Sunday, September 27, 2009

ಕೆಲ ಕೆಲಸ ಕುಂತಲ್ಲಿ, ಉಚಿತವಾಗಿ!




ರೈತ ಕಾಲದೊಂದಿಗೆ ಸ್ಪರ್ಧಿಸಲೇಬೇಕು. ಕೃಷಿಗೆ ಮತ್ತು ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಜೊತೆಗೆ ಆ ಪ್ರಕ್ರಿಯೆಗೆ ಪೂರಕವಾದ ಜಾಣ್ಮೆಯನ್ನು ತುಂಬಿಕೊಳ್ಳಬೇಕು. ಹಾಗಂತಲೇ ಈ ಅಂಕಣ ಹಲವು ನಿಟ್ಟಿನ ಮಾಹಿತಿಗಳನ್ನು ನಿಮಗೆ ಕೊಟ್ಟಿದೆ. ಈ ಬಾರಿ ಹಲವು ಸಣ್ಣ ಪುಟ್ಟ ವಿಷಯಗಳು, ಮಾಹಿತಿಗಳತ್ತ ದೃಷ್ಟಿ ಹಾಯಿಸೋಣ. ಬಹುಷಃ ಈ ಕ್ಷಣಕ್ಕೆ ಅವು ಸಹಾಯಕ ಎನ್ನಿಸದಿರಬಹುದು. ಆದರೆ ಒಂದಲ್ಲಾ ಒಂದು ಘಳಿಗೆಯಲ್ಲಿ ಇವು ಬೇಕಾಗುವುದು ಖಚಿತ.
ಕೃಷಿ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಉಚಿತ ದೂರವಾಣಿ ಸೌಲಭ್ಯವನ್ನು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ನಾವು ೧೮೦೦ ೪೨೫ ೩೫೫೩ ಎಂಬ ಸಂಖ್ಯೆಗೆ ಕರೆ ಮಾಡಬಹುದು. ರಾಜ್ಯ ಮಟ್ಟದಲ್ಲಿ ರೈತರ ದೂರು, ಸಲಹೆಗಳನ್ನು ಸ್ವೀಕರಿಸಲು ಹಾಗೂ ಸೂಕ್ತವಾದ ಪರಿಹಾರೋಪಾಯ ನೀಡಲು ಸ್ಥಾಪಿಸಲಾಗಿರುವ ರೈತ ಸಹಾಯವಾಣಿಯಿದು ಎಂದು ರಾಜ್ಯ ಕೃಷಿ ಇಲಾಖೆ ಹೇಳಿಕೊಂಡಿದೆ.
ಕೃಷಿ ಪರಿಕರಗಳ ಲಭ್ಯತೆ, ಇಲಾಖಾ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕ್ರಮಗಳು, ಮಣ್ಣು ಹಾಗೂ ನೀರಿನ ವಿಶ್ಲೇಷಣೆ, ಬೆಳೆ ವಿಮೆ, ಸಾವಯವ ಕೃಷಿ, ಕೃಷಿ ಸಂಬಂಧಿತ ಇತರ ವಿಚಾರಗಳನ್ನು ಈ ದೂರವಾಣಿ ಸಹಾಯದಿಂದ ಕೇಳಬಹುದು. ಈ ಸಂಖ್ಯೆಗೆ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡಬಹುದು.
ಇವಿಷ್ಟು ಕೃಷಿ ಇಲಾಖೆಯ ಪ್ರಚಾರ. ಇದೇ ಅಂಕಣದಲ್ಲಿ ಕೃಷಿಕ ಮಾಹಿತಿಗಾಗಿ ೧೫೫೧ಕ್ಕೆ ಕರೆ ಮಾಡಬಹುದಾದ ಮಾಹಿತಿ ಪ್ರಕಟಗೊಂಡಿದ್ದು ನಿಮಗೆ ನೆನಪಿರಬಹುದು. ಇದು ಕೇಂದ್ರ ಸರ್ಕಾರದಿಂದ ರೂಪಿತವಾಗಿದ್ದು, ಇದರ ಸಮಯ ಬೆಳಿಗ್ಗೆ ಆರರಿಂದ ರಾತ್ರಿ ಹತ್ತು. ಇಲ್ಲಿ ಕೇವಲ ಬೇಸಾಯ, ಕೃಷಿ ತಂತ್ರ ಕುರಿತ ಮಾಹಿತಿ ಲಭ್ಯವಾದರೆ ರಾಜ್ಯದ ರೈತ ಸಹಾಯವಾಣಿಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿ ಗಿಟ್ಟುವುದರಿಂದ ರೈತರು ದುಸ್ಸೆಂದು ಸ್ಥಳೀಯ ಕೃಷಿ ಇಲಾಖೆಯ ಕಛೇರಿಗೆ ಹೋಗಿ ಮಾಹಿತಿ ತಿಳಿಯಬೇಕಾದುದಿಲ್ಲ. ಒಂದು ಫೋನ್ ಕರೆ ಸಾಕು.
