Saturday, October 31, 2009

ಮಳೆಯೇ ಹೊಲ ಮೇಯ್ದಾಗ





`ಪ್ರತಿ ವರ್ಷ ಬರ­ದಿಂದ ದೀಪಾ­ವಳಿ ಹಬ್ಬ ಮಾಡಾಕ ಆಗೂ­ದಿಲ್ರಿ. ವರ್ಷ ನಾವು ಬೆಳಿ ಚೆನ್ನಾಗಿ ಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡ­­ಬ್ಬಕ್ಕ ದೀಪ ಹಚ್ಚಾಕ ಮನಿನೇ ಕೊಚ್ಚಿ ಹೋಗ್ಯಾವ್ರಿ' ಎನ್ನು­ವಾಗ ನೆರೆ ಪೀಡಿತ ಪ್ರದೇ­ಶದ ರೈತನ ಕಣ್ಣಂ­ಚಿ­ನಿಂದ ನೀರು...

ನಿಜ, ಏನು ಆಗ­ಬಾ­ರ­ದಿತ್ತೋ ಅದು ಆಗ­ಬಾ­ರದ ಸಮ­ಯ­ದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರ­ಬಾ­ರದ ಸಮ­ಯ­ದಲ್ಲಿ ಬಂದ ಮಳೆಯ ಆರ್ಭ­ಟಕ್ಕೆ ಸಹ­ಸ್ರಾರು ರೈತರು ಬೆಳೆಯ ಜೊತೆಗೆ ನೆಲೆ­ಯನ್ನು ಕಳೆ­ದು­ಕೊಂಡು ಸಂತ್ರ­ಸ್ತ­ರಾ­ಗಿ­ದ್ದಾರೆ. ನಾಲ್ಕು ದಿನದ ಮಳೆ­ಯಲ್ಲಿ ಕೊಚ್ಚಿ ಹೋದ ಸಂಪ­ತ್ತನ್ನು ಪುನಃ ಸಂಗ್ರ­ಹಿ­ಸಲು ನಲ­ವತ್ತು ವರ್ಷ ಬೇಕಾ­ಗ­ಬ­ಹುದು ಎಂದರೆ ಅತಿ­ಶ­ಯೋ­ಕ್ತಿ­ಯಲ್ಲ.

ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆ­ಗಳು ಸಂಪೂರ್ಣ ನಾಶ­ವಾ­ಗಿದೆ. ಸಹ­ಸ್ರಾರು ಕೋಟಿ ರೂಪಾಯಿ ನಷ್ಟ­ವಾ­ಗಿದೆ. ರಾಜ್ಯದ ಜನ­ತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನ­ಕ್ಕಾಗಿ ಕೈಚಾ­ಚುವ ಪರಿ­ಸ್ಥಿತಿ ಬಂದಿ­ರು­ವುದು ವಿಪ­ರ್ಯಾ­ಸದ ಸಂಗತಿ.


ನೆರೆ­ಯಿಂದ ಬೆಳೆ ಹಾನಿ: ನೆರೆ ಇಳಿ­ಯು­ತ್ತಿ­ದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾ­ಗು­ತ್ತಿದೆ. ಆದರೆ ನಿಖರ ಮಾಹಿತಿ ಲಭ್ಯ­ವಾ­ಗು­ತ್ತಿಲ್ಲ. ಒಂದು ಅಂದಾ­ಜಿನ ಪ್ರಕಾರ ಬೆಳ­ಗಾ­ವಿ­ಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್‌ ಬೆಳೆ ನಾಶ­ವಾ­ಗಿದೆ. ಹಾವೇ­ರಿ­ಯಲ್ಲಿ ಒಂದು ಲಕ್ಷ, ಧಾರ­ವಾ­ಡ­ದಲ್ಲಿ ಒಂದು ಲಕ್ಷ, ಗದ­ಗ­ದಲ್ಲಿ ತೊಂಬ­ತ್ತೊಂ­ಬತ್ತು ಸಾವಿರ, ಕಲ­ಬು­ರ್ಗಿ­ಯಲ್ಲಿ ಎರಡು ಲಕ್ಷ ಹೆಕ್ಟೇರ್‌ ಬಾಗ­ಲ­ಕೋ­ಟೆ­ಯಲ್ಲಿ ನಲ­ವತ್ತು ಸಾವಿರ, ವಿಜಾ­ಪು­ರ­ದಲ್ಲಿ ಮೂವ­ತ್ತೆ­ರಡು ಸಾವಿರ ಹೆಕ್ಟೇರ್‌ ಭೂಮಿ­ಯ­ಲ್ಲಿನ ಬೆಳೆ­ಗಳು ನಾಶ­ವಾ­ಗಿದೆ. ಬಳ್ಳಾರಿ, ಶಿರ­ಗುಪ್ಪ, ಹೊಸ­ಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶ­ವಾ­ಗಿದೆ.


ರೈತರ ಅಳಲು: `ನಾವು ಭತ್ತ, ಮೆಣ­ಸಿ­ನ­ಕಾಯಿ, ಮೆಕ್ಕೆ ಜೋಳ­ವನ್ನು ಬೆಳೆ­ಯು­ತ್ತೆವೆ. ನಮಗೆ ಭತ್ತದ ಬೆಳೆ­ಯಲ್ಲಿ ಒಂದು ಎಕ­ರೆಗೆ ಸುಮಾರು ಇಪ್ಪತ್ತು ಸಾವಿ­ರಕ್ಕೂ ಹೆಚ್ಚಿಗೆ ನಷ್ಟ­ವಾ­ಗಿದೆ. ಮೆಕ್ಕೆ ಜೋಳ ಒಂದು ಎಕ­ರೆಗೆ 30 ಚೀಲ ಬರು­ತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣ­ಸಿನ ಬೆಳೆ ಸಂಪೂರ್ಣ ನಾಶ­ವಾ­ಗಿದೆ. ಇದನ್ನು ಕಿತ್ತು ಹಾಕ­ಬೇಕು. ನಮ್ಮೂ­ರಿನ ಕೆರೆ ಒಡೆದು ನೂರಾರು ಪಂಪ್‌ ಸೆಟ್‌­ಗಳು ಕೊಚ್ಚಿ­ಹೋ­ಗಿದೆ. ಈಗ ನಮ್ಮ ಜಮೀ­ನ­ನನ್ನು ನೋಡಿ­ದರೆ ಕಣ್ಣಲ್ಲಿ ನೀರು ಬರು­ತ್ತದೆ. ನಾಲ್ಕು ತಿಂಗ­ಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾ­ಯ­ವನ್ನು ಪಡೆ­ಯು­ತ್ತೇವೆ ಎನ್ನುವ ಆಸೆ­ಯ­ಲ್ಲಿ­ದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆ­ಯೊಂ­ದಿಗೆ ನೆರೆ­ಯ­ಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡು­ತ್ತಾರೆ ಬಳ್ಳಾ­ರಿಯ ಬಾಗ­ನ­ಹ­ಟ್ಟಿಯ ರೈತ ಶಿವ­ಶಂ­ಕರ್‌.

