿಂದ ಅನಾದಿ ಕಾಲ­ದಿಂದ ಕಳ­ವೆ­ಯ­ಲ್ಲಿ­ರುವ `ಹಾರ್ನಳ್ಳಿ ಕೆರೆ`ಗೆ ನೀರನ ಬರ ನೀಗಿತು. ಈಗ ಈ ಕೆರೆಯ ಕೂಡ ಹೂಳೆತ್ತಿ ಸ್ವಚ್ಛ ಮಾಡ­ಲಾ­ಗಿದೆ. ಬೆಟ್ಟದ ಒಂದು ಮಗ್ಗು­ಲಲ್ಲಿ ಇಂಗುವ ನೀರು ಹಾರ್ನಳ್ಳಿ ಕೆರೆಗೆ ಆಸ­ರೆ­ಯಾ­ಯಿತು.
ಬೆಟ್ಟದ ಇನ್ನೊಂದು ದಿಕ್ಕಿ­ನಲ್ಲಿ ಕಳ­ವೆ­ಯ­ವರೇ ಒಂದು ಕೆರೆಯ ನಿರ್ಮಿ­ಸಿ­ದ್ದಾರೆ.ಇದು 16 ಅಡಿ ಆಳ 35 ಅಡಿ ವಿಸ್ತೀರ್ಣ ಈ ಕೆರೆ ಹೊಂದಿದೆ. ಈ ಕೆರೆಗೆ ಸುಮಾರು ಭಾಗದ ನೀರು ಬಂದು ಶೇಖ­ರಣೆ ಆಗು­ತ್ತದೆ. ಇದ­ರಲ್ಲಿ ಹೆಚ್ಚಾದ ನೀರು ಹಾಳಾ­ಗದೆ ಹಾರ್ನಳ್ಳಿ ಕೆರೆಗೆ ಸೇರಿ ಕೊಳ್ಳು­ತ್ತದೆ. ಕಳೆದ ವರ್ಷ­ದಿಂದ ಇವರು ಬೆಟ್ಟದ ತಲೆ­ಯಲ್ಲಿ ಸುಮಾರು ಒಂದು ಎಕ­ರೆ­ಯಷ್ಟು ಜಾಗ­ವನ್ನು ಸಮ­ತ­ಟ್ಟಾಗಿ ಮಾಡಿ­ದ್ದಾರೆ. ಇದರ ಸುತ್ತ ಬದು­ಗ­ಳನ್ನು ಹಾಕಿ­ದ್ದಾರೆ. ಇದು ಒಂದು ಕೆರೆಯ ಮಾದ­ರಿ­ಯಲ್ಲೇ ಇದೆ. ಇದರ ಒಳ­ಗಡೆ ಅಪ­ರೂ­ಪದ ಮಾವಿನ ಸಸಿ­ಗ­ಳನ್ನು, ಅಲಂ­ಕಾ­ರಿಕ ಸಸ್ಯ, ಬಹು­ವಿ­ಧದ ಸಸ್ಯ­ಗ­ಳನ್ನು ಇಲ್ಲಿ ನಾಟಿ ಮಾಡಿ­ದ್ದಾರೆ.
ಈ ಜಾಗ­ದಲ್ಲಿ ಲಕ್ಷಾಂ­ತರ ಲೀಟರ್‌ ನೀರು ಇಂಗು­ತ್ತದೆ. ಇದರ ಕೆಳ­ಗಡೆ ಮತ್ತೆ ಒಡ್ಡುನ್ನು ಮಾಡಿ­ದ್ದಾರೆ. ಮೇಲೆ ಹೆಚ್ಚಾದ ನೀರು ಕೆಳ­ಗಡೆ ಒಂದು ಇಂಗು­ತ್ತದೆ. ಒನ್ನೊಮ್ಮೆ ಇಲ್ಲೂ ನೀರು ಹೆಚ್ಚಾ­ದರೆ ಗುಡ್ಡಕ್ಕೆ ಅಡ್ಡ­ದಾಗಿ ತೋಡಿದ ಕಾಲು­ವೆ­ಯಲ್ಲಿ ಬಂದು ಸೇರಿ­ತ್ತದೆ. ಈ ಕಾಲುವೆ ಕೂ ಮೆಟ್ಟಲು ಮಾದ­ರಿ­ಯಲ್ಲಿ ಇರು­ವ­ದ­ರಿಂದ ಅಲ್ಲಿಯೇ ನೀರು ಇಂಗು­ತ್ತದೆ. ಒಟ್ಟಾರೆ ಕಳವೆ ಅವರ ಬೆಟ್ಟ­ದಲ್ಲಿ ಎಲ್ಲಿ ಬಿದ್ದ ಮಳೆ ನೀರು ಅಲ್ಲಯೇ ಇಂಗು­ತ್ತದೆ. ನೀರು ಹರಿದು ಓವ ಅವ­ಕಾ­ಶವೇ ಇಲ್ಲ.