ರೈತರ ದುರದೃಷ್ಟವೋ ಏನೋ ಈ ಸಂಖ್ಯೆಗೆ ಕರೆ ಮಾಡಿದಾಗ ಬಹುಪಾಲು ವೇಳೆ ‘ಕರೆ ಸ್ವೀಕರಿಸುವವರು ಸದ್ಯ ಲಭ್ಯವಿಲ್ಲ. ಅವರು ಇನ್ನೊಬ್ಬರೊಂದಿಗೆ ಸಂಭಾಷಣೆಯಲ್ಲಿದ್ದಾರೆ’ ಎಂಬರ್ಥದ ಸೂಚನೆ ಬರುತ್ತದೆ. ಇಡೀ ರಾಜ್ಯಕ್ಕೆ ಒಂದೇ ಲೈನ್‌ನ ದೂರವಾಣಿ ಇದೆಯೇ ಅಥವಾ ಬೇರೊಂದು ವ್ಯವಹಾರದ ದೂರವಾಣಿ ಸಂಖ್ಯೆಗೇ ಈ ಸಹಾಯವಾಣಿಯನ್ನು ಸೇರಿಸಿಬಿಟ್ಟಿದ್ದರೋ ಗೊತ್ತಾಗುತ್ತಿಲ್ಲ. ಕೃಷಿಕರಿಗೆ ಅನುಕೂಲವಾಗುವ ಇಂತಹ ಸೌಲಭ್ಯಗಳ ಕುರಿತು, ಅದರ ವ್ಯವಸ್ಥಿತ ಚಾಲನೆಗೆ ರೈತ ಪರ ಸಂಘಟನೆಗಳು ಗಟ್ಟಿಕೂರಬೇಕು. ಹತ್ತು ಹಲವು ಓಡಾಟ ಒಂದು ಫೋನ್ ಕರೆಯಿಂದ ತಪ್ಪುವುದಾದರೆ ಅಷ್ಟರಮಟ್ಟಿಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?
ಪ್ರತಿಯೊಂದು ಬೆಳೆಯನ್ನು ಕೃಷಿ ವ್ಯಾಪಾರ ಮಾರುಕಟ್ಟೆ - ಎಪಿಎಂಸಿಗೆ ತಂದು ಮಾರುವುದು ಸೂಕ್ತ. ಆದರೆ ರೈತರಿಗೆ ಹತ್ತಾರು ಸಮಸ್ಯೆ. ಎಂದು ಮಾರುಕಟ್ಟೆಗೆ ಬೆಳೆಯನ್ನು ವಿಕ್ರಯಿಸಲು ತೆಗೆದುಕೊಂಡು ಹೋಗುವುದು? ಕೈ ಸಾಲ ಮಾಡಿದರಂತೂ ಮನೆಬಾಗಿಲಿನಲ್ಲಿ ಮಾರಲೇಬೇಕಾದ ಅನಿವಾರ್ಯತೆ. ಅಲ್ಲೂ ಆ ದಿನದ ಮಾರುಕಟ್ಟೆ ದರದ ಅರಿವಿರದೆ ಮಧ್ಯವರ್ತಿ ಹೇಳಿದ ಬೆಲೆಗೆ ಬೆಲೆ ಮಾರಿ ಕೈ ಸುಟ್ಟುಕೊಳ್ಳುವುದಿದೆ. ಖುದ್ದು ಮಾರುಕಟ್ಟೆಗೆ ಹೋಗಿ ಪೇಟೆಧಾರಣೆಯ ಮಾಹಿತಿ ಸಂಗ್ರಹಿಸುವುದು ಕಷ್ಟವಾದುದರಿಂದ ಇನ್ನೊಂದು ಫೋನ್ ಸೌಲಭ್ಯ ರೈತರ ನೆರವಿಗೆ ನಿಲ್ಲುತ್ತದೆ. ೧೮೦೦ ೪೨೫ ೧೫೫೨ಕ್ಕೆ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು. ಇದೂ ಉಚಿತ ವ್ಯವಸ್ಥೆ. ಕರೆ ಮಾಡಿದಾತನಿಗೆ ನಯಾ ಪೈಸೆಯ ವೆಚ್ಚ ತಗಲುವುದಿಲ್ಲ. ನಿಮಗೆ ಗೊತ್ತಿರಲಿ, ೧೮೦೦ಯಿಂದ ಆರಂಭವಾಗುವ ಎಲ್ಲ ೧೧ ಅಂಕಿಗಳ ದೂರವಾಣಿ ಕರೆದಾತರಿಗೆ ಉಚಿತ. ಕರೆ ಸ್ವೀಕರಿಸುವಾತ ಆ ವೆಚ್ಚವನ್ನು ಭರಿಸುತ್ತಾನೆ.
ರೈತರ ಮಗದೊಂದು ಸಂಕಷ್ಟ ಹವಾಮಾನ. ನಿಜ, ಪ್ರಕೃತಿಯನ್ನು ಇದಮಿತ್ಥಂ ಎಂದು ಊಹಿಸುವುದು ಮಾನವನಿಂದ ಸಾಧ್ಯವಿಲ್ಲ. ಆದರೆ ಕೊನೆಪಕ್ಷ ಕೆಲವು ಹವಾಮಾನ ಮುನ್ಸೂಚನೆಗಳಿದ್ದರೆ ಕೃಷಿಕ ತನ್ನ ಕೃಷಿ ಚಟುವಟಿಕೆಗಳನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ಆಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದೇನೋ.
