Tuesday, September 1, 2009

ಜೇನುತುಪ್ಪ ಪರೀಕ್ಷೆಗೊಂದು ಕಿಟ್




ಪುಣೆಯಲ್ಲಿರುವ ಕೇಂದ್ರಿಯ ಜೇನು ಸಂಶೋಧನ ಮತ್ತು

ತರಬೇತಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ

ಡೊನಲ್ಡ್‌ ಪ್ಯಾಸ್‌ ,ಸಂಸ್ಥೆಯ ಸಹ೦ೋಗದೋಂದಿಗೆ

ರೈತ ಸ್ನೇಹಿ “ಜೇನು ಪರೀಕ್ಷಾ ಕಿಟ್‌ ತಯಾರಿಸಿದ್ದಾರೆ


--------------------------------------------------

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜೇನು ಸಾಕುವವರ ಸಂಖ್ಯೆ ಹೆಚ್ಚುತ್ತಿದೆ.ಆದರೆ ಉತ್ಪಾದಿಸಿದ ಜೇನಿನ ತುಪ್ಪದ ಗುಣಮಟ್ಟವನ್ನು ಪರೀಕಿ್ಷಸುವುದು ಅವರು ಎದುರಿಸುತ್ತಿರುವ ಸಮಸ್ಯೆ.ಇದಕ್ಕೆ ಪರಿಹಾರವನ್ನು ಪುಣೆಯಲ್ಲಿರುವ ಕೇಂದ್ರಿಯ ಜೇನು ಸಂಶೋಧನ ಮತ್ತು ತರಬೇತಿ ಸಂಸ್ಥೆಯು ಅಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಡೊನಲ್ಡ್‌ ಪ್ಯಾಸ್‌ ಅವರೊಂದಿಗೆ ರೈತ ಸ್ನೇಹಿ “ಜೇನು ಪರೀಕ್ಷಾ ಕಿಟ್‌” ತ೦ಾರಿಸಲಾಗಿದೆ.
ಕೇಂದ್ರಿಯ ಜೇನು ಸಂಶೋಧನ ಮತ್ತು ತರಬೇತಿ ಸಂಸ್ಥೆಯಲ್ಲಿ ಸಹಾಯಕ ವಿಕಾಸ ಅಧಿಕಾರಿ೦ಾಗಿ ಕೆಲಸ ನಿರ್ವಹಿಸುತ್ತಿರುವ ರಾಜ್ಯದ ಡೊನಾಲ್ಡ್‌ ಪ್ಯಾಸ್‌ ಈ ರೈತ ಸ್ನೇಹಿ ಕಿಟ್‌ ನ ರೂವಾರಿ.ಮಂಗಳೂರು ಖದ್ರಿ ಮೂಲದ ಇವರು ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಒಂದು ರೀತಿ೦ುಲ್ಲಿ ಕರ್ನಾಟಕದ ರೈತರಿಗೆ ಆಪತ್ಭಾಂಧವ.ಏಕೆಂದರೆ ಜೇನು ಕ್ರಷಿಕರಿಗೆ ಜೇನುತುಪ್ಪದಲ್ಲಿರುವ ಪದಾರ್ಥಗಳ ಪ್ರವಾಣ (ಗ್ಲೂಕೋಸ್‌,ಸೈಕ್ರೋಸ್‌,ನೀರಿನಾಂಶ ಮುಂತಾದವುಗಳು)ವನ್ನು ತಿಳಿದುಕೋಳ್ಳಲು ಮತ್ತು ಆ ಬಗ್ಗೆ ಪ್ರವಾಣ ಪತ್ರ ಪಡೆಯಲು 2-3 ಸಂಸ್ಥೆಗಳಿದ್ದರೂ ಹೆಚ್ಚಿನವರು ಅಲಂಬಿಸಿರುವುದು ಕೇಂದ್ರಿಯ ಜೇನು ಸಂಶೋಧನ ಕೇಂದ್ರವನ್ನು.ಆದರೆ ಅಲ್ಲಿ ಾಷಾ ಸಮಸ್ಯೆ ಇದೆ ಎಂದು ಕೆಲವರು ಾವಿಸಿ,ಪರಿೀಕ್ಷೆಯಿಂದಲೆ ದೂರ ಸರಿದವರುಇದ್ದಾರೆ.ಆದರೆ ಡೊನಲ್ಡ್‌ ಈ ಸಮಸ್ಯೆಗೆ ಮಂಗಳಹಾಡಿ,ಕರ್ನಾಟಕದವರಿಗೆ ಕನ್ನಡದಲ್ಲೇ ವಾಹಿತಿ ನೀಡುತ್ತಾ,ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ತರಬೇತಿ ಪಡೆಯಲು ಸಂಸ್ಥೆಗೆ ಆಗಮಿಸುವವರು ಕನ್ನಡ ಾಷೆಯನ್ನು ಇಷ್ಟಪಟ್ಟರೆ ಕನ್ನಡದಲ್ಲೇ ತರಬೇತಿಯನ್ನು ನೀಡುತ್ತಾರೆ.
