Friday, September 11, 2009

ಟೆರೆಸ್ ಕಿಚನ್ ಗಾರ್ಡನ್ಬೆಂಗಳೂರಿನಲ್ಲಿ ರೋಗ ಬರಲು ಕಾರಣಗಳು ಹಲವು. ಒತ್ತಡದ ಜೀವನದಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು ಇದಕ್ಕೊಂದು ಕಾರಣ. ಮನೆಯ ಹೊರಗಡೆಯ ಆಹಾರ ಸೇವನೆಗೆ ಮೊರೆ ಹೋಗುವವರು ಬಹಳ ಮಂದಿ. ಮನೆಯಲ್ಲೇ ಅಡುಗೆ ಮಾಡಿ ತಿನ್ನುವವರಿಗೆ ಸಿಗುವ ತರಕಾರಿ `ತಾಜಾ' ಎನ್ನಲು ಸಾಧ್ಯವಿಲ್ಲ. ಅದು ರಾಸಾಯನಿಕ ಬಳಸಿ ಬೆಳೆದ ತರಕಾರಿಯೂ ಆಗಿರಬಹುದು. ಅದಕ್ಕಾಗಿ ಶುದ್ಧ ಮತ್ತು ಸಾವಯವ ತರಕಾರಿಯನ್ನು ತಿನ್ನಬಯಸುವ ಮಂದಿ ಸಾವಯವ ತರಕಾರಿ ಮಳಿಗೆಗಳನ್ನು ಆಯ್ದುಕೊಂಡರು. ಆದರೆ ಬೇಕಾದ ತರಕಾರಿಯೆಲ್ಲ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಕೆಲವರು ತಾವೇ ಕೈತೋಟ ಮಾಡಿಕೊಂಡು ತರಕಾರಿ ಬೆಳೆಯಲು ಪ್ರಾರಂಭಿಸಿದರು.

ಬೆಂಗಳೂರಿನಲ್ಲಿ ಕೈತೋಟ ಮಾಡಿಕೊಳ್ಳುವಷ್ಟು ಜಾಗ ಇರುವವರು ಬಹಳ ಕಡಿಮೆ ಮಂದಿ. ಜಾಗದ ಸಮಸ್ಯೆ ಕಂಡುಕೊಂಡ ಉಪಾಯ`ಟೆರೆಸ್ಕಿಚನ್ಗಾರ್ಡನ್‌'.

ಟೆರೆಸ್ಮೇಲೆ ಗಾರ್ಡನ್ಮಾಡುವ ಪದ್ಧತಿ ಹೊಸತೇನಲ್ಲ. ಆದರೆ ಕೇವಲ ತರಕಾರಿ ಬೆಳೆಸುವ ಕ್ರಮ ಹೊಸತು. ಟೆರೆಸ್ಕಿಚನ್ಗಾರ್ಡನ್ಮಾಡುವುದರಲ್ಲೂ ಕೆಲವಷ್ಟು ವಿಧಾನಗಳಿವೆ. ಕುಂಡದಲ್ಲಿ ಮಣ್ಣನ್ನು ಬಳಸಿ ಮಾಡುವಂಥದ್ದು ಒಂದು ಕ್ರಮ. ಆದರೆ ಇದರಿಂದ ತೂಕ ಹೆಚ್ಚಾಗಿ ಟೆರೆಸ್ಗೆ ತೊಂದರೆಯಾಗುವ ಸಾಧ್ಯತೆಯು ಇದೆ. ಅದಕ್ಕಾಗಿ ಹೊಸ ರೀತಿಯಲ್ಲಿ ತರಕಾರಿ ಬೆಳೆಸುವ ವಿಧಾನವನ್ನು ಪೂರ್ಣ ಆರ್ಗಾನಿಕ್ಎನ್ನುವ ಸಂಸ್ಥೆ ಪ್ರಾರಂಭಿಸಿದೆ.

ಸಂಸ್ಥೆಯ ಮುಖ್ಯಸ್ಥ ಟಿ. ಎಂ. ಮಲ್ಲೇಶ್ಅವರು ಮೂಲತಃ ಸಾಪ್ಟ್ವೇರ್ಇಂಜನಿಯರ್‌. ಎನಾದರೂ ಸಾಧನೆ ಮಾಡುವ ತುಮುಲದಿಂದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ನಂಜನಗೂಡು ಸಮೀಪ ಬಾಳೆ ತೋಟ ಮಾಡಿಕೊಂಡರು. ಸಂದರ್ಭದಲ್ಲಿ ಅವರಿಗೆ ಬಂದ ಆಲೋಚನೆಯೇ ಟೆರೆಸ್ಗಾರ್ಡನ್‌. ಮಣ್ಣು ಮತ್ತು ಕುಂಡದಿಂದ ಟೆರೆಸ್ಗೆ ಭಾರವಾಗಬಹುದೆಂದು ತಿಳಿದು ಅದನ್ನು ಬಹಳ ಕಡಿಮೆ ತೂಕ ಬರುವಂತಹ ವಸ್ತುಗಳನ್ನು ಬಳಸಿ ಮಾಡಲು ಪ್ರಾರಂಭಿಸಿದರು. ಅದು ಹೇಗೆ?