ಗಂಗಾ­ವ­ತಿಯ ರೈತರ ಗೋಳು ಮತ್ತೊಂದು ರೀತಿ­ಯದ್ದು. ಒಂದು ಕಡೆ ನೆರೆ­ಯಿಂದ ಭತ್ತದ ಬೆಳೆ ನಾಶ­ವಾ­ದರೆ, ಮತ್ತೊಂದು ಕಡೆ­ಯಲ್ಲಿ ತುಂಗ­ಭದ್ರಾ ನಾಲೆ ಒಡೆದು ಬೆಳೆ ನಾಶ­ವಾ­ಗಿದೆ. ಇಲ್ಲಿನ ರೈತ ವೇಣು­ಗೋ­ಪಾಲ್‌ ಅವರ ಪ್ರಕಾರ `ಸಾವಿ­ರಾರು ಎಕರೆ ಭತ್ತದ ಹೊಲ­ಗ­ಳಲ್ಲಿ ಎಕ­ರೆಗೆ ಹತ್ತು ಚೀಲ ಬೆಳೆಯು ಸಿಗು­ವು­ದಿಲ್ಲ. ನೆರೆ­ಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರ­ಯಿಸಿ ಸಿಂದ­ನೂರು, ಗಂಗಾ­ವತಿ, ಮಸ್ಕಿ, ಮಾನ್ವಿ ಯ ಸಾವಿ­ರಾರು ರೈತರು ಭತ್ತ, ಕೆಂಪು ಮೆಣ­ಸಿ­ನ­ಕಾಯಿ, ಹತ್ತಿ ಬೆಳೆ­ಯು­ತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮ­ಯಕ್ಕೆ ನೀರನ್ನು ಬಿಡ­ಲಾ­ಗದೆ ಬೆಳೆ­ಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿ­ಯಾ­ದರೆ, ಮತ್ತೊಂದು ಕಡೆ ನೀರಿ­ಲ್ಲದೆ ಸಂತ್ರ­ಸ್ತ­ರಾ­ಗಿ­ದ್ದೇವೆ' ಎನ್ನು­ತ್ತಾರೆ.

ಗದ­ಗದ ರೈತರ ಸಂಕಷ್ಟ ಮತ್ತೊಂದು ರೀತಿ­ಯದ್ದು. ಇಲ್ಲಿನ ರೈತ ಮುಖಂಡ ಗೋಣಿ­ಬ­ಸಪ್ಪ ಕೊರ್ಲ­ಹಳ್ಳಿ ಇವ­ರನ್ನು ಮಾತ­ನಾ­ಡಿ­ಸಿ­ದಾಗ ನೆರೆಗೆ ಒಳ­ಗಾದ ರೈತರ ಕಷ್ಟ­ವನ್ನು ಎಳೆ­ಎ­ಳೆ­ಯಾಗಿ ಬಿಡಿ­ಸಿ­ಡು­ತ್ತಾರೆ. `ಗದ­ಗದ ಹುಲ­ಗ­ನ­ಗೇರಿ, ಮೆಣಸಿ, ಕಾಡ­ಗೂಳಿ, ಕುರ­ವಿ­ನ­ಕೊ­ಪ್ಪ­ದಲ್ಲಿ ರೈತರು ಅಕ್ಷ­ರಶಃ ನಿರ್ಗ­ತಿ­ಕ­ರಾ­ಗಿ­ದ್ದಾರೆ. ಈ ಭಾಗ­ದಲ್ಲಿ ಈರು­ಳ್ಳಿ­ಯನ್ನು ಹೆಚ್ಚಾಗಿ ಬೆಳೆ­ಯು­ತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟು­ಕೊಂ­ಡಿ­ದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆ­ದರೆ ದೈವ ಮತ್ತೊಂದು ಬಗೆ­ಯಿತು ಎನ್ನುವ ಹಾಗೆ. ನಮ್ಮ ಅನ್ನ­ವಾದ ಜೋಳ, ರಾಗಿ ಎಲ್ಲ ನೀರು ಪಾಲಾ­ಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿ­ದರೆ ಹೂಳು ಮಾತ್ರ ಇದೆ. ನೆರೆ ಬೆಳೆ­ಯನ್ನು ಮಾಯ ಮಾಡಿ­ಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾ­ಗಿದೆ. ರೈತರು ಶಾಲೆ, ರೈಲು ನಿಲ್ದಾ­ಣ­ದಲ್ಲಿ ವಾಸಿ­ಸು­ತ್ತಿ­ದ್ದಾರೆ.

ರೋಣ ತಾಲೂ­ಕಿ­ನಲ್ಲಿ ಬೆಣ್ಣೆ­ಹಳ್ಳ ಮತ್ತು ಮಲ­ಪ್ರಭಾ ನದಿ ಸೇರುವ ಜಾಗ­ದಲ್ಲಿ ಯಾವಾ­ಗಲೂ ನೆರೆ ಆಗು­ತ್ತಿತ್ತು. ಆದರೆ ಈ ಬಾರಿ ನಿರೀ­ಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆ­ಹ­ಳ್ಳದ ಬಗ್ಗೆ ಬಹ­ಳಷ್ಟು ವರ್ಷ­ದಿಂದ ಗೊತ್ತಿ­ರುವ ಜನ­ಪ್ರ­ತಿ­ನಿ­ಧಿ­ಗಳು ಮೌನ ವಹಿ­ಸಿ­ರು­ವುದು ನೋವಿನ ಸಂಗತಿ. ಇದು ಒಂದೆ­ಡೆಗೆ ಆದರೆ ಬಡ ರೈತರು ಮನೆ­ಯಲ್ಲಿ ಕಣಜ ಮಾಡಿ­ಕೊಂಡು ದಾಸ್ತಾನು ಮಾಡಿ­ಟ್ಟು­ಕೊಂಡ ಬೆಳೆ­ಯೆಲ್ಲ ಕೊಚ್ಚಿ ಹೋಗಿದೆ' ಎನ್ನು­ತ್ತಾರೆ.

ಸೋಯಾ ಬೀನ್‌, ಭತ್ತ, ರಾಗಿ, ಜೋಳ, ಸೂರ್ಯ­ಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರ­ಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆ­ಗಳು ನಾಶ­ವಾ­ಗಿದೆ. ಸದಾ ಕಷ್ಟ­ದ­ಲ್ಲಿಯೇ ಜೀವನ ಸಾಗಿ­ಸುವ ರೈತ­ನಿಗೆ ನೆರೆ ಎನ್ನು­ವುದು ಗಾಯದ ಮೇಲೆ ಬರೆ ಹಾಕಿ­ದಂತೆ ಆಗಿದೆ. ಬೆಳೆ ಬೆಳೆ­ಯಲು ಹಾಕಿದ ಬಂಡ­ವಾಳ ಸಮೇತ ಬೆಳೆಯು ಇಲ್ಲ­ದಂ­ತಾ­ಗಿದೆ. ಜೊತೆ­ಯಲ್ಲಿ ಖಾಸಗಿ ಸಾಲ, ಬ್ಯಾಂಕ್‌ ಸಾಲ ತೀರಿ­ಸುವ ಹೊಣೆಯು ರೈತ­ನಿ­ಗಿದೆ.

ಇಂತಹ ರೈತ­ರಿಗೆ ಪರಿ­ಹಾ­ರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದು­ಕುವ ಉತ್ಸಾ­ವನ್ನೇ ಕಳೆದು ಕೊಂಡಿ­ದ್ದಾರೆ. ಇವ­ರಿಗೆ ಪರಿ­ಹಾರ ನೀಡಿ­ದರೆ ಸಾಲದು ಬದು­ಕುವ ಉತ್ಸಾ­ಹ­ವನ್ನು ಮೂಡಿ­ಸುವ ಅಗ­ತ್ಯ­ವಿದೆ.