ಜೇನುತುಪ್ಪ ವಾರಾಟವಾಡುವಾಗ ಅದರಲ್ಲಿರುವ ಪದಾರ್ಥಗಳ ಅಂಶ ಹೆಚ್ಚಿನ ಪ್ರವಾಣದಲ್ಲಿದ್ದರೆ ಅದು ಕಲಬೆರಿಕೆ ಎಂದರ್ಥ.ಇವರು ತ೦ಾರಿಸಿದ “ಕಿಟ್‌” ಮೂಲಕ ರೈತರು ಪದಾರ್ಥಗಳನ್ನು ಕಂಡುಹಿಡಿಯಬಹುದು.ಸೂಟ್‌ಕೇಸ್‌ ವಾದರಿಯಲ್ಲಿರುವ “ಪರೀಕ್ಷಾ ಕಿಟ್‌” ಸುಲವಾಗಿ ಎಲ್ಲಿಗೆ ಬೇಕಾದರು ತೆಗೆದುಕೋಂಡು ಹೋಗಬಹುದು.
ಇದರ ಸಹಾಯದಿಂದ ಶುದ್ಧವಾದ ಜೇನಿನ ಪರೀಕ್ಷೆಯನ್ನು ಸುಲವಾಗಿ ಪರೀಕ್ಷಿಸಬಹುದು.4 ಗಾ್ಲಸ್‌ ಕೊಳವೆ (ಪ್ರನಾಳ),ಪಿಂಗಾಣಿ ಪಾತ್ರೆ,ಎವೆ ಪ್ರೆಟಿಂಗ್‌ ಡೀಸ್‌,ಕಾರ್‌ ಸೆಲ್ಫೆಟ್‌,ಮಿಥಿಂಗ್‌ ಮುಂತಾದವುಗಳು ಇದ್ದು,ಜೇನು ಉತ್ಪಾದಕರೇ ಸುಲವಾಗಿ ಪರೀಕ್ಷಿಸಿಕೊಳ್ಳುವಂತೆ ವಾಡಲಾಗಿದೆ.
“ ಕಿಟ್‌ ಸಹಾಯದಿಂದ ಜೇನು ತುಪ್ಪದಲ್ಲಿರುವ ಸಕ್ಕರೆ ಅಂಶ,ನೀರಿನಾಂಶ,ಫೀಸ್‌ ಟೆಸ್ಟ್‌, ಎ್‌-ಜಿ ಅನುಪಾತ, ಮುಂತಾದವುಗಳನ್ನು ಕಂಡುಹಿಡಿಯಬಹುದಾಗಿದೆ” ಎಂದೆನ್ನುವ ಡೊನಾಲ್ಡ್‌, “ರೈತರು ಜೇನುತುಪ್ಪ ಪರೀಕ್ಷೆಗೆ ಕಷ್ಟಪಡುವುದನ್ನು ನೋಡಿ ಈ ಸುಲ ಕಿಟ್‌ ನ್ನು ಕಡಿಮೆ ಬೆಲೆಗೆ ತ೦ಾರಿಸಲಾಗಿದೆ. ಕರ್ನಾಟಕದ ರೈತರು ಜೇನುತುಪ್ಪದ ಸ್ಯಾಂಪಲ್‌ ನ್ನು ,ಸಂಸ್ಥೆ ನಿಗದಿಪಡಿಸಿದ ಮೊತ್ತವನ್ನು ಇಟ್ಟು ಕಳುಹಿಸಿದರೆ ಪರೀಕ್ಷಿಸಿ ಪ್ರವಾಣ ಪತ್ರವನ್ನು ಕಳುಹಿಸಿಕೊಡಲಾಗುವುದು” ಎಂದೆನ್ನುತ್ತಾರೆ.
ಕೇಂದ್ರಿಯ ಜೇನು ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಜೇನುತುಪ್ಪ ಪರೀಕ್ಷಿಸಲು ಮತ್ತು ಕಿಟ್‌ ನ ಬಗ್ಗೆ ಹೆಚ್ಚಿನ ವಾಹಿತಿಗೆ ೦9422೦೦3586 ಸಂಪರ್ಕಿಸಬಹುದು.


*ನಿತಿನ್‌ ಮುತ್ತಿಗೆ.
nitinmuttige@gmail.com
www.nitinmuttige.co.cc


2 comments:

ಮಾವೆಂಸ said...

ನಿತಿನ್‌ರಿಗೆ ರೈತಾಪಿ ಬಳಗದ ಸ್ವಾಗತ!

NiTiN Muttige said...

en saar ivaga svaagata maadta iddiralla!! nanu illi entry kottu 1 year melaaytu!! :) nagaraj na keli!
Thanks