ಸಾಧಾರಣದಿಂದ ಭಾರೀ ಮಳೆ ಎಂಬ ಹವಾಮಾನ ಭವಿಷ್ಯ ಅನಾದಿಕಾಲದಿಂದಲೂ ಟೀಕೆಗೆ ಒಳಗಾಗಿದೆ. ಆದರೆ ಒಮ್ಮೆ ಹವಾಮಾನ ಭವಿಷ್ಯ ಇದ್ದರೆ ಚೆನ್ನ ಎನ್ನಿಸುವುದಿದೆ. ಮಾನ್ಸೂನ್ ಮಾರುತಗಳ ದುರ್ಬಲತೆ ಕುರಿತು, ಅಪ್ಪಳಿಸುವ ಚಂಡಮಾರುತ ಸಾಗುವ ದಿಕ್ಕಿನ ವಿವರ ತಿಳಿಯಲು ಹವಾಮಾನ ವರದಿ ಲಭ್ಯವಾಗಬೇಕು ಎನ್ನಿಸಬಹುದು. ಈಗ ದೈನಿಕವನ್ನು ತೆರೆದು ಯಾವ ಪುಟದ ಮೂಲೆಯಲ್ಲಿ ಹವಾಮಾನ ಮುನ್ಸೂಚನೆ ಪ್ರಕಟವಾಗಿದೆ ಎಂಬುದನ್ನು ಹುಡುಕಬೇಕಾಗಿಲ್ಲ. ಸುಮ್ಮನೆ ನಿಮ್ಮ ದೂರವಾಣಿಯಿಂದ ಡಯಲ್ ಮಾಡಿ, ೧೮೦೦ ೧೮೦ ೧೭೧೭ಕ್ಕೆ! ಇದನ್ನು ಹವಾಮಾನ ವಿವರ ನೀಡಲೆಂದೇ ನಿಯೋಜಿಸಲಾಗಿದೆ.
ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥಗಳನ್ನು ಕೊಡಲು ಸರ್ಕಾರ ಪಡಿತರ ಪದ್ಧತಿಯನ್ನು ಅನುಸರಿಸುತ್ತದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ನಿಗದಿತ ಪಡಿತರ ಒದಗಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪಡಿತರ ಪಡೆಯುವ ಬಹುಸಂಖ್ಯಾತರು ರೈತರು ಹಾಗೂ ರೈತ ಕಾರ್ಮಿಕರು. ಅನಕ್ಷರತೆ ಮತ್ತು ಮುಗ್ಧತೆಯಿಂದಾಗಿ ರೈತ ಕಾರ್ಡುದಾರರು ಹಲವಾರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಒಂದು ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿದೆ.
೧೮೦೦ ೪೨೫ ೯೩೩೯ ಎಂಬುದು ಆ ದೂರವಾಣಿ. ದಿನದ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತರವರೆಗೆ ಕಾರ್ಯನಿರ್ವಹಿಸುತ್ತದೆ. ಸೀಮೆಎಣ್ಣೆ, ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ಪದಾರ್ಥಗಳ ವಿತರಣೆಯಲ್ಲಿ ಲೋಪದೋಷಗಳಿದ್ದರೆ, ಕಾರ್ಡಿಗೆ ನೀಡಬೇಕಾದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರೆ ಅಥವಾ ಹೆಚ್ಚು ಬೆಲೆ ವಸೂಲಿಸುತ್ತಿದ್ದರೆ, ತೂಕದಲ್ಲಿ ವಂಚನೆ ಇಲ್ಲವೇ ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ವಿತರಿಸದಿದ್ದರೆ, ದಾಸ್ತಾನು ಮುಗಿದಿದೆ ಎಂದು ಒಂದು ವಾರದ ನಂತರ ಬಂದವರಿಗೆ ಪಡಿತರ ಪದಾರ್ಥ ಕೊಡದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ದೂರಬಹುದು. ಈ ನ್ಯಾಯ ಬೆಲೆ ಅಂಗಡಿಗಳು ವಾರದ ರಜಾ ದಿನವಾದ ಮಂಗಳವಾರವನ್ನು ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ ೧೨ರವರೆಗೆ ಮತ್ತು ಮಧ್ಯಾಹ್ನ ನಾಲ್ಕರಿಂದ ರಾತ್ರಿ ಎಂಟರವರೆಗಿನ ವೇಳೆಯಲ್ಲಿ ಬಾಗಿಲು ತೆರೆಯದಿದ್ದರೂ ದೂರು ದಾಖಲಿಸಬಹುದು. ದೂರು ನೀಡುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಯಾವ ನ್ಯಾಯಬೆಲೆ ಅಂಗಡಿಯ ವಿರುದ್ಧ ದೂರು ಎಂಬ ವಿವರವನ್ನು ಕರೆ ಮಾಡಿದಾಗ ನೀಡಬೇಕಾಗುತ್ತದೆ. ದೂರುದಾರ ಇಚ್ಛಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.
ದೂರು ಸ್ವೀಕರಿಸಿದವರು ದೂರು ಸಂಖ್ಯೆಯನ್ನು ನೀಡಿರುತ್ತಾರೆ. ದೂರು ಕೊಟ್ಟ ಎರಡು ದಿನದ ನಂತರ ಅದೇ ನಂಬರ್‌ಗೆ ಕರೆ ಮಾಡಿ ಈ ದೂರುಸಂಖ್ಯೆಯನ್ನು ತಿಳಿಸಿದರೆ ತನಿಖೆ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸುತ್ತಾರೆ. ಒಂದೊಮ್ಮೆ ಇದಕ್ಕೂ ತೃಪ್ತಿ ಸಿಗದಿದ್ದರೆ ನಾವು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಕೆಟಿಂಗ್ ಫೆಡರೇಶನ್ ಕಟ್ಟಡ, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು ೫೬೦೦೫೨ಕ್ಕೆ ಲಿಖಿತ ದೂರು ಸಲ್ಲಿಸಬಹುದು.
ಸದ್ಯಕ್ಕೆ ಕೆಲವು ಅಡೆತಡೆಗಳಿವೆ. ಮಾರುಕಟ್ಟೆ ದರ ತಿಳಿಯುವ ಮತ್ತು ಹವಾಮಾನ ಅರಿಯುವ ಉಚಿತ ದೂರವಾಣಿ ಸೇರಿದಂತೆ ಹಲವು ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸಲು ಹಕ್ಕೋತ್ತಾಯ ಮಾಡಲೇಬೇಕು. ಪ್ರತಿ ರೈತ ಆಯಾ ಇಲಾಖೆಗಳಿಗೆ ಸರಿಪಡಿಸುವಂತೆ ಕಾರ್ಡ್ ಚಳುವಳಿ ಹಮ್ಮಿಕೊಂಡರೂ ಫಲ ನೀಡೀತು. ಇನ್ನು ರೈತ ಸಂಘಟನೆಗಳು ಈ ವಿಚಾರವನ್ನು ಆದ್ಯತೆಯ ಮೇಲೆ ತೆಗೆದುಕೊಂಡರಂತೂ ಅದು ಸ್ವಾಗತಾರ್ಹ ನಿಲುವು. ಇನ್ನೇನು ಹೇಳಲಾದೀತು?
-ಮಾವೆಂಸ
ಇಲ್ಲಿನ ಮಾಹಿತಿಗಳ ಬಗ್ಗೆ ಲೇಖಕನಿಂದಲೇ ವಿವರ ಬೇಕಿದ್ದರೆ ಸಂಜೆ ೮ರ ನಂತರ ಸಂಪರ್ಕಿಸಬಹುದು. ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨,
ಇ ಮೇಲ್- mavemsa@gmail.com