ಮುಗಿ­ಸುವ ಮುನ್ನ: ಬದು­ಕಲು ಅವ­ಶ್ಯ­ಕ­ವಾದ ಆಹಾರ ಬೆಳೆ­ಗಳು ನಾಶ­ವಾ­ಗಿ­ರು­ವುದು ಕೇವಲ ಬೆಳೆ ಬೆಳೆ­ಯುವ ರೈತ­ನಿಗೆ ಮಾತ್ರ­ವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನ­ತೆಯ ಮೇಲೂ ಪರಿ­ಣಾಮ ಬೀರ­ಲಿದೆ.


ನಾಗರಾಜ ಮತ್ತಿಗಾರ

Tuesday, October 20, 2009

ಸುರೇಶಣ್ಣನ ಜೇನು ಕೃಷಿ



ಹೆದ್ದಾರಿ ಬದಿಯ ಬಯಲು. ಅಲ್ಲ ಜೇನು ಪೆಟ್ಟಿ­ಗೆ­ಗಳ ಸಾಲು! ಮಧ್ಯೆ ಒಂದು ಸಣ್ಣ ಟೆಂಟ್‌. ರಸ್ತೆ ಬದಿ­ಯಲ್ಲಿ ಜೇನು ತುಂಬಿದ ಬಾಟಲಿ. ಕೂತು­ಹಲ, ಜೇನು ಇರುವ ಜಾಗಕ್ಕೆ ಬಂದರೆ ಬಿಡಾ­ರದ ಒಳ­ಗಿಂದ ಕೆಂಪು ಕಪ್ಪು ಮಿಶ್ರಿತ ಗಡ್ಡ ಇರುವ ವ್ಯಕ್ತಿ ಬನ್ನಿ ಎಂದು ಟೆಂಟ್‌ಗೆ ಸ್ವಾಗ­ತಿ­ಸು­ತ್ತಾರೆ. ಉಪ­ಚಾ­ರ­ಕ್ಕಾಗಿ ಆಗಷ್ಟೇ ಹಿಂಡಿದ ಮಧು­ವನ್ನು ನೀಡು­ತ್ತಾರೆ.
ಇವರು ನಮ್ಮ ರಾಜ್ಯದ ಸಂಚಾರಿ ಜೇನು ಕೃಷಿ­ಯಲ್ಲಿ ಅಗ್ರ ಪಂಕ್ತಿ­ಯ­ಲ್ಲಿ­ರುವ ಸುರೇಶ ಕರ್ಕೇರಾ(9448409675). ಉಡುಪಿ ಜಿಲ್ಲೆಯ ಬ್ರಹ್ಮಾ­ವರ ಇವ­ರೂರು.
ಪ್ರಾಥ­ಮಿಕ ಶಿಕ್ಷ­ಣಕ್ಕೆ ವಿದ್ಯೆ ಮುಕ್ತಾಯ. ಹೋಟೆಲ್‌ ಮಾಣಿ­ಯಾಗಿ ಸ್ವಯಂ ಸಂಪಾ­ದ­ನೆಯ ಜೀವನ ಆರಂಭ. ಸ್ವತಃ ಹೋಟೆಲ್‌ ಪ್ರಾರಂ­ಭಿಸಿ, ನಷ್ಟ ಅನು­ಭ­ವಿಸಿ ಕೈ ಸೋತು ಉದ್ಯೋ­ಗಾ­ಕಾಂ­ಕ್ಷಿ­ಯಾಗಿ ನಿರು­ದ್ಯೋ­ಗ­ದಿಂದ ಕುಳಿ­ತಾಗ ರುಡ್‌­ಸೆಟ್‌ ಸಂಸ್ತೆ­ಯಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ. ನಂತರ ಜೇನು ಜೀವನ ಶುರು.
ಸ್ವಂತ ಸಾಕಾ­ಣಿಕೆ ಮಾಡುವ ಮೊದಲು ಹಲ­ವ­ರಿಗೆ ಜೇನು ತುಪ್ಪ ಸರ­ಬ­ರಾಜು ಮಾಡು­ವುದು, ಜೇನು ಸಾಕಾ­ಣಿಕೆ ಮಾಡು­ವ­ವ­ರಿಗೆ ಜೇನು ಹಿಳು­ಗ­ಳನ್ನು ಹಿಡಿದು ಕೊಡು­ವುದು, ಜೇನು ಪೆಟ್ಟಿಗೆ ತಂದು ಕೊಡುವ ಕೆಲಸ ಮಾಡು­ತ್ತಿ­ದ್ದ­ರಂತೆ. ಇವರು ಜೇನು ಕುಟುಂ­ಬ­ಗಳು ಒಂದು ವರ್ಷ­ಕ್ಕಿಂತ ಹೆಚ್ಚಿಗೆ ದಿನ ನಿಲ್ಲದೆ ಹಾರಿ ಹೋಗು­ತ್ತಿ­ದ್ದವು. ಕೆಲ­ವಕ್ಕೆ ಕಾಯಿಲೆ ಬಂದು ಸತ್ತು ಹೋದವು. ಈ ರೀತಿಯ ಅನು­ಭವ ಸ್ವಂತ ಸಾಕಾ­ಣಿಕೆ ಮಾಡು­ವಲ್ಲಿ ಸಹ­ಕಾ­ರಿ­ಯಾ­ಯಿತು. ಅವು­ಗಳ ಬೇಡ­ಗಳ ಅರಿ­ವಾ­ಯಿತು. ಯಾವ ರೀತಿಯ ಪರಿ­ಸ­ರ­ದಲ್ಲಿ ಇವು ಉತ್ತ­ಮ­ವಾಗಿ ಕೆಲಸ ಮಾಡು­ತ್ತೇವೆ ಎಂದು ತಿಳಿ­ಯಿತು. ಜೇನು ಕುಟುಂ­ಬ­ವನ್ನು ಉಳಿ­ಸಿ­ಕೊ­ಳ್ಳ­ಲಿ­ಕ್ಕಾಗಿ ಇವು­ಗ­ಳಗೆ ಬೇಕಾದ ಸೂಕ್ತ ಪರಿ­ಸರ ಒದ­ಗಿ­ಸ­ಲಿ­ಕ್ಕಾಗಿ ಸಂಚಾರ ಪ್ರಾರಂ­ಭ­ವಾ­ಯಿತು. ಒಂದು ಪೆಟ್ಟಿಗೆ ನೂರಾ­ದವು.