ಟರೆಸ್ಗಾರ್ಡನ್ಹೀಗಿರುತ್ತದೆ: ನೇರವಾಗಿ ಟೆರೆಸ್ಮೇಲೆ ಯಾವುದನ್ನೂ ಬೆಳೆಯುವ ಕ್ರಮ ಇಲ್ಲಿಲ್ಲ. ಒಂದು ಅಡಿ ಎತ್ತರ ಮತ್ತು ನಾಲ್ಕು x ನಾಲ್ಕು ಅಡಿ ಅಗಲದ ಕಡಿಮೆ ತೂಕದ ಮರದ ಬಾಕ್ಸ್ಗೆ ಪ್ಲಾಸ್ಟಿಕ್ನ್ನು ಮುಚ್ಚುತ್ತಾರೆ. ನಂತರ ಮಣ್ಣಿನ ಬದಲು ತೆಂಗಿನ ನಾರಿನ ಪುಡಿ ( ಕೊಕೊ ಪಿಟ್‌) ಬಳಸಲಾಗುತ್ತದೆ. ಇದರಲ್ಲಿ ತರಕಾರಿಯನ್ನು ಬೆಳೆಸಲಾಗುತ್ತದೆ.

ಒಂದು ಬಾಕ್ಸ್‌ 16 ಚದರ ಅಡಿ ಇರುತ್ತದೆ. ಇದರಲ್ಲಿ ಒಂದು ಚದರ ಅಡಿಯಲ್ಲಿ ಒಂದೊಂದು ಬಗೆಯ ತರಕಾರಿಯನ್ನು ಬೆಳೆಸಲಾಗುತ್ತದೆ. ಇದನ್ನು ತುಂಬಾ ಯೋಜನಾ ಬದ್ದವಾಗಿ ಮಾಡಲಾಗುತ್ತದೆ. ಟೆರಸ್ಗಾರ್ಡನ್ಮಾಡುವವರು ತಮಗೆ ಬೇಕಾದ ತರಕಾರಿಯ ಪಟ್ಟಿಯನ್ನು ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೇಕಾದ ತರಕಾರಿಗಳನ್ನು ನಾಟಿಮಾಡಲಾಗುತ್ತದೆ.

ಪದ್ಧತಿಯಲ್ಲಿ ಕೃಷಿ ಮಾಡುವಾಗ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡಲಾಗುವುದಿಲ್ಲ. ಸಂಪೂರ್ಣ ಸಾವಯವ ಪದ್ದತಿ. ಟ್ರೈಕೋಡರ್ಮಾ, ನಿಮ್ಕೇಕ್‌, ಹೊಂಗೆ ಹಿಂಡಿ, ಕಡ್ಲೆಕಾಯಿ ಹಿಂಡಿಯನ್ನು ಪೋಷಕಾಂಶಗಳಾಗಿ ಬಳಸುತ್ತಾರೆ. ತರಕಾರಿ ಬೆಳೆಗೆ ರೋಗ ಮತ್ತು ಕೀಟ ಬಂದರೆ ಬೆಳ್ಳುಳ್ಳಿ ರಸ, ಮೆಣಸಿನ ರಸವನ್ನು ಬಳಸಿ ನಿಯಂತ್ರಣಕ್ಕೆ ತರುತ್ತಾರೆ. ರೋಗ ನಿಯಂತ್ರಕ್ಕೆ ಬರದಿದ್ದರೆ ರೋಗ ಬಂದ ಗಿಡವನ್ನು ಕಿತ್ತು ಹಾಕಿ, ಅಲ್ಲಿ ಬೇರೆ ಗಿಡ ನಾಟಿ ಮಾಡಲಾಗುತ್ತದೆ. ನೀರಾವರಿಗಾಗಿ ಇನರ್ಡ್ರಿಫ್ವ್ಯವಸ್ಥೆಯನ್ನು ಮಾಡಿದ್ದಾರೆ. ಹೆಚ್ಚಿಗೆ ನೀರು ವ್ಯಯವಾಗುವುದಿಲ್ಲ. ಬೆಳಗಿನ ಅವಧಿಯಲ್ಲಿ ನೀರು ಬಿಡಬೇಕಾಗುತ್ತದೆ. ಹೀಗೆ ಮಾಡಿದಾಗ ತೇವಾಂಶ ಉಳಿಯುತ್ತದೆ.