Friday, September 11, 2009

ಟೆರೆಸ್ ಕಿಚನ್ ಗಾರ್ಡನ್



ಬೆಂಗಳೂರಿನಲ್ಲಿ ರೋಗ ಬರಲು ಕಾರಣಗಳು ಹಲವು. ಒತ್ತಡದ ಜೀವನದಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು ಇದಕ್ಕೊಂದು ಕಾರಣ. ಮನೆಯ ಹೊರಗಡೆಯ ಆಹಾರ ಸೇವನೆಗೆ ಮೊರೆ ಹೋಗುವವರು ಬಹಳ ಮಂದಿ. ಮನೆಯಲ್ಲೇ ಅಡುಗೆ ಮಾಡಿ ತಿನ್ನುವವರಿಗೆ ಸಿಗುವ ತರಕಾರಿ `ತಾಜಾ' ಎನ್ನಲು ಸಾಧ್ಯವಿಲ್ಲ. ಅದು ರಾಸಾಯನಿಕ ಬಳಸಿ ಬೆಳೆದ ತರಕಾರಿಯೂ ಆಗಿರಬಹುದು. ಅದಕ್ಕಾಗಿ ಶುದ್ಧ ಮತ್ತು ಸಾವಯವ ತರಕಾರಿಯನ್ನು ತಿನ್ನಬಯಸುವ ಮಂದಿ ಸಾವಯವ ತರಕಾರಿ ಮಳಿಗೆಗಳನ್ನು ಆಯ್ದುಕೊಂಡರು. ಆದರೆ ಬೇಕಾದ ತರಕಾರಿಯೆಲ್ಲ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಕೆಲವರು ತಾವೇ ಕೈತೋಟ ಮಾಡಿಕೊಂಡು ತರಕಾರಿ ಬೆಳೆಯಲು ಪ್ರಾರಂಭಿಸಿದರು.

ಬೆಂಗಳೂರಿನಲ್ಲಿ ಕೈತೋಟ ಮಾಡಿಕೊಳ್ಳುವಷ್ಟು ಜಾಗ ಇರುವವರು ಬಹಳ ಕಡಿಮೆ ಮಂದಿ. ಜಾಗದ ಸಮಸ್ಯೆ ಕಂಡುಕೊಂಡ ಉಪಾಯ`ಟೆರೆಸ್ಕಿಚನ್ಗಾರ್ಡನ್‌'.

ಟೆರೆಸ್ಮೇಲೆ ಗಾರ್ಡನ್ಮಾಡುವ ಪದ್ಧತಿ ಹೊಸತೇನಲ್ಲ. ಆದರೆ ಕೇವಲ ತರಕಾರಿ ಬೆಳೆಸುವ ಕ್ರಮ ಹೊಸತು. ಟೆರೆಸ್ಕಿಚನ್ಗಾರ್ಡನ್ಮಾಡುವುದರಲ್ಲೂ ಕೆಲವಷ್ಟು ವಿಧಾನಗಳಿವೆ. ಕುಂಡದಲ್ಲಿ ಮಣ್ಣನ್ನು ಬಳಸಿ ಮಾಡುವಂಥದ್ದು ಒಂದು ಕ್ರಮ. ಆದರೆ ಇದರಿಂದ ತೂಕ ಹೆಚ್ಚಾಗಿ ಟೆರೆಸ್ಗೆ ತೊಂದರೆಯಾಗುವ ಸಾಧ್ಯತೆಯು ಇದೆ. ಅದಕ್ಕಾಗಿ ಹೊಸ ರೀತಿಯಲ್ಲಿ ತರಕಾರಿ ಬೆಳೆಸುವ ವಿಧಾನವನ್ನು ಪೂರ್ಣ ಆರ್ಗಾನಿಕ್ಎನ್ನುವ ಸಂಸ್ಥೆ ಪ್ರಾರಂಭಿಸಿದೆ.

ಸಂಸ್ಥೆಯ ಮುಖ್ಯಸ್ಥ ಟಿ. ಎಂ. ಮಲ್ಲೇಶ್ಅವರು ಮೂಲತಃ ಸಾಪ್ಟ್ವೇರ್ಇಂಜನಿಯರ್‌. ಎನಾದರೂ ಸಾಧನೆ ಮಾಡುವ ತುಮುಲದಿಂದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ನಂಜನಗೂಡು ಸಮೀಪ ಬಾಳೆ ತೋಟ ಮಾಡಿಕೊಂಡರು. ಸಂದರ್ಭದಲ್ಲಿ ಅವರಿಗೆ ಬಂದ ಆಲೋಚನೆಯೇ ಟೆರೆಸ್ಗಾರ್ಡನ್‌. ಮಣ್ಣು ಮತ್ತು ಕುಂಡದಿಂದ ಟೆರೆಸ್ಗೆ ಭಾರವಾಗಬಹುದೆಂದು ತಿಳಿದು ಅದನ್ನು ಬಹಳ ಕಡಿಮೆ ತೂಕ ಬರುವಂತಹ ವಸ್ತುಗಳನ್ನು ಬಳಸಿ ಮಾಡಲು ಪ್ರಾರಂಭಿಸಿದರು. ಅದು ಹೇಗೆ?

ಟರೆಸ್ಗಾರ್ಡನ್ಹೀಗಿರುತ್ತದೆ: ನೇರವಾಗಿ ಟೆರೆಸ್ಮೇಲೆ ಯಾವುದನ್ನೂ ಬೆಳೆಯುವ ಕ್ರಮ ಇಲ್ಲಿಲ್ಲ. ಒಂದು ಅಡಿ ಎತ್ತರ ಮತ್ತು ನಾಲ್ಕು x ನಾಲ್ಕು ಅಡಿ ಅಗಲದ ಕಡಿಮೆ ತೂಕದ ಮರದ ಬಾಕ್ಸ್ಗೆ ಪ್ಲಾಸ್ಟಿಕ್ನ್ನು ಮುಚ್ಚುತ್ತಾರೆ. ನಂತರ ಮಣ್ಣಿನ ಬದಲು ತೆಂಗಿನ ನಾರಿನ ಪುಡಿ ( ಕೊಕೊ ಪಿಟ್‌) ಬಳಸಲಾಗುತ್ತದೆ. ಇದರಲ್ಲಿ ತರಕಾರಿಯನ್ನು ಬೆಳೆಸಲಾಗುತ್ತದೆ.

ಒಂದು ಬಾಕ್ಸ್‌ 16 ಚದರ ಅಡಿ ಇರುತ್ತದೆ. ಇದರಲ್ಲಿ ಒಂದು ಚದರ ಅಡಿಯಲ್ಲಿ ಒಂದೊಂದು ಬಗೆಯ ತರಕಾರಿಯನ್ನು ಬೆಳೆಸಲಾಗುತ್ತದೆ. ಇದನ್ನು ತುಂಬಾ ಯೋಜನಾ ಬದ್ದವಾಗಿ ಮಾಡಲಾಗುತ್ತದೆ. ಟೆರಸ್ಗಾರ್ಡನ್ಮಾಡುವವರು ತಮಗೆ ಬೇಕಾದ ತರಕಾರಿಯ ಪಟ್ಟಿಯನ್ನು ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೇಕಾದ ತರಕಾರಿಗಳನ್ನು ನಾಟಿಮಾಡಲಾಗುತ್ತದೆ.

ಪದ್ಧತಿಯಲ್ಲಿ ಕೃಷಿ ಮಾಡುವಾಗ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡಲಾಗುವುದಿಲ್ಲ. ಸಂಪೂರ್ಣ ಸಾವಯವ ಪದ್ದತಿ. ಟ್ರೈಕೋಡರ್ಮಾ, ನಿಮ್ಕೇಕ್‌, ಹೊಂಗೆ ಹಿಂಡಿ, ಕಡ್ಲೆಕಾಯಿ ಹಿಂಡಿಯನ್ನು ಪೋಷಕಾಂಶಗಳಾಗಿ ಬಳಸುತ್ತಾರೆ. ತರಕಾರಿ ಬೆಳೆಗೆ ರೋಗ ಮತ್ತು ಕೀಟ ಬಂದರೆ ಬೆಳ್ಳುಳ್ಳಿ ರಸ, ಮೆಣಸಿನ ರಸವನ್ನು ಬಳಸಿ ನಿಯಂತ್ರಣಕ್ಕೆ ತರುತ್ತಾರೆ. ರೋಗ ನಿಯಂತ್ರಕ್ಕೆ ಬರದಿದ್ದರೆ ರೋಗ ಬಂದ ಗಿಡವನ್ನು ಕಿತ್ತು ಹಾಕಿ, ಅಲ್ಲಿ ಬೇರೆ ಗಿಡ ನಾಟಿ ಮಾಡಲಾಗುತ್ತದೆ. ನೀರಾವರಿಗಾಗಿ ಇನರ್ಡ್ರಿಫ್ವ್ಯವಸ್ಥೆಯನ್ನು ಮಾಡಿದ್ದಾರೆ. ಹೆಚ್ಚಿಗೆ ನೀರು ವ್ಯಯವಾಗುವುದಿಲ್ಲ. ಬೆಳಗಿನ ಅವಧಿಯಲ್ಲಿ ನೀರು ಬಿಡಬೇಕಾಗುತ್ತದೆ. ಹೀಗೆ ಮಾಡಿದಾಗ ತೇವಾಂಶ ಉಳಿಯುತ್ತದೆ.