ಯಾವ ಪ್ರದೇ­ಶ­ದಲ್ಲಿ ಹೆಚ್ಚು ಹೂ ಬಿಡು­ತ್ತದೋ, ಎಂತಹ ಹೂವಿ­ನಲ್ಲಿ ಜೇನು ಅಂಥ ಕಡೆ ಜೇನಿನ ಕುಟುಂ­ಬ­ವನ್ನು ಇಟ್ಟು ಅವಿ­ರತ ದುಡಿ­ಯುವ ಕಾರ್ಮಿ­ಕ­ರಿಂದ ಕೆಲಸ ಮಾಡಿ­ಕೊ­ಳ್ಳುವ ಸಂಚಾರಿ ಜೇನು ಕೃಷಿ­ಗಾಗಿ ಆಯ್ಕೆ ಮಾಡಿ­ಕೊಂ­ಡಿ­ರು­ವುದು ಮೆಲ್ಲಿ­ಫೆರಾ ಜೇನು ತಳಿ. ವಿದೇಶಿ ತಳಿ­ಯಾದ ಇದು ಬಹ­ಳಷ್ಟು ವರ್ಷ ಒಂದೇ ಇರು­ತ್ತದೆ. ಸ್ವಭಾ­ವವು ಸಭ್ಯ. ಒಂದೆ­ಡೆ­ಯಿಂದ ಮತ್ತೊಂ­ದೆ­ಡೆಗೆ ಪೆಟ್ಟಿ­ಗೆ­ಯನ್ನು ಸಾಗಿ­ಸು­ವುದು ಸುಲಭ. ಇವರ ಊರು ಕರಾ­ವ­ಳಿ­ಯಾ­ದರೂ ಮೆಲ್ಲಿ­ಫೆರಾ ತಳಿಗೆ ಬಯಲು ಸೀಮೆ ಪ್ರಶಸ್ತ ಸ್ಥಳ. ಸಮು­ದ್ರದ ಅಂಚಿ­ನಲ್ಲಿ ಜೇನಿಗೆ ಉಪ­ದ್ರವ ನೀಡುವ ಬಿಗ್‌ ಬಿ ಈಟರ್‌ ಮತ್ತು ಸ್ಮಾಲ್‌ ಬಿ ಈಟರ್‌ ಕಾಟ ಜಾಸ್ತಿ.
ಅದ­ಕ್ಕಾಗಿ ಸುರೇಶ್‌ ಅವರ ಜೇನು ಪೆಟ್ಟಿ­ಗೆ­ಗಳು ಈಡಿ ರಾಜ್ಯ ಸುತ್ತು­ತ್ತಿವೆ. ಇವ­ರದ್ದು ಒಟ್ಟು ಮೂರು ಕ್ಯಾಂಪ್‌ ಇದೆ. ಒಂದು ಕ್ಯಾಂಪ್‌ ಮಲೆ­ನಾ­ಡಿ­ನ­ಲ್ಲಿ­ದ್ದರೆ ಮತ್ತೊಂದು ಬಯಲು ಸೀಮೆ­ಯ­ಲ್ಲಿ­ರು­ತ್ತದೆ. ಇನ್ನೊಂದು ಸ್ವಂತ ಊರು ಬ್ರಹ್ಮಾ­ವ­ರ­ದ­ಲ್ಲಿ­ರು­ತ್ತದೆ. ಊರಿ­ನ­ಲ್ಲಿ­ರುವ ಪೆಟ್ಟಿ­ಗೆ­ಗ­ಳನ್ನು ಹೆಂಡತಿ ವಾಸಂತಿ, ಮಗ ಕೀರ್ತನ್‌ ರಾಜ್‌, ರಾಘ­ವೇಂದ್ರ ನೋಡಿ­ಕೊ­ಳ್ಳು­ತ್ತಾರೆ. ಇವೆ­ಲ್ಲ­ವನ್ನು ವ್ಯವ­ಸ್ಥ­ತ­ವಾಗಿ ನೋಡಿ ಕೊಲ್ಳುವ ಜವಾ­ಬ್ದಾರಿ ಸುರೇಶ್‌ ಅವ­ರದ್ದು.
ಇವರು ಜೇನು ಪೆಟ್ಟಿ­ಗೆ­ಗ­ಳನ್ನು ಇಡಲು ಹೆದ್ದಾರಿ ಬದಿಯ ಹೊಲ­ಗ­ಳನ್ನು ಆಯ್ಕೆ ಮಾಡಿ­ಕೊ­ಳ್ಳು­ತ್ತಾರೆ. ಜೋ, ಸೂರ್ಯ­ಕಾಂತಿ ಬೆಳೆ­ಯುವ ರೈತರು ಇವ­ರಿಗೆ ಪೆಟ್ಟ­ಗೆ­ಗ­ಳನ್ನು ಇಡಲು ಪ್ರೀತಿ­ಯಿಂದ ಅವ­ಕಾಶ ಮಾಡಿ­ಕೊ­ಡು­ತ್ತಾರೆ. ಉತ್ತಮ ಪರಾ­ಗ­ಸ್ವ­ರ್ಶ­ದಿಂದ ಅವ­ರಿಗೆ ಬೆಳೆ­ಯಲ್ಲಿ ಅಧಿಕ ಫಸಲು. ಇವ­ರಿಗೆ ತುಪ್ಪ. ಸೂರ್ಯ­ಕಾಂ­ತಿಗೆ ಜೇನಿ­ನಿಂದ ಪರಾ­ಗ­ಸ್ಪ­ರ್ಶ­ವಾ­ದರೆ ಶೇ 40 ಹೆಚ್ಚಗೆ ಇಳು­ವರಿ ಬರು­ತ್ತದೆ ಎನ್ನು­ವುದು ರೈತರ ಅಂಬೋಣ.
ಜೇನು ಸಾಕಾ­ಣಿ­ಕೆಗೆ ಮೊದಲು ಹಾಕುವ ಬಂಡ­ವಾಳ ಬಿಟ್ಟರೆ ನಂತರ ಹೇಳು­ವಂ­ತಹ ಖರ್ಚಿಲ್ಲ. ಹೊಸ­ಮ­ಸಾರ ಬಂದಾಗ ಅವ­ಕ್ಕೊಂದು ಮನೆ ಒದ­ಗಿ­ಸ­ಲಿಕ್ಕೆ ಖರ್ಚಾ­ಗು­ತ್ತದೆ. ಇಷ್ಟೇ ಅಲ್ಲದೆ ಹೂ ಇಲ್ಲದ ಸಮ­ಯ­ದಲ್ಲಿ ಜೇನು ಹುಳು­ಗ­ಳಿಗೆ ಸಕ್ಕರೆ ಪಾಕ­ವನ್ನು ಮಾಡಿ ಒದ­ಗಿ­ಸ­ಬೇ­ಕಾ­ಗು­ತ್ತದೆ. ಇದು ಜೆನು ಸಾಕು­ವ­ವ­ರಿಗೆ ಕಷ್ಟದ ದಿನ. ಆದರೆ ಹಾಕಿದ ಆಹಾ­ರಕ್ಕೆ ಧೋಕಾ ಇಲ್ಲದೆ ತುಪ್ಪ ನೀಡು­ತ್ತದೆ. ಊರಿಂದ ಊರಿಗೆ ತಿರು­ಗು­ವಾಗ ಸಿಗುವ ಲೋಕಲ್‌ ತುಡುವೆ (ಸೆರೆನಾ ಇಂಡಿಕಾ) ಹಿಡಿದು ತಮ್ಮ ಫ್ಯಾಕ್ಟ­ರಿಗೆ ಸೇರಿ­ಸಿ­ಕೊ­ಳ್ಳು­ತ್ತಾರೆ. ಜೇನು ತುಂಬಾ ಸೂಕ್ಷ್ಮ ಜೀವಿ. ಒಂದೇ ಕಡೆ ನೂರಾರು ಪೆಟ್ಟಿ­ಗೆ­ಯ­ನ್ನಿ­ಟ್ಟರು ಅವು­ಗಳು ತಮ್ಮ ಗೂಡಿಗೆ ಮರ­ಳು­ತ್ತವೆ. ಒಂದರ ಹುಳು ಮತ್ತೊಂ­ದಕ್ಕೆ ಹೋಗು­ವು­ದಿಲ್ಲ. ಇವು­ಗ­ಳಿಗೆ ನೋವಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು ಎನ್ನುವ ಇವರು ಜೇನು ಹುಳು ಸಾಕಾ­ಣಿ­ಕೆ­ಯಲ್ಲಿ ಹಲ­ವಾರು ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ, ಕೆಂಪು, ಕಪ್ಪು ಎಂಬೆ­ರಡು ತಳಿ­ಗ­ಳನ್ನು ಒಂದೇ ಪೆಟ್ಟಿ­ಗೆ­ಯ­ಲ್ಲಿಟ್ಟು, ಸಂಕರ ತಳಿ­ಯಾಗಿ ಮಾರ್ಪ­ಡಿ­ಸಿ­ದ್ದಾರೆ. ಇದರ ತುಪ್ಪ ಬಹಳ ಸವಿ ಎನ್ನು­ತ್ತಾರೆ.
ಇವರು ಒಂದು ಕ್ಯಾಂಪಿ­ನಲ್ಲಿ ಆರೆಂಟು ಬಾರಿ ಜೇನು­ತು­ಪ್ಪ­ವ­ನ್ತೆ­ಗೆ­ಯು­ತ್ತಾರೆ. ಮೆಲ್ಲಿ­ಫೆರಾ ಜೇನು 15 ದಿನ­ಕ್ಕೊಮ್ಮೆ ತುಪ್ಪ ಮಾಡು­ತ್ತದೆ. ಒಮ್ಮ ಹಿಂಡಿ­ದರೆ ಎರ­ಡ­ರಿಂದ ನಾಲ್ಕು ಕೆ.ಜಿ. ಯವ­ರೆಗೆ ತುಪ್ಪ ಗ್ಯಾರಂಟಿ. ಕಾಲು ಹಿಲೋ ಮೆಣವು ಸಿಗು­ತ್ತದೆ. ಇವರು ತುಪ್ಪ­ವನ್ನು ಸ್ವತಃ ಮಾರು­ಕಟ್ಟೆ ಮಾಡ್ತಿ­ದ್ದಾರೆ. ತಮ್ಮ ಟೆಂಟಿನ ಪಕ್ಕ­ದ­ಲ್ಲಿಯೇ ಇರುವ ಹೆದ್ದಾಯೇ ಇವರ ದೊಡ್ಡ ಮಾರಾಟ ಮಳಿಗೆ. ಒಮದು ಕಿಲೋಕ್ಕೆ140 ರೂಪಾಯಿ. ಒಮ್ಮೆ ಆಲ­ಮಟ್ಟಿ ಕ್ಯಾಂಪಿ­ನ­ಲ್ಲಿ­ರು­ವಾಗ ಅಂದಿನ ಮುಖ್ಯ­ಮಂತ್ರ ಎಸ್‌. ಎಂ. ಕೃಷ್ಣ ಇವ­ರ­ಲ್ಲಿಗೆ ಬಂದು ಜೇನನ್ನು ಕೊಂಡಿ­ದ್ದಾರೆ. ಹಾಗೇಯೆ ಬಹ­ಳಷ್ಟು ಮಂಧಿ ಈ ತುಪ್ಪ­ವನ್ನು ಇಷ್ಟ ಪಡು­ತ್ತಾರೆ. ಯಾಕೆಂ­ದರೆ ಕಣ್ಣೆ­ದು­ರಿಗೆ ಜೇನಿನ ಪೆಟ್ಟಿಗೆ, ಗ್ರಾಹ­ಕ­ರೆ­ದು­ರಿಗೆ ತುಪ್ಪ ತೆಗೆ­ಯುವ ರೀತಿ, ಒರಿ­ಜಿ­ನಲ್‌ ತುಪ್ಪ ಎನ್ನುವ ಗ್ಯಾರಂಟಿ. ಸುರೇಶ್‌ ಅವರು ಬೇರೆ ಕಡೆ ಮಾರು­ಕಟ್ಟೆ ಮಾಡಿ­ಕೊಂ­ಡಿ­ದ್ದರೆ. ಕಿಲೋಕ್ಕೆ ಅತೀ ಕಡಿಮೆ ಬೆಲೆ ಸಿಗು­ತ್ತಿತ್ತು. ಇನ್ನೂ ಕಿಲೋ ಮೇಣಕ್ಕೆ ಮಾರು­ಕ­ಟ್ಟೆ­ಯಲ್ಲಿ 200 ರೂವ­ರೆಗೆ ಇದೆ. ಇದ­ರಿಂ­ದಲೂ ಸುರೇಶ್‌ ಅವ­ರಿಗೆ ಆದಾ­ಯ­ವಿದೆ. ನಿರು­ದ್ಯೋ­ಗಿ­ಯಾ­ಗಿದ್ದ ಸುರೇಶ್‌ ಅವರು ಇಂದು ಎಂಟು ಜನ­ರಿಗೆ ಅನ್ನ­ದಾ­ತರು.
ಇವರು ಜೇನು ಸಾಕು­ವು­ದೊಂದೆ ಅಲ್ಲದೆ ಶಾಲಾ­ಮ­ಕ್ಕ­ಳಿಗೆ ರಜಾ ದಿನ­ಗ­ಳಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ ನೀಡು­ತ್ತಿ­ದ್ದಾರೆ. ಅದು ಪ್ರಾತ್ಯ­ಕ್ಷಿಕೆ ಮೂಲಕ. ಭಾಷ­ಣ­ಕ್ಕಿಂತ ಪ್ರತ್ಯಕ್ಷ ಅನು­ಭ­ವ­ದಲ್ಲಿ ಕಲಿ­ಸಿ­ದರೆ ಪರಿ­ಣಾಮ ಹೆಚ್ಚು. ಮಕ್ಕ­ಳಿಗೆ ಜೇನಿನ ಬಗ್ಗೆ ಸದ­ಭಿ­ಪ್ರಾಯ ಮೂಡಲಿ ಎಂಬುದು ಇವರ ಭಾವನೆ. ಊರು ಸುತ್ತುವ ಇವ­ರಿಗೆ ಕೆಟ್ಟ ಅನು­ಭ­ವ­ಕ್ಕಿಂತ ಪ್ರೀತಿಯ ಅನು­ಭ­ವವೇ ಹೆಚ್ಚು. ಒಮ್ಮ ಮಾತ್ರ ಅಧಿ­ಕಾ­ರಿ­ಯೊ­ಬ್ಬರು ಕಿರು­ಕುಳ ನೀಡಿ­ದ್ದಾ­ರೆ­ಮದು ವಿಷಾ­ಧಿ­ಸು­ತ್ತಾರೆ.
ಹೆಜ್ಜೇನು ಅಥವಾ ತುಡವಿ ಜೇನನ್ನು ಬೆಂಕಿ ಇಟ್ಟು ಸಾಯಿಸಿ ತುಪ್ಪ­ವನ್ನು ತೆಗೆ­ಯು­ವ­ವ­ರನ್ನು ಕಂಡರೆ ಇವ­ರಿಗೆ ಎಲ್ಲಿ­ಲ್ಲದ ಕೋಪ. ಹ್ತಿರ­ದಲ್ಲಿ ಯಾರಾ­ದರೂ ಹೀಗೆ ಮಾಡು­ವುದು ಕಂಡರೆ ತಾವೇ ಹೋಗಿ ತುಪ್ಪ­ವನ್ನು ತೆಗೆದು ಕೊಟ್ಟು ಬರು­ತ್ತಾರೆ.
ಜೇನಿನ ಕುಟುಂ­ಬ­ದಲ್ಲಿ ಆಲ­ಸಿ­ಗ­ಳಿಗೆ ಅವ­ಕಾ­ಶ­ವಿಲ್ಲ. ಅವ­ರೆ­ಲ್ಲರೂ ವೃತ್ತಿ­ನಿ­ರ­ತರು. ಆಗಷ್ಟೇ ಹುಟ್ಟಿ­ದ­ವ­ರಿಗೆ ಗೂಡಿ­ನೊ­ಳಗೆ ಕೆಲಸ. ಸ್ವಲ್ಪ ದೊಡ್ಡ­ದಾದ ಮೇಲೆ ಮೇಣ ಮಾಡುವ ಕಾರ್ಯ. ಇನ್ನೊಂದು ಚೂರು ಬೆಳೆ­ದ­ವ­ರಗೆ ಮಕ­ರ­ಮದ ಹೀರಿ ತರುವ ಬದುಕು. ವಯ­ಸ್ಸಾದ ಮೇಲೆ ಕಾವಲು ಕಾಯುವ ಕಾಯಕ. ಒಟ್ಟಾರೆ ಒಂದು ಸೆಕೆಂಡ್‌ ಸುಮ್ಮನೆ ಕೂರು­ವಂ­ತಿಲ್ಲ. ಈ ರಿತಿ ಬದುಕು ಸಾಗಿ­ಸುವ ಸಂಸಾರ ಕಾಣು­ವುದು ಜೀವ ಜಗ­ತ್ತಿ­ನಲ್ಲಿ ಜೇನಿ­ನಲ್ಲಿ ಮಾತ್ರ. ಇಂತಹ ಜೇನನ್ನು ಸಾಕು­ವುದು ಸುಲ­ಭ­ವಲ್ಲ. ಅಲ್ಲಿ ಸೋಮಾ­ರಿಗೆ ಸಾವಿನ ಶಿಕ್ಷೆ. ಹೀಗಿ­ರು­ವಾಗ ನಾವು ನಾವು ಸೋಮಾ­ರಿ­ಗ­ಳಾ­ಗದೆ ಅವು­ಗಳ ಸೂಕ್ಷ್ಮ­ವನ್ನು ಅರಿತು ಅವಕ್ಕೆ ಬೇಕಾದ ಪರಿ­ಸ­ರ­ವನ್ನು ಒದ­ಗಿ­ಸಿ­ಕೊಟ್ಟು ಅವು­ಗಳ ಜೀವನ್ದ ಎಳೆ ಎಳೆ­ಯನ್ನು ಅಧ್ಯ­ಯನ ಮಾಡಿ, ಜೇನಿನ ಭಾಷೆ­ಯನ್ನು ತಿಳಿದು ಸಾಕಿ­ದರೆ ನಮ್ಮಲ್ಲೂ ಮಧು ಪ್ರಪಂಚ ಸೃಷ್ಟಿ­ಯಾ­ಗು­ತ್ತದೆ ಎನ್ನುವ ಸುರೇಶ್‌ ಜೇನಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ್ವನ್ನು ಮಾಡಿ­ಕೊಂ­ಡಿ­ದ್ದಾರೆ. ಎಲ್ಲಿ­ಯಾ­ದರೂ ಸಾಲಾಗಿ ಜೇನಿನ ಪೆಟ್ಟಿಗೆ, ಟೆ0ಟ್‌ ಕ0­ಡರೆ ಒಮ್ಮ ಭೇಟಿ ನೀಡಿ ಸುರೇ­ಶಣ್ಣ ಸಿಗ­ಬ­ಹುದು ಜೊತೆ­ಯಲ್ಲಿ ಜೇನು ತುಪ್ಪ ಕೂಡಾ.
ನಾಗ­ರಾಜ ಮತ್ತಿ­ಗಾರ

Friday, October 16, 2009

ಪ್ರಾಯೋಗಿಕ ಜಲ ಶಾಲೆ

ಮಲೆ­ನಾಡು ಮಳೆ­ನಾಡು ಎಂಬುದು ಹಿಂದಿನ ಮಾತು. ಈಗ ಪರಿ­ಸ್ಥಿತಿ ಬದ­ಲಾ­ಗಿದೆ. ಬೇಸಿ­ಗೆ­ಯಲ್ಲಿ ನೀರಿನ ತೊಂದರೆ ಅನು­ಭ­ವಿ­ಸು­ವ­ವ­ರಲ್ಲಿ ಮಲೆ­ನಾ­ಡಿ­ಗರೂ ಇದ್ದಾರೆ. ಈ ತೊಂದರೆ ನೀಗಿ­ಸುವ ನಿಟ್ಟಿ­ನಲ್ಲಿ ಮಳೆ­ಕೊ­ಯ್ಲಿನ ಬಗ್ಗೆ ಜಾಗೃತಿ ಮುಡಿ­ಸುವ ಕೆಲಸ ನಡೆದೇ ಇದೆ. ಆದರೆ ಹೆಚ್ಚಿ­ನ­ವರು ಅದನ್ನು ಗಂಭೀ­ರ­ವಾಗಿ ತೆಗೆದು ಕೊಳ್ಳ­ಲಿಲ್ಲ. ಗಂಭೀ­ರ­ವಾಗಿ ತೆಗೆದು ಕೊಂಡಿ­ರು­ವ­ವರು ಬೆಳ­ಕಿಗೆ ಬಳ­ಕಿಗೆ ಬರು­ತ್ತಿಲ್ಲ. ಮಳೆ­ಕೊ­ಯ್ಲಿನ ಬಗ್ಗೆ ಗಂಭೀರ ಚಿಂತನೆ ನಡೆಸಿ, ಜನ­ಜಾ­ಗೃ­ತಿಯ ಬೆಳಕು ಹರ­ಡಲಿ ಎಂಬ ಆಶಯ ಹೊಂದಿ­ರುವ ಹವ್ಯಾಸಿ ಪತ್ರ­ಕರ್ತ, ಕೃಷಿಕ ಶಿವಾ­ನಂದ ಕಳವೆ ಅವರ `ಪ್ರಯೋ­ಗ­ಶೀ­ಲತೆ' ಮಾದ­ರಿ­ಯಾ­­ಬ­ಹುದು.
ಶಿವಾ­ನಂ­ದರ ಅಡಿಕೆ ತೋಟದ ಜೊತೆ ಒಂದಷ್ಟು ಸೊಪ್ಪಿನ ಬೆಟ್ಟ ಸಹ ಇದೆ. ಹದಿ­ನಾರು ಎಕರೆ ಬೆಟ್ಟ­ದಲ್ಲಿ ಸುಮಾರು ಹನ್ನೆ­ರಡು ಎಕರೆ ಬೆಟ್ಟ ಒಂದೇ ಕಡೆ ಇದೆ. ಈ ಬೆಟ್ಟದ ಶೇಕಡಾ ಎಪ್ಪ­ತ್ತು­ರಷ್ಟು ಭಾಗ­ದಲ್ಲಿ ಕಳ­ವೆ­ಯ­ವರು ಮಳೆ ಕೊಯ್ಲಿನ ವಿವಿಧ ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ. ಜೊತೆ­ಯಲ್ಲಿ ಅಪ­ರೂ­ಪದ ಸಸ್ಯ ಪ್ರಭೇ­ಧ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ.
ಮಳೆ­ಕೊ­ಯ್ಲಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ­ವನ್ನು ನಡೆ­ಸಿ­ರಿ­ರು­ವ­ವರು ಕಳ­ವೆ­ಯ­ವರು. ಈ ಕುರಿತು ಸಾಕಷ್ಟು ಯಶಸ್ವೀ ಪ್ರಯೋ­ಗ­ಗ­ಳನ್ನು ಬಲ್ಲ­ವರು. ನಿರು ಇಂಗಿ­ಸುವ ಕುರಿತು ಸ್ಲೈಡ್‌ ಶೋ ನಡೆಸಿ ನೀರಿನ ಮಹ­ತ್ವ­ವನ್ನು ಜನ­ರಿಗೆ ತಿಳಿ­ಸಿ­ದ­ವರು. ಒಂದು ಕಡೆ ಸ್ಲೈಡ್‌ ಶೋ ನಡೆ­ಸು­ವಾಗ ಹಿರಿ­ಯ­ರೊ­ಬ್ಬರು ಕೇಳಿ­ದ­ರಂತೆ- `ನಿಮಗೆ ನೀರಿಂ­ಗಿ­ಸುವ ಬಗ್ಗೆ ಸ್ವ ಅನು­ಭ­ವ­ವೇನು?' ಎಂದು.
ಅಂದೇ ಕಳವೆ ಅವರು ನಿರ್ಧ­ರಿ­ಸಿ­ದರು: `ನಾನು ಮೊದಲು ನೀರಿಂ­ಗಿ­ಸುವ ಕೆಲಸ ಮಾಡ­ಬೇಕು ನಂತರ ಪ್ರವ­ಚನ. ಹಾಗೆಯೇ ಪ್ರತಿ ವರ್ಷ ನನ್ನ ದುಡಿ­ಮೆಯ ಒಂದು ಭಾಗ­ವನ್ನು ನೀರಿಂ­ಗಿ­ಸುವ ಕೆಲ­ಸಕ್ಕೆ ಬಳ­ಸ­ಬೇಕು'
ಸೊಪ್ಪಿನ ಬೆಟ್ಟದ ಪಕ್ಕ­ದಲ್ಲಿ ಕಳ­ವೆ­ಯ­ವರ ಅಡಿಕೆ ತೋಟ­ವಿದೆ. ಆ ತೋಟ ಮುಂಚೆ ಸೋರ­ಗು­ತ್ತಿತ್ತು. ನೋಡಲು ಬಂದ­ವರು `ಮಳೆ­ಗಾ­ಲ­ದಲ್ಲಿ ನೀರು ಹೆಚ್ಚಾಗಿ ಜವ­ಳಾ­ಗು­ತ್ತಿದೆ. ತೋಟದ ಕಾಲು­ವೆ­ಯನ್ನು ಆಳ ಮಾಡ­ಬೇಕು' ಎಂದು ಸಲಹೆ ನೀಡು­ತ್ತಿ­ದ್ದರು. ಸರಿ ತೋಟದ ಕಾಲು­ವೆ­ಯನ್ನು ಆಳ ಮಾಡಿ­ದ್ದಾ­ಯಿತು. ಪಂಪ್‌­ಸೆಟ್‌ ಹಾಕಿ­ಯಾಯ್ತು. ಆದರೆ ಪ್ರಯೋ­ಜನ ಬರ­ಲಿಲ್ಲ. ಕಾರಣ ತೋಟ­ದಲ್ಲಿ ತೆಗೆದ ಬಾವಿ­ಯಲ್ಲಿ ನೀರೇ ಇರು­ತ್ತಿ­ರ­ಲಿಲ್ಲ. ತೋಟ ಮತ್ತೂ ಸೊರ­ಗಿತು ಇಳು­ವ­ರಿಯೂ ಕಡಿ­ಮೆ­ಯಾ­ಯಿತು.