ಟೆರೆಸ್ತರಕಾರಿ ತೋಟದಲ್ಲಿ ನಾಟಿ ಮಾಡಿದ 30 ದಿನಗಳಲ್ಲಿ ತರಕಾರಿ ಕೊಯ್ಲಿಗೆ ಬರುತ್ತದೆ. ಅಡುಗೆಗೆ ಫ್ರೆಶ್ತರಕಾರಿ ನಿತ್ಯವೂ ಸಿಗುವುದು ಟೆರೆಸ್ಗಾರ್ಡನ್ ವೈಶಿಷ್ಟ್ಯ.

ಶುದ್ಧ ಮತ್ತು ಫ್ರೆಶ್ತರಕಾರಿಯನ್ನು ನೇರವಾಗಿ ಅಡುಗೆ ಮನೆಗೆ ನೀಡಬೇಕು ಎನ್ನುವ ಕನಸನ್ನು ಕಂಡೆ. ಅದನ್ನು ರೀತಿಯಲ್ಲಿ ಸಾಕಾರ ಗೊಳಿಸುವ ಯತ್ನವನ್ನು ಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ಬಹಳಷ್ಟು ಜನ ಟೆರೆಸ್ಕಿಚನ್ಗಾರ್ಡನ್ಬಗ್ಗೆ ಆಸಕ್ತಿನ್ನು ತೋರಿಸಿದ್ದಾರೆ. ಕೆಲವರು ತಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡುತ್ತಿದ್ದಾರೆಎಂದು ಮಲ್ಲೇಶ್ಅವರು ಹೇಳುತ್ತಾರೆ.

ಈಗಾಗಲೇ ಟೆರೆಸ್ಕಿಚನ್ಗಾರ್ಡನ್ಮಾಡುತ್ತಿರುವ ಮುರುಗವೇಲ್ಅವರು `ಇದೊಂದು ಅನುಕೂಲಕರ ಕೃಷಿ. ನನಗೆ ಹಸಿರ ಮೇಲೆ ಪ್ರೀತಿ ಇತ್ತು. ಇಂತಹ ಕಾನ್ಸೆಪ್ಟ್ ತಿಳಿದಾಗ ನಾನು ನಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡಿಕೊಂಡೆ. ತುಂಬಾ ಉಪಯೋಗವಿದೆ.ದಿನಾಲೂ ಫ್ರೆಶ್ತರಕಾರಿ ಸಿಗುತ್ತದೆ ಎನ್ನುತ್ತಾರೆ. ವಿಜಯಾ ಅವರು ಟೆರೆಸ್ಗಾರ್ಡನ್ಮಾಡಿಕೊಂಡು ತರಕಾರಿಯನ್ನು ನಿತ್ಯ ಬಳಸುತ್ತಿದ್ದಾರೆ.

ಅಂದ ಹಾಗೆ ಟೆರೇಸ್ಗಾರ್ಡನ್ಅನ್ನು 30 ಚದರ್ಅಡಿಯಿಂದ 80 ಚದರ ಅಡಿಯವರೆಗೆ ಮಾಡುತ್ತಿದ್ದಾರೆ. 80 ಚದರ ಅಡಿ ಕಿಚನ್ಗಾರ್ಡನ್ಮಾಡಲು 20. 000 ರೂಪಾಯಿ ವೆಚ್ಚ ತಗಲುತ್ತದೆ. 15 ದಿನಕ್ಕೊಮ್ಮೆ ಕಂಪನಿಯಿಂದ ಹೋಗಿ ತರಕಾರಿ ಗಿಡಗಳ ದೇಖರೇಖು ನೋಡಿಕೊಂಡು ಬರುತ್ತಾರೆ. ಟೆರೆಸ್ಗಾರ್ಡನ್ನಗರದಲ್ಲಿ ಒಂದು ಹೊಸ ಬೆಳವಣಿಗೆ ಇದರ ಬಗ್ಗೆ ಮಾಹಿತಿಗಾಗಿ: ಟಿ. ಎಂ. ಮಲ್ಲೇಶ್‌ 9972322922


-ನಾಗರಾಜ ಮತ್ತಿಗಾರ