ಟೆರೆಸ್ತರಕಾರಿ ತೋಟದಲ್ಲಿ ನಾಟಿ ಮಾಡಿದ 30 ದಿನಗಳಲ್ಲಿ ತರಕಾರಿ ಕೊಯ್ಲಿಗೆ ಬರುತ್ತದೆ. ಅಡುಗೆಗೆ ಫ್ರೆಶ್ತರಕಾರಿ ನಿತ್ಯವೂ ಸಿಗುವುದು ಟೆರೆಸ್ಗಾರ್ಡನ್ ವೈಶಿಷ್ಟ್ಯ.

ಶುದ್ಧ ಮತ್ತು ಫ್ರೆಶ್ತರಕಾರಿಯನ್ನು ನೇರವಾಗಿ ಅಡುಗೆ ಮನೆಗೆ ನೀಡಬೇಕು ಎನ್ನುವ ಕನಸನ್ನು ಕಂಡೆ. ಅದನ್ನು ರೀತಿಯಲ್ಲಿ ಸಾಕಾರ ಗೊಳಿಸುವ ಯತ್ನವನ್ನು ಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ಬಹಳಷ್ಟು ಜನ ಟೆರೆಸ್ಕಿಚನ್ಗಾರ್ಡನ್ಬಗ್ಗೆ ಆಸಕ್ತಿನ್ನು ತೋರಿಸಿದ್ದಾರೆ. ಕೆಲವರು ತಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡುತ್ತಿದ್ದಾರೆಎಂದು ಮಲ್ಲೇಶ್ಅವರು ಹೇಳುತ್ತಾರೆ.

ಈಗಾಗಲೇ ಟೆರೆಸ್ಕಿಚನ್ಗಾರ್ಡನ್ಮಾಡುತ್ತಿರುವ ಮುರುಗವೇಲ್ಅವರು `ಇದೊಂದು ಅನುಕೂಲಕರ ಕೃಷಿ. ನನಗೆ ಹಸಿರ ಮೇಲೆ ಪ್ರೀತಿ ಇತ್ತು. ಇಂತಹ ಕಾನ್ಸೆಪ್ಟ್ ತಿಳಿದಾಗ ನಾನು ನಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡಿಕೊಂಡೆ. ತುಂಬಾ ಉಪಯೋಗವಿದೆ.ದಿನಾಲೂ ಫ್ರೆಶ್ತರಕಾರಿ ಸಿಗುತ್ತದೆ ಎನ್ನುತ್ತಾರೆ. ವಿಜಯಾ ಅವರು ಟೆರೆಸ್ಗಾರ್ಡನ್ಮಾಡಿಕೊಂಡು ತರಕಾರಿಯನ್ನು ನಿತ್ಯ ಬಳಸುತ್ತಿದ್ದಾರೆ.

ಅಂದ ಹಾಗೆ ಟೆರೇಸ್ಗಾರ್ಡನ್ಅನ್ನು 30 ಚದರ್ಅಡಿಯಿಂದ 80 ಚದರ ಅಡಿಯವರೆಗೆ ಮಾಡುತ್ತಿದ್ದಾರೆ. 80 ಚದರ ಅಡಿ ಕಿಚನ್ಗಾರ್ಡನ್ಮಾಡಲು 20. 000 ರೂಪಾಯಿ ವೆಚ್ಚ ತಗಲುತ್ತದೆ. 15 ದಿನಕ್ಕೊಮ್ಮೆ ಕಂಪನಿಯಿಂದ ಹೋಗಿ ತರಕಾರಿ ಗಿಡಗಳ ದೇಖರೇಖು ನೋಡಿಕೊಂಡು ಬರುತ್ತಾರೆ. ಟೆರೆಸ್ಗಾರ್ಡನ್ನಗರದಲ್ಲಿ ಒಂದು ಹೊಸ ಬೆಳವಣಿಗೆ ಇದರ ಬಗ್ಗೆ ಮಾಹಿತಿಗಾಗಿ: ಟಿ. ಎಂ. ಮಲ್ಲೇಶ್‌ 9972322922


-ನಾಗರಾಜ ಮತ್ತಿಗಾರ