`ಮಳೆ ನೀರನ್ನು ಠೇವಣಿ ಇಟ್ಟು ಅಂರ್ತ­ಜಲ ಹಿಂಪ­ಡೆ­ಯುವ ಪ್ರಯ­ತ್ನ­ವಿದು. ಮಳೆ ನೀರನ್ನು ಸಂಗ್ರ­ಹಿ­ಸು­ವು­ದ­ರಿಂದ ಜಲ ಸಮೃದ್ಧಿ ಪಡಿ­ಯ­ಲಿಕ್ಕೆ ಸಾಧ್ಯ ಎನ್ನು­ವು­ದನ್ನು ನೋಡಿ ಅನು­ಭ­ವಿ­ಸಿದ್ದೆ. ಆದರೆ ಇಂದು ಇದು ನನ್ನ ಸ್ವ ಅನು­ಭ­ವಕ್ಕೆ ಬಂದಿದೆ. ವರ್ಷ ಹತ್ತು ಹದಿ­ನೈದು ಸಾವಿರ ರೂಪ­ಯಿ­ಯನ್ನು ಮಳೆ ಕೊಯ್ಲಿನ ಕೆಲ­ಸಕ್ಕೆ ವಿಯೋ­ಗಿ­ಸು­ತ್ತಿ­ದ್ದೇನೆ. ಆರೆಂಟು ವರ್ಷದ ಹಿಂದೆ ನಮ್ಮ ತೋಟ ಸೋರ­ಗು­ತ್ತಿತ್ತೋ ಇಂದು ಆ ಸಮಸ್ಯೆ ಇಲ್ಲ ತೋಟ ಈಗ ಸದಾ ಹಸಿ­ರಾ­ಗಿ­ರು­ತ್ತದೆ. ನಮ್ಮ ಕೆರೆ­ಯಲ್ಲಿ ಕಡು ಬೇಸಿ­ಗೆ­ಯಲ್ಲು 8 ಅಡಿ ನೀರು ಇರು­ತ್ತದೆ. ತೋಟಕ್ಕೂ ನೀರಾ­ವ­ರಿ­ಯಾ­ಗಿದೆ' ಎನ್ನು­ವುದು ಕಳವೆ ಅವರ ಅನು­ಭ­ವದ ನುಡಿ.
ಕಳವೆ ಅವರ ಬೆಟ್ಟ ಮಳೆ ಕೊಯ್ಲು ಮಾಡುವ ಆಸ­ಕ್ತ­ರಿಗೆ ಒಂದು ಪ್ರಾಯೋ­ಗಿಕ ಸ್ಥಳ. ಮಳೆ ಕೊಯ್ಲು ಮಾದ­ರಿ­ಗಳ ಅಪ­ರೂ­ಪದ ಕ್ಷೇತ್ರ. ಇಂದು ಇದೊಂದು ಅಘೋ­ಷಿತ ಪ್ರವಾಸಿ ತಾಣ­ವಾ­ಗಿದೆ. ಬಹ­ಳಷ್ಟು ಮಂದಿ ಇಲ್ಲಿಗೆ ಬಂದು ಕಳವೆ ಅವರ ಜಲ ಸಾಧನೆ ನೋಡಿ ಹೋಗು­ತ್ತಿ­ದ್ದಾರೆ. ಅಧ್ಯ­ಯನ ತಂಡ­ಗಳು ಇಲ್ಲಿಗೆ ಆಗ­ಮಿ­ಸು­ತ್ತಿದೆ.
ಪ್ರಾಯೋ­ಗಿಕ ಜಲ ಶಾಲೆಗೆ ಬಗ್ಗೆ ವಿವ­ರಣೆ ಬೇಕೇ? +919448023715

ನಾಗ­ರಾಜ ಮತ್ತಿ­ಗಾರ

No comments: