Tuesday, July 28, 2009

ಇದು ಅಧಿಕ ಸ್ಥಿತ್ಯಂತರ ಕೃಷಿ





ಕೃಷಿ­ಯಲ್ಲಿ ಬದ­ಲಾ­ವ­ಣೆ­ಗಳು ಹೊಸ­ತಲ್ಲ. ಹೆಚ್ಚಿನ ಇಳು­ವ­ರಿ­ಗಾಗಿ ಕೃಷಿ­ಕರು ಹೊಸ ಹೊಸ ಮಾರ್ಗ­ಗ­ಳನ್ನು ಅನು­ಸ­ರಿ­ಸು­ತ್ತಿ­ದ್ದಾರೆ. ಹಲ­ವರು ವಿವಿಧ ರೀತಿಯ ಪೋಷ­ಕಾಂ­ಶ­ಗ­ಳನ್ನು ನೀಡಿ ಹೆಚ್ಚಿಗೆ ಇಳು­ವರಿ ಪಡೆ­ದರೆ ಮತ್ತೆ ಕೆಲ­ವರು ನಾಟಿ ವಿಧಾ­ನ­ವನ್ನು ಬದ­ಲಿಸಿ ಇಳು­ವರಿ ಹೆಚ್ಚಿಗೆ ಪಡೆ­ಯಲು ಯತ್ನಿಸಿ ಯಶ­ಸ್ವಿ­ಯಾ­ಗಿ­ದ್ದಾರೆ.
ಬನ­ವಾ­ಸಿಯ ಪ್ರಗ­ತಿ­ಪರ ಕೃಷಿಕ ಅಬ್ದುಲ್‌ ರವೂಫ್‌ ಶೇಖ್‌ ಅವರು ಬಾಳೆ­ಯಲ್ಲಿ ಅಧಿಕ ಸ್ಥಿತ್ಯಂ­ತರ ನಾಟಿ ವಿಧಾನ (ಒ­ತ್ತೊ­ತ್ತಾಗಿ ಸಸಿ ನೆಡುವ ಕ್ರಮ)ವನ್ನು ಅಳ­ವ­ಡಿಸಿ ಯಶ­ಸ್ವಿ­ಯಾ­ಗಿ­ದ್ದಾರೆ. ಬಹು­ವಾ­ರ್ಷಿಕ ಬೆಳೆ­ಯಾದ ಮಾವಿ­ನಲ್ಲಿ ಕಡಿಮೆ ಅಂತ­ರದ ನಾಟಿ ಪದ್ದ­ತಿ­ಯಲ್ಲಿ ಕೃಷಿ ಮಾಡಿ­ದ­ವ­ರಿಲ್ಲ. ಆದರೆ ಜಲ­ಗಾಂ­ವ್‌ನ ಜೈನ್‌ ಇರಿ­ಗೇ­ಷನ್‌ ಕಂಪ­ನಿ­ಯ­ವರು ಮಾವಿ­ನಲ್ಲಿ ಒತ್ತೊ­ತ್ತಾಗಿ ಸಸಿ ನೆಡುವ ಪದ್ಧತಿ ಅಳ­ವ­ಡಿಸಿ ಯಶ­ಸ್ವಿ­ಯಾ­ಗಿ­ದ್ದಾರೆ.
ಕಡಿಮೆ ಅಂತ­ರದ ನಾಟಿ ಪದ್ದತಿ
ಕಡಿಮೆ ಜಾಗ­ದಲ್ಲಿ ಹೆಚ್ಚಿಗೆ ಗಿಡ­ಗ­ಳನ್ನು ನಾಟಿ ಮಾಡುವ ವಿಧಾ­ನವೇ ಅಧಿಕ ಸ್ಥಿತ್ಯಂ­ತರ ಕೃಷಿ ಪದ್ದತಿ. ಇದಕ್ಕೆ ಅಧಿಕ ಸಾಂದ್ರತೆ ಕೃಷಿ ಎಂಬ ಹೆಸರೂ ಇದೆ. ಗಿಡ­ದಿಂದ ಗಿಡದ ಅಂತರ ಕಡಿಮೆ ಇರು­ತ್ತದೆ. ಸಾಲಿ­ನಿಂದ ಸಾಲಿನ ಅಂತ­ರವೂ ಕಡಿಮೆ. ಕಡಿಮೆ ಅಂತ­ರ­ದಲ್ಲಿ ಹೆಚ್ಚು ಸಸಿ­ಗ­ಳನ್ನು ನಾಟಿ ಮಾಡುವ ಕ್ರಮವೇ ಅಧಿಕ ಸ್ಥಿತ್ಯಂ­ತರ ಕೃಷಿ ಪದ್ದತಿ. ಜೈನ್‌ ಇರಿ­ಗೇ­ಷನ್‌ ಕಂಪನಿ 1996 ರಿಂದಲೇ ಒತ್ತೊ­ತ್ತಾಗಿ ಸಸಿ ನೆಡುವ ಪದ್ದ­ತಿ­ಯನ್ನು ಮಾವಿನ ಬೆಳೆ­ಯಲ್ಲಿ ಅಳ­ವ­ಡಿ­ಸಿ­ಕೊಂ­ಡಿದೆ.
ಸಾಮಾನ್ಯ ಮಾವಿನ ತೋಟ­ಗ­ಳಲ್ಲಿ 9 ಮೀಟರ್‌ ಅಂತ­ರ­ದಲ್ಲಿ ಮಾವಿನ ಗಿಡ­ಗ­ಳನ್ನು ನಾಟಿ ಮಾಡಿ­ರು­ತ್ತಾರೆ. ಹೀಗೆ ನಾಟಿ ಮಾಡಿದ ತೋಟ­ಗ­ಳಲ್ಲಿ ಒಂದು ಎಕ­ರೆ­ಯಲ್ಲಿ 55ರಿಂದ 60 ಗಿಡ­ಗಳು ಮಾತ್ರ ಇರು­ತ್ತವೆ. ಹೆಚ್ಚಿಗೆ ಮಾವಿನ ಗಿಡ­ಗ­ಳನ್ನು ನಾಟಿ ಮಾಡುವ ಸಲು­ವಾಗಿ ಜೈನ್‌ ಇರಿ­ಗೇ­ಷನ್‌ ಅವರು ಮೊದಲ ಹಂತ­ದಲ್ಲಿ 4.5 ಮೀಟರ್‌ ಅಂತ­ರ­ದಲ್ಲಿ ಮಾವಿನ ಸಸಿ­ಗ­ಳನ್ನು ನಾಟಿ ಮಾಡಿ­ದರು. ಈ ಹಂತ­ದಲ್ಲಿ ಎಕ­ರೆಗೆ 200 ಸಸಿ­ಗ­ಳನ್ನು ನಾಟಿ ಮಾಡಲು ಸಾಧ್ಯ­ವಾ­ಯಿತು. ಇದರ ನಂತರ 3X2 ಮೀಟರ್‌ ಅಂತ­ರ­ದಲ್ಲಿ ಸಸಿ­ಗ­ಳನ್ನು ನಾಟಿ ಮಾಡಿ­ದ್ದಾರೆ. ಈ ಪದ್ದ­ತಿ­ಯಲ್ಲಿ ಎಕ­ರೆಗೆ 1309 ಸಸಿ­ಗ­ಳನ್ನು ನಾಟಿ ಮಾಡಿ­ದ್ದಾರೆ. ಮೂರನೆ ಹಂತದ ನಾಟಿ­ಯಲ್ಲಿ 3X2 ಮೀಟರ್‌ ಅಂತ­ರ­ದಲ್ಲಿ ಸಸಿ­ಗ­ಳನ್ನು ನಾಟಿ ಮಾಡಿ­ದ್ದಾರೆ. ಈ ಅಂತ­ರ­ದಲ್ಲಿ ನಾಟಿ ಮಾಡಿ­ದಾಗ ಎಕ­ರೆ­ಯಲ್ಲಿ 2976 ಸಸಿ­ಗ­ಳನ್ನು ನಾಟಿ ಮಾಡಿ­ದ್ದಾರೆ.
ಒತ್ತೊ­ತ್ತಾಗಿ ನಾಟಿ ಮಾಡಿ­ದಾಗ ಸಸಿ­ಗ­ಳನ್ನು ಪೋಷಿ­ಸಲು ಹಲ­ವಾರು ರೀತಿಯ ಕ್ರಮ ಬದ್ಧ­ವಾದ ಕೃಷಿ ಮಾಡ­ಬೇ­ಕಾ­ಗು­ತ್ತದೆ. ಸಸಿ­ಗಳ ಗೆಲ್ಲು­ಗಳ ಕಟಾವು (ಪ್ರೂ­ನಿಂಗ್‌), ಚಿಗುರು ಚಿವು­ಟು­ವುದು( ಪಿಂಚಿಂಗ್‌), ಈ ಕೃಷಿ­ಯಲ್ಲಿ ಮುಖ್ಯ­ವಾಗಿ ಅಳ­ವ­ಡಿ­ಸಿ­ಕೊ­ಳ್ಳ­ಬೇ­ಕಾದ ಕ್ರಮ.
ಸಸಿ­ಗಳು ಹತ್ತಿ­ರ­ದಲ್ಲಿ ಇರು­ವು­ದ­ರಿಂದ ಸೊಂಟ­ದಷ್ಟು( ಸುಮಾರು 45 ಸಿ ಎಂ) ಎತ್ತ­ರಕ್ಕೆ ಬೆಳೆದ ನಂತರ ಬೇಡ­ವಾದ ಗೆಲ್ಲು­ಗ­ಳನ್ನು ಕಟಾವು ಮಾಡ­ಬೇಕು. ಹಾಗೇಯೆ ಬೇಡದ ಚಿಗು­ರು­ಗ­ಳನ್ನು ಚಿವುಟಿ ಹಾಕ­ಬೇಕು. ಈ ರೀತಿ ಮಾಡು­ವು­ದ­ರಿಂದ ಮಾವಿನ ಗಿಡ ಛತ್ರಿ­ಯಾ­ಕಾ­ರ­ದಲ್ಲಿ ಬೆಳೆ­ಯು­ತ್ತದೆ. ಹೀಗೆ ಗಿಡ­ಗಳು ಬೆಳೆ­ದರೆ ಸೂರ್ಯನ ಬೆಳಕು ಹೆಚ್ಚು ಬಿದ್ದು ಗಿಡದ ಬೆಳ­ವ­ಣಿ­ಗೆಗೆ ಸಹ­ಕಾ­ರಿ­ಯಾ­ಗು­ತ್ತದೆ.
ಕಡಿಮೆ ಅಂತ­ರ­ದಲ್ಲಿ ಸಸಿ­ಗ­ಳನ್ನು ನಾಟಿ ಮಾಡಿ­ದಾಗ ರೋಗ ಇರುವ ಗೆಲ್ಲು­ಗ­ಳನ್ನು ಕಟಾವು ಮಾಡ­ಬೇ­ಕಾ­ಗು­ತ್ತದೆ. ಹಾಗೆಯೇ ಗಿಡ­ಗಳು ಬೆಳೆದು ಫಸಲು ಬಂದ ನಂತರ ಎರಡು ಮೂರು ಬೆಳೆ ಬಂದ ಗೆಲ್ಲು­ಗ­ಳನ್ನು ಕತ್ತ­ರಿ­ಸ­ಬೇಕು. ಅನ­ವ­ಶ್ಯ­ಕ­ವಾಗಿ ಬೆಳೆ­ಯುವ ಗೆಲ್ಲು­ಗ­ಳನ್ನು ಕತ್ತ­ರಿ­ಸಿ­ದಾಗ ಸಮೃ­ದ್ಧ­ವಾ­ಗಿ­ರುವ ಗೆಲ್ಲು­ಗ­ಳಿಗೆ ಹೆಚ್ಚಿಗೆ ಪೋಷ­ಕಾಂಶ ದೊರೆತು ಹೆಚ್ಚಿನ ಫಸಲು ಬರಲು ಸಾಧ್ಯ­ವಾ­ಗು­ತ್ತದೆ.
`ವಾ­ಣಿ­ಜ್ಯಿಕ ದೃಷ್ಟಿ­ಯಿಂದ ಮಾವಿನ ಕೃಷಿ ಮಾಡು­ವ­ವ­ರಿಗೆ ಈ ಪದ್ಧತಿ ಕೃಷಿ ಬಹಳ ಉತ್ತಮ. ಆದಾಯ ಹೆಚ್ಚಿಗೆ ಬರು­ತ್ತದೆ. ಈ ಪದ್ಧ­ತಿ­ಯಲ್ಲಿ ಕೃಷಿ ಮಾಡಿ­ದಾಗ ಪ್ರೂನಿಂಗ್‌ ಸದಾ ಮಾಡು­ವು­ದ­ರಿಂದ ಮಾವಿನ ಮರ ಬಹಳ ಎತ್ತರ ಬೆಳೆ­ಯು­ವು­ದಿಲ್ಲ. ದೊಡ್ಡ ಮರಕ್ಕೆ ಬೇಕಾ­ಗು­ವಷ್ಟು ಪೋಷ­ಕಾಂಶ ಇದಕ್ಕೆ ಅಗ­ತ್ಯ­ವಿಲ್ಲ. ಸಾಮಾ­ನ್ಯ­ವಾಗಿ ಮಾವು ವರ್ಷ ಬಿಟ್ಟು ವರ್ಷ ಫಸಲು ನೀಡು­ತ್ತದೆ. ಆದರೆ ಗಿಡ­ಗಳ ನಡು­ವಿನ ಅಂತರ ಕಡಿ­ಮೆ­ಯಾ­ದಾಗ ಪ್ರತಿ ವರ್ಷವೂ ಫಸಲು ಸಿಗು­ತ್ತದೆ. ಈ ಕಾರ­ಣ­ದಿಂದ ಇದು ಮಾವು ಬೆಳೆಗೆ ಉತ್ತಮ ಪದ್ದತಿ' ಎನ್ನು­ತ್ತಾರೆ ಜೈನ್‌ ಕಂಪ­ನಿಯ ಕರ್ನಾ­ಟಕ ಉಪ ವ್ಯವ­ಸ್ಥಾ­ಪಕ ಚಿದಂ­ಬರ ಜೋಶಿ.
ಜೈನ್‌ ಕಂಪ­ನಿ­ಯ­ವರು ಮಾವಿ­ನಲ್ಲಿ ಅಧಿಕ ಸ್ಥಿತ್ಯಂ­ತರ ನಾಟಿ ಪದ್ದ­ತಿ­ಯಲ್ಲಿ ಜಲ­ಗಾಂವ್‌, ಕೊಯಿ­ಮ­ತ್ತೂ­ರಿ­ನಲ್ಲಿ ಪ್ರಯೋಗ ಮಾಡಿ ಯಶ­ಸ್ವಿ­ಯಾ­ಗಿ­ದ್ದಾರೆ. ಸಾಮಾನ್ಯ ಅಂತ­ರ­ದಲ್ಲಿ ನಾಟಿ ಮಾಡಿ ಫಸ­ಲನ್ನು ಪಡೆ­ಯುವ ತೋಟದ ಆದಾ­ಯ­ಕ್ಕಿಂತ ಅಧಿಕ ಸ್ಥಿತ್ಯಂ­ತರ ನಾಟಿ ಪದ್ದ­ತಿ­ಯಲ್ಲಿ ಬೆಳೆ­ದರೆ ದುಪ್ಪಟ್ಟು ಆದಾ­ಯ­ವನ್ನು ಪಡೆ­ಯ­ಬ­ಹುದು. ಇಳು­ವ­ರಿ­ಯಲ್ಲೂ ವ್ಯತ್ಯಾಸ ಆಗ­ದಿ­ರು­ವುದು ಪ್ರಯೋ­ಗ­ದಿಂದ ತಿಳಿದು ಬಂದಿದೆ.
ಮಾಹಿ­ತಿ­ಗಾಗಿ: ಚಿದಂ­ಬರ ಜೋಶಿ: 9448286508

ನಾಗರಾಜ ಮತ್ತಿಗಾರ

ಇವರ ವಿಭಿನ್ನ ಲೇಖನ ನೋಡಲು

http://tandacool.blogspot.com/

http://oddola.blogspot.com/

Sunday, July 5, 2009

ಸಾವಯವ ರಸಾವರಿ



ಕೆಲಸಗಾರರ ಅಭಾವದ ಕಾಲದಲ್ಲಿ ಅನಿವಾರ್ಯ ವ್ಯವಸ್ಥೆ

ಬೇಸಾಯಕ್ಕೆ ಪೋಷಕಾಂಶಗಳು ಅತಿ ಅಗತ್ಯ. ಅದರಲ್ಲೂ ಸಾವಯವ ಕೃಷಿ ಮಾಡುವವರಿಗೆ ಹಟ್ಟಿಗೊಬ್ಬರ ಬೇಕೆ ಬೇಕು. ಇದನ್ನು ಒಂದು ಕಡೆ ತಯಾರಿಸಿ ಬೆಳೆಗಳಿಗೆ ಹಾಕುವುದು ದೊಡ್ಡ ಕೆಲಸವೇ ಸರಿ. ಪ್ರತಿ ವರ್ಷ ಹಟ್ಟಿಗೊಬ್ಬರವನ್ನು ಗುಂಡಿಯಿಂದ ತೆಗೆದು ಬೆಳೆಗಳಿಗೆ ನೀಡುವಾಗ ಕೃಷಿಕ ಸೋತು ಹೋಗುತ್ತಾನೆ. ಕೆಲಸದವರು ಸಿಗದೇ ಗೊಬ್ಬರ ಗುಂಡಿಯಲ್ಲಿಯೇ ಉಳಿಯುವ ಸಾಧ್ಯತೆಯೂ ಇದೆ. ಅದಕ್ಕಾಗಿಯೇ ಪ್ರಯೋಗಶೀಲ ರೈತ ಸುಲಭ ಉಪಾಯಗಳನ್ನು ಕಂಡು ಕೊಳ್ಳುತ್ತಿದ್ದಾನೆ. ಅದರಲ್ಲಿ ರಸಾವರಿಯು ಒಂದು.
ರಸಾವರಿ: ಇದರ ಕಲ್ಪನೆ ಮೊದಲು ಬಂದಿದ್ದು ರಾಸಾಯನಿಕ ಗೊಬ್ಬರಗಳನ್ನು ನೇರವಾಗಿ ಹನಿನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ದ್ರವರೂಪದಲ್ಲಿ ನೀಡ ತೊಡಗಿದಾಗ. ಸಾವಯವ ಕೃಷಿಕರಿಗೆ ರಸಾವರಿ ಎಂಬುದನ್ನು ಮಾಡಲಿಕ್ಕೆ ಬರುತ್ತದೆ ಎಂದು ಗೊತ್ತಾಗಿದ್ದೆ ಸುಮಾರು ಹತ್ತು ವರ್ಷಗಳ ಹಿಂದೆ. ಕೆಲಸಗಾರರ ತೊಂದರೆಯನ್ನು ಅನುಭವಿಸುತ್ತಿರುವ ಬೆರಳೆಣಿಕೆಯ ಮಂದಿ ರಸಾವರಿಯ ಪ್ರಯೋಗಕ್ಕೆ ಇಳಿದರು.
ರಸಾವರಿ ತೊಟ್ಟಿ ನಿರ್ಮಾಣ: ಸಾವಯವ ರಸಾವರಿ ತಯಾರಿಕೆ ಬಹಳ ಸುಲಭ. ಆದರೆ ತಯಾರಿಕಾ ತೊಟ್ಟಿ ನಿರ್ಮಾಣ ಅಷ್ಟು ಸುಲಭವಲ್ಲ. ವ್ಯವಸ್ಥಿತವಾದ ರೀತಿಯಲ್ಲಿ ತೊಟ್ಟಯನ್ನು ನಿರ್ಮಿಸುವುದು ಖರ್ಚಿನ ಬಾಬ್ತು. ಆದರೆ ಒಮ್ಮೆ ರಸಾವರಿ ತೊಟ್ಟಿಯನ್ನು ನಿರ್ಮಿಸಿಕೊಂಡರೆ ಶಾಶ್ವತವಾದ ಕೆಲಸವನ್ನು ಮಾಡಿಕೊಂಡಂತೆ ಆಗುತ್ತದೆ. ರಸಾವರಿ ತೊಟ್ಟಿಯನ್ನು ಸುಲಭವಾಗಿ ಕಟ್ಟಿಕೊಳ್ಳಲು ಬರುತ್ತದೆ.
ಕಡಿಮೆ ಖರ್ಚಿನ ರಸಾವರಿ ತೊಟ್ಟಿ: ಇಪ್ಪತ್ತು ಅಡಿ ಉದ್ದ, ಹತ್ತು ಅಡಿ ಅಗಲ, ಐದು ಅಡಿ ಎತ್ತರದ (ಅನುಕೂಲಕ್ಕೆ ತಕ್ಕ ಅಳತೆಯಲ್ಲಿ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು) ತೊಟ್ಟಿ ನಿರ್ಮಿಸಬೇಕು. ಈ ತೊಟ್ಟಿಯ ತಳಭಾಗ ಇಳಿಜಾರು ಇರಬೇಕು. ಇದಕ್ಕೆ ಸೋಸುವಿಕೆಯ(ಫಿಲ್ಟರ್‌) ವ್ಯವಸ್ಥೆ ಮಾಡಬೇಕಾಗುತ್ತದೆ. ತಳಭಾಗದಿಂದ ಒಂದು ಅಡಿ ಎತ್ತರಕ್ಕೆ ಅಡಿಕೆ ದಬ್ಬೆ ಅಥವಾ ಮರದ ಗಳ(ಪೋಲ್ಸ್‌) ಜೋಡಿಸಿ ಅಟ್ಲು(ಅಟ್ಟ) ಮಾಡಬೇಕು. ಇದರ ಕೆಳಗೆ ಇರುವ ಇಳಿಜಾರಿನ ಬುಡದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಬೇಕು. ಇದರ ಕೆಳಗೆ ಒಂದು ಅಥವಾ ಮುಕ್ಕಾಲು ಇಂಚಿನ ಪೈಪ್‌ನ್ನು ತೊಟ್ಟಿಯ ಹೊರಗಡೆ ಬರುವಂತೆ ಅಳವಡಿಸಬೇಕು. ಈ ಪೈಪ್‌ ಇರುವ ಜಾಗದಲ್ಲಿ ಒಂದು ಸಣ್ಣ ತೊಟ್ಟಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇದು ಕಡಿಮೆ ಖರ್ಚಿನ ರಸಾವರಿ ತೊಟ್ಟಿ.
ಹೈಟೆಕ್‌ ತೊಟ್ಟಿ: ಈ ತೊಟ್ಟಿಯ ಅಗಲ ಮತ್ತು ಉದ್ದ ದೊಡ್ಡದಾಗಿರುತ್ತದೆ. ಸೋಸುವಿಕೆ(ಫಿಲ್ಟರ್‌)ಗೆ ಪೈಪ್‌ಗಳನ್ನು ಹೋಲ್‌ ಮಾಡಿ ಕೆಳಗಡೆ ಬಳಸುತ್ತಾರೆ. ರಸಾವರಿ ಸಂಗ್ರಹಣೆ ತೊಟ್ಟಿ ದೊಡ್ಡದಾಗಿರುತ್ತದೆ. ತೊಟ್ಟಿ ತಯಾರಿಸುವುದು ಉಳಿದಂತೆ ಖಡಿಮೆ ಖರ್ಚಿನ ತೊಟ್ಟಿ ನಿರ್ಮಿಸಿದ ಮಾದರಿಯಲ್ಲಿಯೇ ಇದು ಇರುತ್ತದೆ. ರಸಾವರಿ ತೊಟ್ಟಿಯನ್ನು ನಿರ್ಮಿಸುವಾಗ ಗಮನದಲ್ಲಿಡಬೇಕಾದ ಅಂಶವೆಂದರೆ ಜೈವಿಕ ಗ್ಯಾಸ್‌ ಪ್ಲಾಂಟ್‌ ಹತ್ತಿರವಿದ್ದರೆ ಉತ್ತಮ.
ರಸಾವರಿ ತಯಾರಿಕೆ: ರಸಾವರಿ ತೊಟ್ಟಿಯ ಒಳಗಡೆ ಮಾಡಿದ ಅಟ್ಟದ ಮೇಲೆ ಸೊಪ್ಪು, ಎಲೆ, ತರಗೆಲೆ (ದರಕು) ಇತರೆ ಸತ್ವಯುತ ಕಚ್ಚಾ ವಸ್ತುಗಳನ್ನು ಹಾಕಬೇಕು. ಅದರ ಮೇಲ್ಗಡೆ ನೀರನ್ನು ಮಿಶ್ರಣಮಾಡಿ ತೆಳ್ಳಗೆ ಮಾಡಿದ ಸೆಗಣಿ ರಾಡಿಯನ್ನು ಬಿಡಬೇಕು. ಇದರಿಂದ ಕಚ್ಚಾವಸ್ತು ಬೇಗನೆ ಕೊಳೆಯುತ್ತದೆ. ನಂತರ ಪುನಃ ತೆಳ್ಳಗೆ ಮಾಡಿದ ರಾಡಿಯನ್ನು ಚೆಲ್ಲಬೇಕು. ಕೆಲವೇ ದಿನಗಳಲ್ಲಿ ಕಚ್ವಾ ವಸ್ತುಗಳು ಕೊಳೆತು ಅದರ ರಸ ಕೆಳಗಡೆ ಇಳಿಯುತ್ತದೆ. ಜಲ್ಲಿ ಕಲ್ಲುಗಳ ನಡುವೆ ಗೊಬ್ಬರದ ರಸ ಸೋಸಿ ಬರುತ್ತದೆ. ಹೀಗೆ ಬಂದ ರಸವನ್ನು ಡಿಕಾಕ್ಷನ್‌ ಎನ್ನುತ್ತಾರೆ.
ರಸವನ್ನು ನೀರಾವರಿಗೆ: ರಸಾವರಿ ತೊಟ್ಟಿಯಿಂದ ಸೋಸಿ ಬಂದ ಡಿಕಾಕ್ಷನ್‌ ಮತ್ತೊಂದು ತೊಟ್ಟಿಯಲ್ಲಿ ಸಂಗ್ರಹವಾಗಿರುತ್ತದೆ. ಇದನ್ನು ಪಂಪ್‌ ಮೂಲಕ ಜಮೀನಿನಲ್ಲಿ ಅಳವಡಿಸಿದ ನೀರಾವರಿ ವ್ಯವಸ್ಥೆಗೆ ಹೋಗುವಂತೆ ಮಾಡಬೇಕು. ಡಿಕಾಕ್ಷನ್‌ ಟ್ಯಾಂಕ್‌ ಪುಟ್‌ವಾಲ್ವ ಸಹಿತ ಪೈಪ್‌ ಅಳವಡಿಸಬೇಕು. ತೊಟ್ಟಿಯಿಂದ ಸೋಸಿ ಬಂದ ಡಿಕಾಕ್ಷನ್‌ ಅನ್ನು ನೇರವಾಗಿ ಜಮೀನಿಗೆ ಹಾಯಿಸಬಾರದು. ಇದು ಕಠೋರವಾಗಿರುತ್ತದೆ. ಅದಕ್ಕಾಗಿ ಒಂದು ಲೀಟರ್‌ ಡಿಕಾಕ್ಷನ್‌ಗೆ ನಾಲ್ಕು ಲೀಟರ್‌ ನೀರಿನಂತೆ ಮಿಶ್ರಣ ಮಾಡಿ ನಂತರ ಗಿಡದ ಬುಡಕ್ಕೆ ಪೌಷ್ಠಿಕವಾದ ಗೊಬ್ಬರದ ರಸವನ್ನು ಹಾಯಿಸಬೇಕು.
ಒಂದು ಲಕ್ಷದ ಇಪ್ಪತ್ತೈದು ಸಾವಿರ ಖರ್ಚು ಮಾಡಿ ರಸಾವರಿ ವ್ಯವಸ್ಥೆಯನ್ನು ಉತ್ತರ ಕನ್ನಡ ಸಿದ್ದಾಪುರ ತಾಲೂಕಿನ ಹೊಸಗದ್ದೆ ರೈತ ಪಿ. ವಿ. ಹೆಗಡೆ ಅವರು ಮಾಡಿಕೊಂಡಿದ್ದಾರೆ. `ಪ್ರತಿ ವರ್ಷ ಗೊಬ್ಬರ ತೆಗೆಯುವ ಸಮಯದಲ್ಲಿ ಕೆಲಸಗಾರರಿಗಾಗಿ ಹುಡುಕಿ ಹುಡುಕಿ ಸುಸ್ತಾಗಿ ಹೋಗುತ್ತಿದ್ದೆವು. ಇಂದು ಗೊಬ್ಬರ ತೆಗೆದು ತೋಟಕ್ಕೆ ಹಾಕಬೇಕು ಎಂದು ನಿರ್ಧಾರ ಮಾಡಿದರೆ ಹದಿನೈದು ದಿನದ ನಂತರ ಆ ಕೆಲಸ ಮಾಡಬೇಕಾಗುತ್ತಿತ್ತು. ಈಗ ರಸಾವರಿ ತೊಟ್ಟಿಯನ್ನು ಮಾಡಿಕೊಂಡ ನಂತರ ಆ ಸಮಸ್ಯೆ ಇಲ್ಲ.
ಗೊಬ್ಬರ ಗುಂಡಿಗೆ ಹಾಕುವ ಕಚ್ಚಾ ಪದಾರ್ಥಗಳನ್ನು ಸ್ವಲ್ಪ ತೊಟ್ಟಿಗೆ ಹಾಕಿ ಉಳಿದವುಗಳನ್ನು ತೋಟಕ್ಕೆ ಹಾಕುತ್ತೇವೆ. ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು ಅಲ್ಲಿಯೇ ಕಡಿದು ಗಿಡಗಳ ಬುಡಕ್ಕೆ ಹಾಕುತ್ತೇವೆ. ಇರುವ ಐದು ಎಕರೆ ತೋಟವನ್ನು ಸಮನಾಗಿ ವಿಭಜಿಸಿಕೊಂಡು ವಾರಕ್ಕೆ ಒಂದು ಬಾರಿ ಒಂದೊಂದು ಭಾಗಕ್ಕೆ ತುಂತುರು ನೀರಾವರಿ ಮೂಲಕ ನೀಡುತ್ತಿದ್ದೇವೆ. ಈಗ ಜಮೀನಿನಲ್ಲಿ ಎರೆ ಹುಳುಗಳು ಕಾಣುತ್ತಿವೆ ಎನ್ನುತ್ತಾರೆ.
ಈ ರಸಾವರಿ ತೊಟ್ಟಿಯನ್ನು ಮಾಡಿಕೊಳ್ಳುವುದಕ್ಕೆ ತೋಟಗಾರಿಕಾ ಇಲಾಖೆಯಿಂದ ಮೂವತ್ತು ಸಾವಿರ ರೂಪಾಯಿ ಸಬ್ಸಿಡಿ ಸಿಕ್ಕಿದೆ. `ಕೆಲಸಗಾರರ ತತ್ವಾರದ ಈ ದಿನಗಳಲ್ಲಿ ಇಂತಹ ಸುಲಭ ಕೆಲಸಗಳನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ' ಎನ್ನುವುದು ಪ.ವಿ. ಹೆಗಡೆ ಅವರ ಅಭಿಪ್ರಾಯ.
ಕಡಿಮೆ ಖರ್ಚಿನ ರಸಾವರಿ ವ್ಯವಸ್ಥೆಯನ್ನು ಸುಮಾರು ಹತ್ತು ವರ್ಷಗಳ ಹಿಂದೆಯೇ ಮಾಡಿಕೊಂಡಿರುವ ಶಿವಮೊಗ್ಗ ಸೊರಬ ತಾಲೂಕಿನ ಕೆ.ವಿ. ಲಕ್ಷ್ಮೀನಾರಾಯಣ ಭಟ್ಟರ ಪ್ರಕಾರ `ರಸಾವರಿಯನ್ನು ಮಾಡಿಕೊಂಡ ನಂತರ ನಮ್ಮ ತೋಟದಲ್ಲಿ ಅಡಿಕೆ ಇಳುವರಿ ಹೆಚ್ಚಾಗಿದೆ. ಕೂಲಿಗಳ ಅಭಾವದ ಈ ಕಾಲದಲ್ಲಿ ಇದು ಎಲ್ಲರೂ ಅಳವಡಿಸಿ ಕೊಳ್ಳಬೇಕಾದ ವಿಧಾನ' ಎನ್ನುತ್ತಾರೆ.
ತೋಟಗಾರಿಕಾ ಇಲಾಖೆ ಅವರು ಸಹ ರಸಾವರಿ ವ್ಯವಸ್ಥೆಗೆ ಶೇ. 30 ಸಬ್ಸಿಡಿಯನ್ನು ನೀಡುತ್ತಿದ್ದಾರೆ. ರೈತರು ಆದಷ್ಟು ಸ್ವಾವಲಂಬಿಯಾಗಿ ತಮ್ಮ ತೋಟದ ಅಗತ್ಯದ ಕೆಲಸಗಳನ್ನು ಬೇರೆಯವರಿಗಾಗಿ ಕಾಯದೆ ನಿರ್ವಹಿಸಿದರೆ ಕೃಷಿ ಕಷ್ಟವಾಗುವುದಿಲ್ಲ.
ಮಾಹಿತಿಗಾಗಿ: ಪಿ.ವಿ. ಹೆಗಡೆ ಹೊಸಗದ್ದೆ
ಅಂಚೆ: ಸಂಪಗೋಡ
ಸಿದ್ದಾಪುರ- ಉತ್ತರ ಕನ್ನಡ

ಕೆ.ವಿ. ಲಕ್ಷ್ಮೀನಾರಾಯಣ ಭಟ್ಟ
ಮುಟಗುಪ್ಪೆ- ಅಂಚೆ
ಸೊರಬ, ಶಿವಮೊಗ್ಗ


ಸ್ಲರಿ ( ಸಗಣಿ ರಾಡಿ) ಪಂಪ್‌
ಜೈವಿಕ ಗ್ಯಾಸ್‌ ಪ್ಲಾಂಟ್‌ನಿಂದ ಹೊರಬೀಳುವ ರಾಡಿಯನ್ನು ಒಂದು ಟ್ಯಾಂಕ್‌ನಲ್ಲಿ ಶೇಖರಿಸಿಡಬೇಕು. ನಂತರ ರಸಾವರಿ ತೊಟ್ಟಿಯಲ್ಲಿ ಹಾಕಿದ ಕಚ್ಚಾವಸ್ತುಗಳ ಮೇಲೆ ಚುಮುಕಿಸ ಬೇಕಾಗುತ್ತದೆ. ರಾಡಿಯನ್ನು ಬಕೆಟ್‌ ಅಥವಾ ಕೊಡಪಾನದಿಂದ ಹಾಕಲಿಕ್ಕೆ ಹೋದರೆ ಸಮಯ ಮತ್ತು ಶ್ರಮ ಎರಡು ಹೆಚ್ಚಿಗೆ ಬೇಕಾಗುತ್ತದೆ. ಅದಕ್ಕಾಗಿ ಉತ್ತರಕನ್ನಡ ಸಿದ್ದಾಪುರದ ಹೊಸಗದ್ದೆ ಪ್ರವೀಣ್‌ ಅವರು ಸ್ಲರಿಯನ್ನು ರಸಾವರಿ ತೊಟ್ಟಿಗೆ ಹಾಯಿಸಲು ಸುಲಭವಾದ ಕೈ ಪಂಪ್‌ ಅನ್ನು ಅನುಶೋಧಿಸಿದ್ದಾರೆ.
ಪಿವಿಸಿ ಪೈಪ್‌ನ್ನು ಈ ಪಂಪ್‌ ತಯಾರಿಸಲು ಬಳಸಿ ಕೊಂಡಿದ್ದಾರೆ. ಗುಜರಿಯಲ್ಲಿ ದೊರೆಯುವ ಸಾಮಗ್ರಿಗಳನ್ನು ಇದರ ಯಂತ್ರಗಳು. ಇದು ಬೋರ್‌ವೆಲ್‌ ಕೈಪಂಪ್‌ನಂತೆ ಇದು ಕೆಲಸ ಮಾಡುತ್ತದೆ. ಈ ಪಂಪ್‌ ತಯಾರಿಸಲು ಇವರಿಗೆ ತಗಲಿದ ವೆಚ್ಚ ಸಾವಿರ ರೂಪಾಯಿ. ಹತ್ತು ಅಡಿ ಆಳದಿಂದ ಯಾವುದೇ ಸಮಸ್ಯೆ ಇಲ್ಲದೆ ಸ್ಲರಿಯನ್ನು ಎತ್ತಿ, 15 ಅಡಿ ಎತ್ತರದವರಗೆ ಸ್ಲರಿಯನ್ನು ಸಾಗಿಸುತ್ತದೆ.
ಸುಲಭ ವಿಧಾನದ ರಸಾವರಿ ಮಾಡುವವರಿಗೆ ಜೊತೆಯಲ್ಲಿ ಈ ಕೈ ಪಂಪ್‌ ಇದ್ದರೆ ಅನುಕೂಲ.
ಮಾಹಿತಿಗಾಗಿ: ಪ್ರವೀಣ್‌ ಹೊಸಗದ್ದೆ- 08389-248238