ಈಗ ಕಳವೆ ಅವರ ಮಳೆ ಕೊಯ್ಲಿನ ಅಭಿ­ಯಾನ ಆರಂ­ಭ­ವಾ­ಯಿತು. ಮೊದಲು ಸೊಪ್ಪಿನ ಬೆಟ್ಟ­ದಲ್ಲಿ ಉತ್ತಮ ಜಾತಿಯ ಸಸ್ಯ ಪ್ರಭೇ­ದ­ಗ­ಳನ್ನು ನಾಟಿ ಮಾಡಿ­ದರು. ನಾಟಿ ಮಾಡಿದ ಈ ಸಸ್ಯ­ಗಳ ಮೇಲ್ಬಾ­ಗ­ದಲ್ಲಿ ಅರ್ಧ ಚಂದ್ರಾ­ಕೃ­ತಿ­ಯಲ್ಲಿ ಇರು ಕಾಲುವೆ ನಿರ್ಮಾಣ. ಬೆಟ್ಟದ ಬುಡ­ದ­ಲ್ಲಿ­ರುವ ಕೆರೆಗೆ ನೀರನ್ನು ಇಂಗಿ­ಸುವ ಯತ್ನ­ವಾಗಿ ಬೆಟ್ಟ­ದಲ್ಲಿ ಅಲ್ಲಲ್ಲಿ ಇಂಗು­ಗುಂ­ಡಿ­ಗ­ಳನ್ನು ತೋಡಿ­ಸಿ­ದರು. ಅವು­ಗಳ ಮುಂದೆ ಪುನಃ ಕಾಲು­ವೆ­ಗಳು. ಇಂಗು­ಗುಂ­ಡಿ­ಯಲ್ಲಿ ಉಕ್ಕಿದ ನೀರು ಈ ಕಾಲು­ವೆಗೆ ಬಂದು ಬೀಳು­ವಂ­ತಾ­ಯಿತು. ಈ ರೀತಿ ಮಾಡಿ­ರು­ವು­ದ­ರಿಂದ ಅನಾದಿ ಕಾಲ­ದಿಂದ ಕಳ­ವೆ­ಯ­ಲ್ಲಿ­ರುವ `ಹಾರ್ನಳ್ಳಿ ಕೆರೆ`ಗೆ ನೀರನ ಬರ ನೀಗಿತು. ಈಗ ಈ ಕೆರೆಯ ಕೂಡ ಹೂಳೆತ್ತಿ ಸ್ವಚ್ಛ ಮಾಡ­ಲಾ­ಗಿದೆ. ಬೆಟ್ಟದ ಒಂದು ಮಗ್ಗು­ಲಲ್ಲಿ ಇಂಗುವ ನೀರು ಹಾರ್ನಳ್ಳಿ ಕೆರೆಗೆ ಆಸ­ರೆ­ಯಾ­ಯಿತು.
ಬೆಟ್ಟದ ಇನ್ನೊಂದು ದಿಕ್ಕಿ­ನಲ್ಲಿ ಕಳ­ವೆ­ಯ­ವರೇ ಒಂದು ಕೆರೆಯ ನಿರ್ಮಿ­ಸಿ­ದ್ದಾರೆ.ಇದು 16 ಅಡಿ ಆಳ 35 ಅಡಿ ವಿಸ್ತೀರ್ಣ ಈ ಕೆರೆ ಹೊಂದಿದೆ. ಈ ಕೆರೆಗೆ ಸುಮಾರು ಭಾಗದ ನೀರು ಬಂದು ಶೇಖ­ರಣೆ ಆಗು­ತ್ತದೆ. ಇದ­ರಲ್ಲಿ ಹೆಚ್ಚಾದ ನೀರು ಹಾಳಾ­ಗದೆ ಹಾರ್ನಳ್ಳಿ ಕೆರೆಗೆ ಸೇರಿ ಕೊಳ್ಳು­ತ್ತದೆ. ಕಳೆದ ವರ್ಷ­ದಿಂದ ಇವರು ಬೆಟ್ಟದ ತಲೆ­ಯಲ್ಲಿ ಸುಮಾರು ಒಂದು ಎಕ­ರೆ­ಯಷ್ಟು ಜಾಗ­ವನ್ನು ಸಮ­ತ­ಟ್ಟಾಗಿ ಮಾಡಿ­ದ್ದಾರೆ. ಇದರ ಸುತ್ತ ಬದು­ಗ­ಳನ್ನು ಹಾಕಿ­ದ್ದಾರೆ. ಇದು ಒಂದು ಕೆರೆಯ ಮಾದ­ರಿ­ಯಲ್ಲೇ ಇದೆ. ಇದರ ಒಳ­ಗಡೆ ಅಪ­ರೂ­ಪದ ಮಾವಿನ ಸಸಿ­ಗ­ಳನ್ನು, ಅಲಂ­ಕಾ­ರಿಕ ಸಸ್ಯ, ಬಹು­ವಿ­ಧದ ಸಸ್ಯ­ಗ­ಳನ್ನು ಇಲ್ಲಿ ನಾಟಿ ಮಾಡಿ­ದ್ದಾರೆ.
ಈ ಜಾಗ­ದಲ್ಲಿ ಲಕ್ಷಾಂ­ತರ ಲೀಟರ್‌ ನೀರು ಇಂಗು­ತ್ತದೆ. ಇದರ ಕೆಳ­ಗಡೆ ಮತ್ತೆ ಒಡ್ಡುನ್ನು ಮಾಡಿ­ದ್ದಾರೆ. ಮೇಲೆ ಹೆಚ್ಚಾದ ನೀರು ಕೆಳ­ಗಡೆ ಒಂದು ಇಂಗು­ತ್ತದೆ. ಒನ್ನೊಮ್ಮೆ ಇಲ್ಲೂ ನೀರು ಹೆಚ್ಚಾ­ದರೆ ಗುಡ್ಡಕ್ಕೆ ಅಡ್ಡ­ದಾಗಿ ತೋಡಿದ ಕಾಲು­ವೆ­ಯಲ್ಲಿ ಬಂದು ಸೇರಿ­ತ್ತದೆ. ಈ ಕಾಲುವೆ ಕೂ ಮೆಟ್ಟಲು ಮಾದ­ರಿ­ಯಲ್ಲಿ ಇರು­ವ­ದ­ರಿಂದ ಅಲ್ಲಿಯೇ ನೀರು ಇಂಗು­ತ್ತದೆ. ಒಟ್ಟಾರೆ ಕಳವೆ ಅವರ ಬೆಟ್ಟ­ದಲ್ಲಿ ಎಲ್ಲಿ ಬಿದ್ದ ಮಳೆ ನೀರು ಅಲ್ಲಯೇ ಇಂಗು­ತ್ತದೆ. ನೀರು ಹರಿದು ಓವ ಅವ­ಕಾ­ಶವೇ ಇಲ್ಲ.
`ಮಳೆ ನೀರನ್ನು ಠೇವಣಿ ಇಟ್ಟು ಅಂರ್ತ­ಜಲ ಹಿಂಪ­ಡೆ­ಯುವ ಪ್ರಯ­ತ್ನ­ವಿದು. ಮಳೆ ನೀರನ್ನು ಸಂಗ್ರ­ಹಿ­ಸು­ವು­ದ­ರಿಂದ ಜಲ ಸಮೃದ್ಧಿ ಪಡಿ­ಯ­ಲಿಕ್ಕೆ ಸಾಧ್ಯ ಎನ್ನು­ವು­ದನ್ನು ನೋಡಿ ಅನು­ಭ­ವಿ­ಸಿದ್ದೆ. ಆದರೆ ಇಂದು ಇದು ನನ್ನ ಸ್ವ ಅನು­ಭ­ವಕ್ಕೆ ಬಂದಿದೆ. ವರ್ಷ ಹತ್ತು ಹದಿ­ನೈದು ಸಾವಿರ ರೂಪ­ಯಿ­ಯನ್ನು ಮಳೆ ಕೊಯ್ಲಿನ ಕೆಲ­ಸಕ್ಕೆ ವಿಯೋ­ಗಿ­ಸು­ತ್ತಿ­ದ್ದೇನೆ. ಆರೆಂಟು ವರ್ಷದ ಹಿಂದೆ ನಮ್ಮ ತೋಟ ಸೋರ­ಗು­ತ್ತಿತ್ತೋ ಇಂದು ಆ ಸಮಸ್ಯೆ ಇಲ್ಲ ತೋಟ ಈಗ ಸದಾ ಹಸಿ­ರಾ­ಗಿ­ರು­ತ್ತದೆ. ನಮ್ಮ ಕೆರೆ­ಯಲ್ಲಿ ಕಡು ಬೇಸಿ­ಗೆ­ಯಲ್ಲು 8 ಅಡಿ ನೀರು ಇರು­ತ್ತದೆ. ತೋಟಕ್ಕೂ ನೀರಾ­ವ­ರಿ­ಯಾ­ಗಿದೆ' ಎನ್ನು­ವುದು ಕಳವೆ ಅವರ ಅನು­ಭ­ವದ ನುಡಿ.
ಕಳವೆ ಅವರ ಬೆಟ್ಟ ಮಳೆ ಕೊಯ್ಲು ಮಾಡುವ ಆಸ­ಕ್ತ­ರಿಗೆ ಒಂದು ಪ್ರಾಯೋ­ಗಿಕ ಸ್ಥಳ. ಮಳೆ ಕೊಯ್ಲು ಮಾದ­ರಿ­ಗಳ ಅಪ­ರೂ­ಪದ ಕ್ಷೇತ್ರ. ಇಂದು ಇದೊಂದು ಅಘೋ­ಷಿತ ಪ್ರವಾಸಿ ತಾಣ­ವಾ­ಗಿದೆ. ಬಹ­ಳಷ್ಟು ಮಂದಿ ಇಲ್ಲಿಗೆ ಬಂದು ಕಳವೆ ಅವರ ಜಲ ಸಾಧನೆ ನೋಡಿ ಹೋಗು­ತ್ತಿ­ದ್ದಾರೆ. ಅಧ್ಯ­ಯನ ತಂಡ­ಗಳು ಇಲ್ಲಿಗೆ ಆಗ­ಮಿ­ಸು­ತ್ತಿದೆ.
ಪ್ರಾಯೋ­ಗಿಕ ಜಲ ಶಾಲೆಗೆ ಬಗ್ಗೆ ವಿವ­ರಣೆ ಬೇಕೇ? +919448023715

ನಾಗ­ರಾಜ ಮತ್ತಿ­ಗಾರ